ಮಾಸ್ಕೋ: ರಷ್ಯಾದ ಕ್ರೆಮ್ಲಿನ್ನ ಸೇಂಟ್ ಆಂಡ್ರ್ಯೂ ಹಾಲ್ನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತ-ರಷ್ಯಾ ಬಾಂಧವ್ಯ ವೃದ್ಧಿಗೆ ನೀಡಿದ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ರಷ್ಯಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʼಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ʼ ಅನ್ನು ಪ್ರದಾನ ಮಾಡಿದರು. ಈ ಪ್ರಶಸ್ತಿಯನ್ನು 2019 ರಲ್ಲಿ ರಷ್ಯಾ ಸರ್ಕಾರ ಘೋಷಿಸಿತು.
“ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್ ಪ್ರಶಸ್ತಿಯನ್ನು ಸ್ವೀಕರಿಸಿ ಹೆಮ್ಮೆಯಾಗುತ್ತಿದೆ. ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ನಾನು ರಷ್ಯಾ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಈ ಪ್ರಶಸ್ತಿಯನ್ನು ನನ್ನ ಸಹವರ್ತಿ 140 ಕೋಟಿ ಭಾರತೀಯರಿಗೆ ಸಮರ್ಪಿಸಲಾಗಿದೆ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ರಾಷ್ಟ್ರಕ್ಕೆ ಸಂದ ಗೌರವವಾಗಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ, ಇದು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವು ಸಾಧಿಸಿದ ಅಸಾಧಾರಣ ಸ್ಥಾನಕ್ಕೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದ್ದಾರೆ. “ಕಳೆದ 10 ವರ್ಷಗಳಲ್ಲಿ ಮೋದಿ ಗಳಿಸಿದ ಜಾಗತಿಕ ಪುರಸ್ಕಾರಗಳ ಪಟ್ಟಿಯಲ್ಲಿ ಹೊಸ ಪ್ರಶಸ್ತಿಯು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯನ್ನು ಹೆಚ್ಚಿಸುವುದಲ್ಲದೆ ಭಾರತ-ರಷ್ಯಾ ಸ್ನೇಹವನ್ನು ಅಮರಗೊಳಿಸುತ್ತದೆ” ಎಂದು ಶಾ ಹೇಳಿದರು.
ಈ ಪ್ರಶಸ್ತಿಯನ್ನು ಸ್ವೀಕರಿಸುವಾಗ ಪ್ರಧಾನಮಂತ್ರಿಯವರು ಇದನ್ನು ಭಾರತದ ಜನತೆಗೆ ಮತ್ತು ಭಾರತ ಮತ್ತು ರಷ್ಯಾ ನಡುವಿನ ಸಾಂಪ್ರದಾಯಿಕ ಸ್ನೇಹ ಸಂಬಂಧಗಳಿಗೆ ಅರ್ಪಿಸಿದ್ದಾರೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. “ಈ ಮನ್ನಣೆಯು ಉಭಯ ದೇಶಗಳ ನಡುವಿನ ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಬೆಳಗಿಸುತ್ತದೆ” ಎಂದು ಅವರು ಹೇಳಿದರು.
Honoured to receive the The Order of Saint Andrew the Apostle. I thank the Russian Government for conferring the award.
This award is dedicated to my fellow 140 crore Indians. pic.twitter.com/hOHGDMSGC6
— Narendra Modi (@narendramodi) July 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.