ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆಡಳಿತಕ್ಕೆ ಬಂದ ಬಳಿಕ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಈಗಾಗಲೇ ಅದು ಬಿಜೆಪಿ ಆಡಳಿತದಲ್ಲಿ ಈ ಹಿಂದೆ ಜಾರಿಗೆ ತಂದ ವಿವಾದಾತ್ಮಕ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸುವ ನಿರ್ಧಾರವನ್ನು ಪ್ರಕಟಿಸಿದೆ, ಗೋಹತ್ಯೆ ನಿಷೇಧ ಕಾನೂನು ಹಿಂಪಡೆಯಲೂ ಮುಂದಾಗುತ್ತಿದೆ. ಮತಾಂತರ ವಿರೋಧಿ ಕಾನೂನನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಪರೋಕ್ಷವಾಗಿಯೇ ರಾಜ್ಯದಲ್ಲಿ ಮತಾಂತರಕ್ಕೆ ಬಲ ತುಂಬಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಮತಾಂತರ ವಿರೋಧಿ ಕಾನೂನು ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯಿದೆ, 2022 ಅನ್ನು ಹಿಂದಿನ ಬಿಜೆಪಿ ಸರ್ಕಾರವು ತುಂಬಾನೇ ಯೋಚಿಸಿ ಯೋಜಿಸಿ ಪರಿಚಯಿಸಿತು ಮತ್ತು ಡಿಸೆಂಬರ್ 2021 ರಲ್ಲಿ ವಿಧಾನಸಭೆಯಲ್ಲಿ ಅಂಗೀಕರಿಸಿತು. ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಮಸೂದೆಯನ್ನು ವಿರೋಧಿಸಿತ್ತು. ಅನೇಕರು ಮಸೂದೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದರು ಕೂಡ.
ಮತಾಂತರ-ವಿರೋಧಿ ಕಾನೂನು ಧರ್ಮದ ಸ್ವಾತಂತ್ರ್ಯದ ಹಕ್ಕನ್ನು ರಕ್ಷಿಸುವ ಗುರಿಯನ್ನು ಹೊಂದಿತ್ತು ಮತ್ತು ತಪ್ಪು ನಿರೂಪಣೆ, ಬಲ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಮೋಸದ ವಿಧಾನಗಳ ಮೂಲಕ ಕಾನೂನುಬಾಹಿರ ಮತಾಂತರಗಳನ್ನು ನಿಷೇಧಿಸಿತ್ತು. ಮದುವೆಯ ಭರವಸೆಯ ಮೂಲಕ ಮಾಡಲಾಗುವ ಮತಾಂತರಗಳನ್ನು ಕೂಡ ಇದು ನಿಷೇಧಿಸಿತ್ತು.
ಕಾನೂನನ್ನು ಉಲ್ಲಂಘಿಸಿದರೆ ಮೂರರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ.25,000 ದಂಡ ವಿಧಿಸುವ ನಿಬಂಧನೆ ಹೊಂದಿತ್ತು. ಅಪ್ರಾಪ್ತ ವಯಸ್ಕ, ಅಸ್ವಸ್ಥ ಮನಸ್ಸಿನ ವ್ಯಕ್ತಿ, ಮಹಿಳೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜೈಲು ಶಿಕ್ಷೆಯನ್ನು ಹತ್ತು ವರ್ಷಗಳವರೆಗೆ ವಿಸ್ತರಿಸಲಾಗಿತ್ತು.
ಈ ಮಸೂದೆಯನ್ನು ಅಂಗೀಕರಿಸಿದಾಗ, ಕಾಂಗ್ರೆಸ್ ಪಕ್ಷವು “ಜನವಿರೋಧಿ”, “ಅಮಾನವೀಯ”, “ಸಂವಿಧಾನ ವಿರೋಧಿ”, “ಬಡವರ ವಿರೋಧಿ” ಸೇರಿದಂತೆ ಹಲವಾರು ವಿಶೇಷಣಗಳನ್ನು ಬಳಸಿಕೊಂಡು ಮಸೂದೆಯನ್ನು ಟೀಕಿಸಲು ಬೀದಿಗಿಳಿದಿತ್ತು
ಮತಾಂತರ ವಿರೋಧಿ ಕಾನೂನು ಜಾರಿಯಾದ ನಂತರ ರಾಜ್ಯದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದು, ಪ್ರತಿ ತಿಂಗಳು ಸರಾಸರಿ ಒಂದಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಕಾನೂನು ರದ್ಧುಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಅದರ ಬೆಂಬಲಿಗರು ಈ ನಿರ್ಧಾರದ ಬಗ್ಗೆ ಸಂತೋಷಪಟ್ಟು ಸಂಭ್ರಮಿಸಿದ್ದಾರೆ. ಅನೇಕರು ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ಹಿಂದೂ ವಿರೋಧಿ ಕ್ರಮ ಎಂದು ಕರೆದಿದ್ದಾರೆ.
ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪಿಎಫ್ಐನ ಅಜೆಂಡಾವನ್ನು ಈಡೇರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.
ಇದು ನಿಜ ಕೂಡ ಆಗಿದೆ. ಪಿಎಫ್ಐ ದೇಶವನ್ನು ಇಸ್ಲಾಮೀಕರಣಗೊಳಿಸುವ ಅಜೆಂಡಾ ಹೊಂದಿತ್ತು. ಅದಕ್ಕಾಗಿ ಅದು ಲವ್ ಜಿಹಾದ್ ಸೇರಿದಂತೆ ಅನೇಕ ವಿಧಾನಗಳನ್ನು ಸಕ್ರಿಯವಾಗಿ ಬಳಸುತ್ತಿತ್ತು. ಇದೀಗ ಸಿದ್ದರಾಮಯ್ಯ ಸರ್ಕಾರ ಮತಾಂತರ ವಿರೋಧಿ ಕಾನೂನು ರದ್ದುಗೊಳಿಸಿ ಪಿಎಫ್ಐ ಅಜೆಂಡಾ ಸೂಸುತ್ರವಾಗಿ ನೆರವೇರುವಂತೆ ಮಾಡಲು ಸಹಕರಿಸಿದ್ದಾರೆ.
Congress Govt in Karnataka is fulfilling the PFI’s agenda in Karnataka.
By deciding to repeal anti conversion law, Cong Govt is clearly going against the Constitution and the judgements of the SC that clearly prohibit fraudulent religious conversions.
By wanting to drop…
— Tejasvi Surya (@Tejasvi_Surya) June 15, 2023
As if this video by a Mullah wasn’t enough, Congress decided to rub further salt in the wounds of Hindus.
This is a typical Sonia G effect and now missionaries can again have a free run to convert Hindus.
Congratulations and celebrations for Abrahamics while Hindus settles for… https://t.co/JhYQwCWgaV
— Alok Bhatt (@alok_bhatt) June 15, 2023
So basically #lovejihaad is allowed in Karnataka now. Super cool. The kannadigas Hindus will face the consequences in coming years. Won't be a good sight. @I_am_the_Story @hathyogi31 what's your take on this? pic.twitter.com/95L3kNA5SL
— Dorin Kashyap (@dorzz22) June 15, 2023
ಮೂಲ :
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.