ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಜನರು ನಕಾರಾತ್ಮಕತೆಯನ್ನು ತಿರಸ್ಕರಿಸುತ್ತಿದ್ದಾರೆ ಎಂಬುದನ್ನು ಚುನಾವಣಾ ಫಲಿತಾಂಶಗಳು ತೋರಿಸುತ್ತವೆ ಎನ್ನುವ ಮೂಲಕ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ವಿರೋಧ ಪಕ್ಷಗಳು ಸೋಲಿನಿಂದ ಪಾಠ ಕಲಿತು ಸಂಸತ್ತಿನಲ್ಲಿ ಸಕಾರಾತ್ಮಕ ಚರ್ಚೆಗೆ ಮಣಿಯಬೇಕು ಎಂದರು. ವಿಪಕ್ಷ ನಾಯಕರಿಗೆ ಸಲಹೆ ನೀಡಿದ ಪ್ರಧಾನಿ ಮೋದಿ, “ಪ್ರಸ್ತುತ ಚುನಾವಣಾ ಫಲಿತಾಂಶಗಳನ್ನು ಆಧರಿಸಿ ನಾನು ಮಾತನಾಡುವುದಾದರೆ, ವಿರೋಧ ಪಕ್ಷದಲ್ಲಿರುವ ಸ್ನೇಹಿತರಿಗೆ ಇದೊಂದು ಸುವರ್ಣಾವಕಾಶವಾಗಿದೆ, ಸೋಲಿನ ಹತಾಶೆಯನ್ನು ಹೊರಹಾಕುವ ಬದಲು, ಈ ಹಿನ್ನಡೆಯಿಂದ ಪಾಠ ಕಲಿತರೆ ಮತ್ತು ಈ ಅಧಿವೇಶನದಲ್ಲಿ ಸಕಾರಾತ್ಮಕವಾಗಿ ಮುನ್ನಡೆದರೆ ನಿಮ್ಮೆಡೆಗಿನ ದೇಶದ ದೃಷ್ಟಿಕೋನ ಬದಲಾಗಲಿದೆ, ಕಳೆದ ಒಂಬತ್ತು ವರ್ಷಗಳಿಂದ ಇರುವ ಋಣಾತ್ಮಕತೆಯನ್ನು ಬಿಟ್ಟು ನೀವು ಸಕಾರಾತ್ಮಕತೆಯನ್ನು ಅಳವಡಿಸಿಕೊಂಡರೆ ನಿಮಗೆ ಹೊಸ ಬಾಗಿಲು ತೆರೆಯಬಹುದು, ಧನಾತ್ಮಕ ಚಿಂತನೆಯೊಂದಿಗೆ ಬನ್ನಿ ಎಂದು ನಾನು ಅವರಿಗೆ ಉತ್ತಮ ಸಲಹೆಯನ್ನು ನೀಡುತ್ತಿದ್ದೇನೆ” ಎಂದಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ಎಲ್ಲರ ಭವಿಷ್ಯ ಉಜ್ವಲವಾಗಿದೆ. ಹತಾಶರಾಗುವ ಅಗತ್ಯವಿಲ್ಲ, ಆದರೆ ದಯವಿಟ್ಟು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ವ್ಯಕ್ತಪಡಿಸಬೇಡಿ” ಎಂದು ಹೇಳಿದರು. ತಮ್ಮ ಹತಾಶೆಯನ್ನು ಹೊರಹಾಕಲು ಸಂಸತ್ತನ್ನು ವೇದಿಕೆಯಾಗಿ ಬಳಸಬೇಡಿ ಎಂದು ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸಿದರು.
“ನನ್ನ ಸುದೀರ್ಘ ಅನುಭವದ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ, ನಿಮ್ಮ ಕಾರ್ಯಗಳನ್ನು ಬದಲಾಯಿಸಿ, ವಿರೋಧಿಸುವ ಸಲುವಾಗಿ ವಿರೋಧ ಮಾಡುವುದು ಸರಿಯಾದ ಮಾರ್ಗವಲ್ಲ, ರಾಷ್ಟ್ರದ ಕಲ್ಯಾಣಕ್ಕಾಗಿ ಧನಾತ್ಮಕ ವಿಷಯಗಳನ್ನು ಬೆಂಬಲಿಸಿ,” ಎಂದು ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕರಿಗೆ ಸಲಹೆ ನೀಡಿದರು.
May the Winter Session of Parliament be a productive one and filled with constructive debates. https://t.co/8b3l4GJoYI
— Narendra Modi (@narendramodi) December 4, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.