
2022 ರ ಏಪ್ರಿಲ್ 16 ರಂದು ದೆಹಲಿಯ ಜಹಾಂಗೀರ್ಪುರಿಯಲ್ಲಿ ಹನುಮಾನ್ ಜಯಂತಿ ಶೋಭಾ ಯಾತ್ರೆಯ ಮೇಲೆ ಕ್ರೂರ ದಾಳಿ ನಡೆಯಿತು. ಯಾತ್ರೆಯು ಜಾಮಾ ಮಸೀದಿ ಬಳಿ ಸಾಗುತ್ತಿದ್ದಾಗ ಏಕಾಏಕಿ ದಾಳಿಗಳನ್ನು ನಡೆಸಲಾಯಿತು. ವರದಿಗಳು ಮತ್ತು ನಂತರದ ತನಿಖೆಗಳ ಪ್ರಕಾರ, ಶಾಂತಿಯುತವಾಗಿ ನೆರೆದಿದ್ದ ಭಕ್ತರ ಮೇಲೆ ಮೂಲಭೂತವಾದಿ ಗುಂಪು ದಾಳಿ ನಡೆಸಲು ಮುಂಚಿತವಾಗಿಯೇ ಯೋಜನೆಯನ್ನು ರೂಪಿಸಿತ್ತು. ಹಿಂಸಾತ್ಮಕ ಗುಂಪು ಅದಾಗಲೇ ಕೋಲುಗಳು, ಖಡ್ಗಗಳು, ಬಾಟಲ್ಗಳು ಮತ್ತು ಬಂದೂಕುಗಳೊಂದಿಗೆ ಸಜ್ಜಾಗಿತ್ತು ಮತ್ತು ಮಹಿಳೆಯರು ಹಾಗೂ ಮಕ್ಕಳ ಸೇರಿದಂತೆ ಭಕ್ತರ ಮೇಲೆ ದಾಳಿ ಮಾಡಿತು. ಮುಖ್ಯ ಆರೋಪಿ ಮೊಹಮ್ಮದ್ ಅನ್ಸಾರ್ ಎಂಬಾತ ಇಡೀ ಘಟನೆಯನ್ನು ಯೋಜಿಸಿ ನಿರ್ವಹಿಸಿದ್ದಲ್ಲದೆ, ಬಂಧನಕ್ಕೆ ಒಳಗಾದಾಗಲೂ ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ. ಆಘಾತಕಾರಿ ವಿಷಯವೆಂದರೆ, ಅನ್ಸಾರ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅವನು 2021ರ ತೆಲುಗು ಸಿನಿಮಾ ʼಪುಷ್ಪಾ: ದಿ ರೈಸ್ʼನ “ಝುಕೇಗಾ ನಹಿ” ಸಂಕೇತವನ್ನು ತೋರಿಸಿ ಇಡೀ ಘಟನೆಯನ್ನು ಸಮರ್ಥಿಸಿಕೊಂಡಿದ್ದ. ಈ ಹಿಂಸಾತ್ಮಕ ಘಟನೆ ಮತ್ತು ನಂತರದಲ್ಲಿ ಆರೋಪಿಗಳು ತೋರಿಸಿದ ಧೈರ್ಯವು “ಜಿಹಾದಿ” ಮನಸ್ಥಿತಿಯ ಕ್ರೂರತೆಯನ್ನು ತೋರಿಸುತ್ತದೆ, ಹಿಂಸೆಯನ್ನು ಅಗತ್ಯ ಮತ್ತು ಸಮರ್ಥನೀಯವೆಂದು ಭಾವಿಸುವುದು ಆ ಮನಸ್ಥಿತಿಯಲ್ಲಿ ಆಳವಾಗಿ ಬೇರೂರಿದೆ ಎಂಬುದನ್ನು ಸೂಚಿಸುತ್ತದೆ.
ಏಪ್ರಿಲ್ 16, 2022ರಂದು ಏನಾಯಿತು?
