ಭಾರತದ ಬಗ್ಗೆ ಉತ್ತಮ ಚಿಂತನೆಗಳನ್ನು ಹೊಂದಿರುವ ಸಿಡ್ನಿ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಸಾಲ್ವಟೋರ್ ಬಾಬೋನ್ಸ್ ಅವರ ಬಗ್ಗೆ ದಿ ಆಸ್ಟ್ರೇಲಿಯ ಟುಡೆ ವೆಬ್ ಪೋರ್ಟಲ್ “Prof Salvatore Babones neither Indian nor Hindu but calling out dishonesty against Modi’s India” ಎಂಬ ವಿಶೇಷ ಸಂದರ್ಶನ ವರದಿಯನ್ನು ಪ್ರಕಟಿಸಿದೆ. ಭಾರತೀಯನೂ ಅಲ್ಲ, ಹಿಂದೂವೂ ಅಲ್ಲ ಆದರೂ ಬಾಬೋನ್ಸ್ ಅವರು ಮೋದಿಯ ಭಾರತದ ಬಗ್ಗೆ ಹರಡಲಾಗುತ್ತಿರುವ ಅಪ್ರಾಮಾಣಿಕ ನಿರೂಪಣೆಯನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ದಿ ಆಸ್ಟ್ರೇಲಿಯ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರೊಫೆಸರ್ ಸಾಲ್ವಟೋರ್ ಬಾಬೋನ್ಸ್ ಅವರು ತಮ್ಮ ಇತ್ತೀಚಿನ ವರದಿಯಾದ ‘‘Unholy Alliance: Inside the Campaign to Pry India from the West’
‘ ಕುರಿತು ಮಾತನಾಡಿದ್ದಾರೆ.
ಭಾರತದ ವಿರುದ್ಧ ನಕಾರಾತ್ಮಕ ನಿರೂಪಣೆಯನ್ನು ನಿರ್ಮಿಸಲು ಅಂತರರಾಷ್ಟ್ರೀಯ ಕ್ರಿಶ್ಚಿಯನ್ ಮಿಷನರಿಗಳು ಅಂತರರಾಷ್ಟ್ರೀಯ ಇಸ್ಲಾಮಿಸ್ಟ್ಗಳ ಜೊತೆ ಸೇರಿ ಕಾರ್ಯತಾಂತ್ರಿಕವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಯಾಕೆಂದರೆ ಭಾರತವನ್ನು ಅದರಲ್ಲೂ ವಿಶಾಲವಾಗಿ ಹಿಂದೂ ಸಮಾಜವನ್ನು ಇವರು ಸಮಾನ ಎದುರಾಳಿಗಳಾಗಿ ನೋಡುತ್ತಿದ್ದಾರೆ ಎಂದು ಬಾಬೋನ್ಸ್ ಹೇಳಿದ್ದಾರೆ. ಆದರೆ ಭಾರತೀಯ ಮುಸ್ಲಿಮರು ಅಥವಾ ಭಾರತೀಯ ಕ್ರಿಶ್ಚಿಯನ್ನರು ಈ ಅಜೆಂಡಾದ ಭಾಗವಾಗಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.
ಪ್ರೊಫೆಸರ್ ಬಾಬೊನ್ಸ್ ಅವರನ್ನು ಉಲ್ಲೇಖಿಸಿರುವ ಪ್ಯೂ ಸಮೀಕ್ಷೆಯ ಪ್ರಕಾರ, ಸಮೀಕ್ಷೆಗೊಳಪಟ್ಟ 98% ಭಾರತೀಯ ಕ್ರಿಶ್ಚಿಯನ್ ಮತ್ತು 97% ಭಾರತೀಯ ಮುಸ್ಲಿಂ ಇಂದು ಭಾರತದಲ್ಲಿ ತಾವು ತಮ್ಮ ಧರ್ಮವನ್ನು ಆಚರಿಸಲು ಸ್ವತಂತ್ರರಾಗಿದ್ದೇವೆ ಎಂದು ಹೇಳಿದ್ದಾರೆ.
ಸಮೀಕ್ಷೆಯಲ್ಲಿ ಭಾರತವನ್ನು ಗೌರವಿಸುವುದು ಎಷ್ಟು ಮುಖ್ಯ ಮತ್ತು ಭಾರತೀಯರಾಗಿ ಅವರು ಎಷ್ಟು ಹೆಮ್ಮೆಪಡುತ್ತಾರೆ ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು, ಈ ಪ್ರಶ್ನೆಗೆ ದೊರೆತ ಪ್ರತಿಕ್ರಿಯೆ ಭಾರತೀಯರಿಗೆ ಆಶ್ಚರ್ಯಕರವಲ್ಲದಿದ್ದರೂ, ಭಾರತ ವಿರೋಧಿ ನಿರೂಪಣೆ ಹೆಣೆಯುತ್ತಿರುವವರಿಗೆ ಆಘಾತಕಾರಿಯಾಗಿದೆ ಎಂಬುದಂತು ಸತ್ಯ.
98% ರಷ್ಟು ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಸಿಖ್ಖರು, 100% ಬೌದ್ಧರು ಮತ್ತು 97% ಜೈನರು ಭಾರತವನ್ನು ಗೌರವಿಸುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ. ಅದೇ ರೀತಿ 99% ಹಿಂದೂಗಳು ಮತ್ತು ಮುಸ್ಲಿಮರು, 98% ಕ್ರಿಶ್ಚಿಯನ್ನರು, 97% ಸಿಖ್ ಮತ್ತು ಬೌದ್ಧರು ಮತ್ತು 100% ಜೈನರು ತಾವು ಭಾರತೀಯರು ಎಂದು ಹೆಮ್ಮೆಪಡುವುದಾಗಿ ಹೇಳಿದ್ದಾರೆ.
ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ನಿರೂಪಣೆಗಳನ್ನು ರಚಿಸಲು ಇಂತವರು ಯೆಹೂದಿ ವಿರೋಧಿ ಮತ್ತು ಇಸ್ರೇಲ್ ವಿರೋಧಿ ಟೂಲ್ ಕಿಟ್ಗಳನ್ನು ಬಳಸುತ್ತಿದ್ದಾರೆ ಎಂದು ಪ್ರೊ ಬಾಬೋನ್ಸ್ ವರದಿ ಸೂಚಿಸುತ್ತದೆ. ಭಾರತ ಮತ್ತು ಹಿಂದೂಗಳ ಬಗೆಗಿನ ಈ ನಕಾರಾತ್ಮಕ ನಿರೂಪಣೆಯನ್ನು ನಿಜವೆಂದು ಬಿಂಬಿಸಲು ಕೆಲವರಿಂದ ಬುದ್ಧಿಜೀವಿ ಹೊದಿಕೆಯನ್ನು ನೀಡಲಾಗುತ್ತಿದೆ ಎಂಬುದಕ್ಕೂ ಪುರಾವೆಗಳಿಗೆ ಎಂದು ಬಾಬೋನ್ಸ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ತಮ್ಮ ಲೇಖನವನ್ನು ಅವರು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ.
“Prof Salvatore Babones neither Indian nor Hindu but calling out dishonesty” – coverage of my ‘Unholy Alliance’ article on international religious freedom rankings at @TheAusToday: https://t.co/sknGcLhsVE
— Salvatore Babones (@ProfBabones) February 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.