News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಡಾಖ್‌ನಲ್ಲಿ ಹೈಡ್ರೋ ಟೂರಿಸಂ ಆರಂಭಿಸಲು ಮುಂದಾಗಿದೆ ಆಡಳಿತ

ನವದೆಹಲಿ: ಲಡಾಖ್‌ ಕೇಂದ್ರಾಡಳಿತ ಪ್ರದೇಶದ ಪ್ರವಾಸೋದ್ಯಮ ಇಲಾಖೆಯು ಹೈಡ್ರೋ ಟೂರಿಸಂ ಅನ್ನು ಪ್ರಾರಂಭಿಸುವ ಯೋಜನೆಯನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಅದು ನ್ಯಾಷನಲ್ ಹೈಡ್ರೊಎಲೆಕ್ಟ್ರಿಕ್ ಪವರ್ ಕಾರ್ಪೊರೇಷನ್ ಸಹಯೋಗದೊಂದಿಗೆ ಲೇಹ್‌ನ ಅಲ್ಚಿ ಬಳಿಯ ಸಿಂಧೂ ನದಿಯಲ್ಲಿ ವಿಶ್ವದ ಅತಿ ಎತ್ತರದ ಜಲವಿದ್ಯುತ್ ಯೋಜನೆಯಲ್ಲಿ ಹೈಡ್ರೋ ಟೂರಿಸಂ ಅನ್ನು ಪ್ರಾರಂಭಿಸಲು ಜಲ ಕ್ರೀಡೆಗಳನ್ನು ಯೋಜಿಸುತ್ತಿದೆ.

ಲಡಾಖ್ ಪ್ರವಾಸೋದ್ಯಮ ಕಾರ್ಯದರ್ಶಿ ಕಚೋ ಮೆಹಬೂಬ್ ಅಲಿ ಖಾನ್ ಅವರು ಮುಂಬರುವ ಋತುವಿನಲ್ಲಿ ಸಂಬಂಧಿತ ಕಾಮಗಾರಿಗಳನ್ನು ಕಾರ್ಯಗತಗೊಳಿಸಲು  ಸುರಕ್ಷತಾ ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಅಧಿಕಾರಿಗೆ ಸೂಚಿಸಿದ್ದಾರೆ.

ಜಲಚರ ಕ್ರೀಡೆಗಳಾದ ಕಯಾಕಿಂಗ್, ಜೆಟ್ ಸ್ಕೀಯಿಂಗ್, ಮೋಟರ್ ಬೋಟಿಂಗ್, ಚಳಿಗಾಲದಲ್ಲಿ ಐಸ್ ಸ್ಕೇಟಿಂಗ್ ಮತ್ತು ಬೇಸಿಗೆ ಕಾಲದಲ್ಲಿ ಬೋಟಿಂಗ್ ಅನ್ನು ಹಂತಹಂತವಾಗಿ ಹೊರತರುವ ನಿಟ್ಟಿನಲ್ಲಿ ಸಿದ್ಧತೆಗಳು ಆರಂಭವಾಗಿದೆ.

ಅದೇ ರೀತಿ, ಪ್ರವಾಸೋದ್ಯಮ ಇಲಾಖೆಯು ಭಾರತೀಯ ಸೇನೆಯ ಸಹಕಾರದೊಂದಿಗೆ ಗಡಿ ಪ್ರವಾಸೋದ್ಯಮವನ್ನು ಕೂಡ ಪರಿಚಯಿಸುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top