ಶ್ರೀನಗರ: ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಸಂಬಂಧಿಸಿದ ಹೊಸ ಬೆಳವಣಿಗೆ ನಡೆದಿದ್ದು, ಜಮ್ಮು ಮತ್ತು ಕಾಶ್ಮೀರ ರಾಜ್ಯ ತನಿಖಾ ಸಂಸ್ಥೆ ಸೋಮವಾರ ನಿವೃತ್ತ ನ್ಯಾಯಾಧೀಶ ನೀಲಕಂಠ ಗಂಜೂ ಅವರ 33 ವರ್ಷಗಳ ಹಿಂದಿನ ಕೊಲೆ ಪ್ರಕರಣದ ವಿಚಾರಣೆಯನ್ನು ಪ್ರಾರಂಭಿಸಿದೆ. 1989ರಲ್ಲಿ ಕಣಿವೆಯಲ್ಲಿ ನಡೆದ ಉದ್ದೇಶಿತ ದಾಳಿಯಲ್ಲಿ ಕಾಶ್ಮೀರಿ ಪಂಡಿತರಾಗಿದ್ದ ನಿವೃತ್ತ ನ್ಯಾಯಾಧೀಶ ನೀಲಕಂಠ ಗಂಜೂ ಅವರನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದರು.
ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್ಐಎ) ಸೋಮವಾರ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಹತ್ಯೆಗೈದಿರುವ ಹಿಂದೆ “ದೊಡ್ಡ ಕ್ರಿಮಿನಲ್ ಪಿತೂರಿ” ಯನ್ನು ಬಯಲಿಗೆಳೆಯಲು ಸಾರ್ವಜನಿಕರಿಂದ ಮಾಹಿತಿ ಮತ್ತು ವಿವರಗಳನ್ನು ಕೇಳಿದೆ.
1960 ರ ದಶಕದಲ್ಲಿ ನ್ಯಾಯಾಧೀಶ ಗಂಜೂ ಅವರು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ಸಂಸ್ಥಾಪಕ ಮತ್ತು ಉಗ್ರಗಾಮಿ ಮೊಹಮ್ಮದ್ ಮಕ್ಬೂಲ್ ಭಟ್ಗೆ ಮರಣದಂಡನೆ ವಿಧಿಸಿದ್ದರು. ಪೊಲೀಸ್ ಅಧಿಕಾರಿ ಅಮರ್ ಚಂದ್ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಟ್ ದೋಷಿ ಎಂದು ತೀರ್ಪು ನೀಡಲಾಗಿತ್ತು.
1989 ರಲ್ಲಿ ಉಗ್ರಗಾಮಿಗಳ ಗುಂಡಿಗೆ ಗಂಜೂ ಕೊಲ್ಲಲ್ಪಟ್ಟರು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲಿನ ಉದ್ದೇಶಿತ ದಾಳಿಯಲ್ಲಿ ಕಣಿವೆಯಲ್ಲಿ ಉಗ್ರಗಾಮಿಗಳಿಂದ ಕೊಲ್ಲಲ್ಪಟ್ಟ ಪ್ರಮುಖ ಕಾಶ್ಮೀರಿ ಪಂಡಿತರಲ್ಲಿ ಅವರು ಒಬ್ಬರು.
ಕಾಶ್ಮೀರದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅವರನ್ನು ನವೆಂಬರ್ 4, 1989 ರಂದು ಮೂರು ಉಗ್ರಗಾಮಿಗಳು ಹರಿ ಸಿಂಗ್ ಸ್ಟ್ರೀಟ್ ಮಾರುಕಟ್ಟೆಯಲ್ಲಿ ಸುತ್ತುವರೆದು ನಂತರ ಹತ್ಯೆ ಮಾಡಿದರಯ. ಶ್ರೀನಗರ ಹೈಕೋರ್ಟ್ ಬಳಿ ಉದ್ದೇಶಪೂರ್ವಕವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
BIG BREAKING NEWS FROM KASHMIR 🇮🇳
Government of India in a historic step decides to reopen cases of Kashmiri Hindu genocide from 1989-90 after 34 years.
First case to reopen is the case of Justice Neelkanth Ganjoo who was killed in 1989 by JKLF terrorists of Yasin Malik.… pic.twitter.com/4ifOPMY5XN
— Aditya Raj Kaul (@AdityaRajKaul) August 7, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.