ವರದಿಗಳ ಪ್ರಕಾರ, ಯಾತ್ರೆಯು ನಿಗದಿತ ಮಾರ್ಗದಲ್ಲಿ ಸಾಗಿ ಸಿ ಬ್ಲಾಕ್ನಲ್ಲಿರುವ ಜಾಮಾ ಮಸೀದಿ ಬಳಿ ತಲುಪಿತು. ಆ ಸಮಯದಲ್ಲಿ ಮೂಲಭೂತವಾದಿ ಮುಸ್ಲಿಮರ ದೊಡ್ಡ ಗುಂಪು ಲಾಠಿಗಳು, ಚೂಪಾದ ಆಯುಧಗಳು, ಬಾಟಲ್ಗಳು ಮತ್ತು ಬಂದೂಕುಗಳೊಂದಿಗೆ ಅಲ್ಲಿ ಹಾಜರಾಗಿತ್ತು. ಯಾತ್ರೆಯು ಆ ಪ್ರದೇಶಕ್ಕೆ ತಲುಪಿದ ಕೂಡಲೇ ಪರಿಸ್ಥಿತಿ ತೀವ್ರಗೊಂಡು, ಗುಂಪು ಭಕ್ತರ ಮೇಲೆ ಹಿಂಸಾತ್ಮಕ ದಾಳಿ ನಡೆಸಿತು. ಸ್ಥಳದಲ್ಲಿ ಕಂಡುಬಂದ ಚಿತ್ರಣ ಹಿಂಸೆಯನ್ನು ಮುಂಚಿತವಾಗಿ ಊಹಿಸಿ ಯೋಜಿಸಲಾಗಿತ್ತು ಎಂಬುನ್ನು ದೃಢಪಡಿಸಿದೆ. ನಂತರದ ತನಿಖೆಗಳೂ ಇದನ್ನೇ ದೃಢೀಕರಿಸಿದವು. ವರದಿಗಳ ಪ್ರಕಾರ ಮುಖ್ಯ ಆರೋಪಿ ಮೊಹಮ್ಮದ್ ಅನ್ಸಾರ್ ಹನುಮಾನ್ ಜಯಂತಿಗೆ ಸುಮಾರು ಒಂದು ವಾರ ಮುಂಚೆಯೇ ಸುಮಾರು 30 ಮಂದಿ (ಕೆಲವು ಅಪ್ರಾಪ್ತ ವಯಸ್ಕರು ಸೇರಿದಂತೆ)ಯ ಸಭೆ ನಡೆಸಿದ್ದ. ಈ ಸಭೆಯಲ್ಲಿ ಯಾತ್ರೆಯನ್ನು ತಡೆಯುವುದು ಮತ್ತು ಎದುರಿಸುವುದರ ಬಗ್ಗೆ ಚರ್ಚಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ತನಿಖೆಗಳು ಮೊಹಮ್ಮದ್ ಅನ್ಸಾರ್ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಬ್ಬ ಅಪರಾಧಿ ಎಂಬುದನ್ನು ಬಹಿರಂಗಪಡಿಸಿತ್ತು – ಅವನ ವಿರುದ್ಧ ಅನೇಕ ಪ್ರಕರಣಗಳ ಇತಿಹಾಸವಿದೆ. ಅವನ ಮೊದಲ ಬಂಧನ 2009 ರಲ್ಲಿ ನಡೆದಿತ್ತು, ಆರ್ಮ್ಸ್ ಆಕ್ಟ್ ಅಡಿಯಲ್ಲಿ ಅಕ್ರಮ ಶಸ್ತ್ರ ಇಟ್ಟುಕೊಂಡಿದ್ದಕ್ಕಾಗಿ ಬಂಧಿತನಾಗಿದ್ದ. ನಂತರದ ವರ್ಷಗಳಲ್ಲಿ ದಾಳಿ, ಅಪರಾಧಿ ಬೆದರಿಕೆ ಮತ್ತು ಮಹಿಳೆಯ ಮಾನಭಂಗದ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಗಳು ಎದುರಿಸಿದ್ದಾನೆ. ಆತನ ವಿರುದ್ಧ ಜೂಜು, ಆಟ ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪದೇ ಪದೇ ಆತನನ್ನು ಬಂಧಿಸಲಾಗಿದೆ. ಆತ ಆ ಪ್ರದೇಶದಲ್ಲಿ ಅಕ್ರಮ ಮದ್ಯ ಮತ್ತು ಜೂಜು ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ವರದಿಗಳಿವೆ. ಜಹಾಂಗೀರ್ಪುರಿ ಘಟನೆಯಲ್ಲಿ ಆತನ ಪಾತ್ರ ಆತನ ದೀರ್ಘಕಾಲೀನ ಜಿಹಾದಿ ವರ್ತನೆಯ ಭಾಗವಾಗಿದ್ದವು
ಈ ಪ್ರಕರಣದ ಅತ್ಯಂತ ಶೋಚನೀಯ ಅಂಶವೆಂದರೆ ಹಿಂಸೆಯನ್ನು ಯೋಜಿಸಿ ಕಾರ್ಯರೂಪಕ್ಕೆ ತಂದ ವ್ಯಕ್ತಿ ಸಿಕ್ಕಿಬಿದ್ದಾಗಲೂ ಕಿಂಚಿತ್ತೂ ಪಶ್ಚಾತಾಪವನ್ನೂ ತೋರಿಸದೇ ಇದ್ದುದು. ಅನ್ಸಾರ್ನ ನ್ಯಾಯಾಲಯದ ಮುಂದೆಯೇ “ಝುಕೇಗಾ ನಹಿ” ಭಂಗಿಯನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಸುದ್ದಿಯಾಗಿತ್ತು ಮತ್ತು ಅವನಿಗೆ ತಾನು ಮಾಡಿದ ಕೃತ್ಯ ನೈತಿಕವಾಗಿ ತಪ್ಪೆಂದು ಕಾಣದೆ ಇದ್ದುದನ್ನು ಇದು ಸೂಚಿಸಿತು. ವ್ಯಕ್ತಿಗಳು ಹಿಂಸೆಯನ್ನು ಕಾನೂನುಬದ್ಧ, ಅಗತ್ಯ ಅಥವಾ ನ್ಯಾಯಸಮ್ಮತವೆಂದು ಸಮರ್ಥಿಸಿಕೊಳ್ಳಲು ಆರಂಭಿಸುವುದೇ ಮೂಲಭೂತೀಕರಣದ ನಿರ್ಣಾಯಕ ಹಂತವಾಗಿರುತ್ತದೆ. ಇಂತಹ ಚೌಕಟ್ಟಿನಲ್ಲಿ ಜಿಹಾದಿಗಳು ಹಿಂಸಾತ್ಮಕ ಕೃತ್ಯಗಳನ್ನು ಅಪರಾಧಗಳಾಗಿ ಕಾಣದೆ, ಸಮರ್ಥನೀಯ ಪ್ರತಿಕ್ರಿಯೆಗಳೆಂದು ವ್ಯಾಖ್ಯಾನಿಸುತ್ತಾರೆ. ಇಂತಹ ಘಟನೆಗಳು ಅಪರಾಧವನ್ನು ಪುನರಾವರ್ತನೆ ಮಾಡಲು ಅಪರಾಧಿಗಳಿಗೆ ಉತ್ತೇಜನ ನೀಡುತ್ತದೆ.
