
ಫ್ರೆಂಚ್ ನಿಯಂತ್ರಣದಲ್ಲಿದ್ದ ಪಾಂಡಿಚೇರಿಯಲ್ಲಿ 10 ವರ್ಷಗಳ ಕಾಲ ಆಶ್ರಯ ಪಡೆದಿದ್ದ ಕವಿ ಸುಬ್ರಮಣ್ಯ ಭಾರತಿಯವರು ಬ್ರಿಟಿಷ್ ಆಳ್ವಿಕೆಯಲ್ಲಿ ಹಿಂದೂ ಸಮಾಜದಲ್ಲಿನ ಜಾತಿ ತಡೆಗೋಡೆಗಳನ್ನು ಒಡೆಯಲು ಕೆಲಸ ಮಾಡಿದದ ಮಹನೀಯರೂ ಹೌದು. 1908ರಲ್ಲಿ, ತಮ್ಮ ವಸಾಹತು ವಿರೋಧಿ ಬರಹಗಳಿಗಾಗಿ ಬ್ರಿಟಿಷರಿಂದ ಬಂಧನಕ್ಕೆ ಒಳಗಾಗಿ, ನಂತರ ಬ್ರಿಟಿಷ್ ಬಂಧನದಿಂದ ತಪ್ಪಿಸಿಕೊಂಡು ಪಾಂಡಿಚೇರಿಗೆ ಓಡಿಹೋದ ಇವರ ಕಥೆ ನಿಜಕ್ಕೂ ರೋಚಕ. 1882ರಲ್ಲಿ ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರು, ಹಣವಿಲ್ಲದೆ 165 ಕಿ.ಮೀ. ದೂರ ನಡೆದು ಪಾಂಡಿಚೇರಿಗೆ ಹೋಗಿ, ವಿ.ವಿ.ಎಸ್. ಐಯ್ಯರ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಸೇರಿಕೊಂಡು ಅಲ್ಲಿ ನಿಷೇಧಿತ ಪತ್ರಿಕೆಗಳನ್ನು ನಡೆಸಿ, ಸ್ವಾತಂತ್ರ್ಯದ ಬಗ್ಗೆ ಬರೆದವರು.
ಆದರೆ ಅವರು ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ. ಪಾಂಡಿಚೇರಿಯಲ್ಲಿ ಅವರ 10 ವರ್ಷಗಳು ಬಡತನದಿಂದ ಕಳೆದುಹೋದರೂ, ತನ್ನ ಕವಿತೆಗಳು ಮತ್ತು ಪತ್ರಿಕೆಗಳ ಮೂಲಕ ದೇಶಭಕ್ತಿಯನ್ನು ಉತ್ತೇಜಿಸುತ್ತಲೇ ಬಂದ ಅವರು ಸಮಾಜವನ್ನು ಪರಿವರ್ತಿಸುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು.
ಅವರ ಬಗೆಗಿನ ಆಸಕ್ತಿದಾಯಕ ಕಥೆಗಳಲ್ಲಿ ಒಂದು ಬೆಳಗಿನ ಜಾವ ಅವರು ವರಂಡಾದಲ್ಲಿ ಕುಳಿತಿದ್ದ ಕಥೆಯೂ ಒಂದು. ವೇದ ಮಂತ್ರಗಳು ಮತ್ತು ಅಗ್ನಿಯ ಹೊಗೆಯೊಂದಿಗೆ, ಭಾರತಿಯವರು ಯುವ ಕನಕಲಿಂಗಂಗೆ ಉಪನಯನ ನಡೆಸುತ್ತಿದ್ದರು, ಕನಕಲಿಂಗಂ ಬೇರೆ ಸಮುದಾಯದ ಹುಡುಗ. ನೋಡುಗರು ಆತನಿಗೆ ನಡೆಯುತ್ತಿರುವ ಉಪನಯನವನ್ನು ಆಘಾತದಿಂದ ನೋಡಿದರು, ಈ ಕವಿ ಸ್ವತಃ ಆ ಹುಡುಗನಿಗೆ ಪವಿತ್ರ ನೂಲನ್ನು ಕಟ್ಟಿ, ಉನ್ನತ ಜಾತಿಗಳಿಗೆ ಮಾತ್ರ ಮೀಸಲಾದ ಗಾಯತ್ರಿ ಮಂತ್ರವನ್ನು ಜಪಿಸಿ, ದೇವರ ಕಣ್ಣಲ್ಲಿ ಅವನನ್ನು ಸಮಾನನೆಂದು ಘೋಷಿಸಿಯೇ ಬಿಟ್ಟರು.
