ಬೆಳ್ತಂಗಡಿ : ಗ್ರಾಮೋತ್ಥಾನ ಸೇವಾ ಕೇಂದ್ರ ಉರುವಾಲು ಇದರ ಆಶ್ರಯದಲ್ಲಿ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವು ಮುಗೇರಡ್ಕ ದೈವಸ್ಥಾನ ವಠಾರದಲ್ಲಿ ಈಚೆಗೆ ನಡೆಯಿತು. ಉದ್ಘಾಟನೆಯನ್ನು ಮನೋಹರ್ ಅಂತರ ಅವರು ದೀಪಬೆಳಗಿಸುವುದರ ಮೂಲಕ ನೇರವೆರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ.ಕ್ಷೇ.ಧ.ಗ್ರಾಮಾಭಿವೃಧ್ಧಿ ಯೋಜನೆ ಒಕ್ಕೂಟ ಅಧ್ಯಕ್ಷರು ಸುಂದರ ,ನಿಕಟ ಪೂರ್ವಅಧ್ಯಕ್ಷ ಪುರಂದರ , ಗ್ರಾಮೋತ್ಥಾನ ಸೇವಾ ಸಮಿತಿ ಅಧ್ಯಕ್ಷರು ಶ್ರೀ ರವಿ ಪ್ರಕಾಶ್ , ಗ್ರಾಮೋತ್ಥಾನ ಇಂಡಿಯಾ ಪೌಂಢೇಶನ್ ಕಾರ್ಯಕ್ರಮ ಅಧಿಕಾರಿ ಚಂದ್ರಶೇಖರ್ ಉಪಸ್ಥಿತರಿದ್ಧರು.
ಸಂಪನ್ಮೂಲ ವ್ಯಕ್ತಿ ರತ್ನಕುಮಾರಿ ಅವರು ಫಿನಾಯಿಲ್, ಲೀಕ್ವುಡ್ ಸೋಪ್ ಇದರ ಬಗ್ಗೆ ತರಬೇತಿ ನಿಡಿದರು. ಗ್ರಾಮೋತ್ಥಾನ ಸೇವಾ ಕೇಂದ್ರ ಕ್ಷೇತ್ರಾಧಿಕಾರಿ ಜಗತ್ .ಕೆ ನಿರ್ವಹಿಸಿದರು. ಎಲ್ಲಾ ಸ್ವ-ಸಹಾಯ ಸಂಘದ ೬೦ ಮಹಿಳಾ ಸದಸ್ಯರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.