ಆದರೆ ಭಾರತಿ ತನ್ನ ನಂಬಿಕೆಯನ್ನು ಎಲ್ಲರ ಮುಂದೆ ಸ್ಪಷ್ಟವಾಗಿಯೇ ವಿವರಿಸಿ ಬಿಟ್ಟರು. ಎಲ್ಲಾ ಮಾನವರಲ್ಲೂ ದೈವಿಕ ಸನ್ನಿಧಾನವಿದೆ, ಆದ್ದರಿಂದ ಪವಿತ್ರ ಸಂಸ್ಕಾರಗಳನ್ನು ತಡೆಯುವ ಜಾತಿ ನಿಯಮಗಳು ಕೊನೆಗೊಳ್ಳಬೇಕು ಎಂದರು. ಭಾರತಿ ಅವರು ದಲಿತರು ಮತ್ತು ಅಸ್ಪೃಶ್ಯರನ್ನು ಪ್ರತಿದಿನ ತನ್ನ ಮನೆಗೆ ಆಹ್ವಾನಿಸಿ, ಅವರೊಂದಿಗೆ ಒಂದೇ ಸಾಲಿನಲ್ಲಿ ಕೂತು ಊಟ ಮಾಡಿ ಸಹೋದರತ್ವವನ್ನು ತೋರಿಸಿ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ವಿಭಜನೆಗಳಿಗೆಯೇ ಸವಾಲು ಹಾಕಿದರು.
ಅವರ ಕಾರ್ಯ ಜನಸಮೂಹವನ್ನು ಆಕರ್ಷಿಸಿತು ಮತ್ತು ಸನಾತನವಾದಿಗಳಿಂದ ಟೀಕೆಗಳನ್ನು ಕೂಡ ಎದುರಿಸಬೇಕಾಯಿತು, ಆದರೆ ಭಾರತಿ ದೃಢವಾಗಿ ನಿಂತರು ಮಹಿಳಾ ಹಕ್ಕುಗಳು, ಹಿಂದೂ ಐಕ್ಯತೆಯನ್ನು ಪ್ರತಿಪಾದಿಸಿದರು ಮತ್ತು ಬ್ರಿಟಿಷರ ವಿರುದ್ಧ ಕೇಳಿಬರುತ್ತಿದ್ದ ವಿರೋಧಗಳನ್ನು ಪ್ರೋತ್ಸಾಹಿಸಿದರು. ಅವರ ಮನೆ ತಮಿಳು ಸಮಾಜ ಸುಧಾರಣೆಯ ಕೇಂದ್ರವಾಯಿತು, ಅಲ್ಲಿ ಅವರು ಪ್ರಾಚೀನ ಸಂಸ್ಕಾರಗಳ ಮೂಲಕ ಸಮಾನತೆಯನ್ನು ಕಲಿಸಿದರು. ಕನಕಲಿಂಗಂ ನಂತರ ಭಾರತಿಯವರನ್ನು ತಂದೆಯಂತಹ ವ್ಯಕ್ತಿಯಾಗಿ ನೆನಪಿಸಿಕೊಂಡರು, ಆತನ ಜೀವನವನ್ನೇ ಭಾರತಿ ಬದಲಾಯಿಸಿದ್ದರು.
1918ರಲ್ಲಿ, ಭಾರತಿ ವಿದೇಶದಿಂದ ಬ್ರಿಟಿಷ್ ಭಾರತಕ್ಕೆ ಮರಳಿದಾಗ ಕಡಲೂರಿನಲ್ಲಿ ರಾಜದ್ರೋಹ ಆರೋಪದಡಿ ಬಂಧಿಸಲ್ಪಟ್ಟರು, ಪ್ರತಿಭಟನೆಗಳಿಂದಾಗಿ 23 ದಿನಗಳ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಅವರು ತಮ್ಮ 39 ವಯಸ್ಸಿನಲ್ಲಿ ಆನೆ ದಾಳಿಯಿಂದ ಮೃತಪಟ್ಟರು. ಅವರನ್ನು ಪಾಂಡಿಚೇರಿ ಆಧುನಿಕ ತಮಿಳು ಸಾಹಿತ್ಯದ ತಂದೆಯಾಗಿ ಮತ್ತು ಸಮಾನತೆ ಮತ್ತು ಸ್ವಾತಂತ್ರ್ಯದ ಪ್ರತೀಕವಾಗಿ ನೋಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