2024ರ ಏಪ್ರಿಲ್ನಲ್ಲಿ ಬೆಂಗಳೂರಿನಲ್ಲಿ ರಾಮ ನವಮಿ ಆಚರಣೆ ಮಾಡುತ್ತಿದ್ದ ಭಕ್ತರ ಮೇಲೆ ದಾಳಿ ನಡೆಯಿತು ಮತ್ತು ಅಲ್ಲಿ “ಜೈ ಶ್ರೀ ರಾಮ್” ಬದಲು “ಅಲ್ಲಾಹು ಅಕ್ಬರ್” ಘೋಷಣೆ ಮಾಡಲು ಬಲವಂತಪಡಿಸಲಾಯಿತು ಎಂಬ ಆರೋಪವಿದೆ. ಅದನ್ನು ವಿರೋಧಿಸಿದಾಗ, ದಾಳಿಕೋರರು ಹೆಚ್ಚಿನ ಜನರನ್ನು ಕರೆತಂದು ದಾಳಿಯನ್ನು ತೀವ್ರಗೊಳಿಸಿದರು. ತಮ್ಮ ಕೃತ್ಯವನ್ನು ಸಮರ್ಥಿಸಿದ್ದ ಜಿಹಾದಿ ಗುಂಪು “ಜೈ ಶ್ರೀ ರಾಮ್ ಅಲ್ಲ, ಕೇವಲ ಅಲ್ಲಾಹ್” ಎಂದು ಹೇಳಿತು ಮತ್ತು ಕೇಸರಿ ಧ್ವಜಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿತು.
ಮಹಾರಾಷ್ಟ್ರದ ಅಮರಾವತಿಯಲ್ಲಿ ಈದ್-ಎ-ಮಿಲಾದ್-ಉನ್-ನಬಿ ಸಂದರ್ಭದಲ್ಲಿ “ಸರ್ ತನ್ ಸೆ ಜುದಾ” ಎಂಬ ಹಿಂಸಾತ್ಮಕ ಘೋಷಣೆಗಳನ್ನು ಎತ್ತಲಾಯಿತು. ಹಿಂಸಾತ್ಮಕ ಇಸ್ಲಾಮ್ ಗುಂಪು “ಗುಸ್ತಾಖ್-ಎ-ನಬಿ ಕಿ ಏಕ್ ಸಜಾ, ತನ್ ಸೆ ಸರ್ ಜುದಾ” ಎಂದು ಘೋಷಣೆ ಮಾಡಿತು – ಅಂದರೆ “ಪ್ರವಾದಿಯ ಅಪಮಾನಕ್ಕೆ ಶಿಕ್ಷೆ ದೇಹದಿಂದ ತಲೆಯನ್ನು ಬೇರ್ಪಡಿಸುವುದು” – ಪೊಲೀಸರು ಮೌನವಾಗಿ ನೋಡುತ್ತಿದ್ದರು.
2022ರ ಏಪ್ರಿಲ್ 16ರ ಜಹಾಂಗೀರ್ಪುರಿ ಹಿಂಸೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ವೈಫಲ್ಯವೆಂದು ಮಾತ್ರ ನೋಡಬಾರದು; ಇದು ದಾಳಿಕೋರರ ಸಮರ್ಥನೆಯನ್ನು ಪ್ರತಿಬಿಂಬಿಸುತ್ತದೆ. ಇಂತಹ ಕೃತ್ಯಗಳನ್ನು ಸಮಾಜ ಕಡೆಗಣಿಸಿ ಸಮರ್ಥಿಸಿದಾಗ, ತಪ್ಪನ್ನು ತಪ್ಪೆಂದು ಗುರುತಿಸುವ ಮನಸ್ಸುಗಳ ಸಂಖ್ಯೆ ಕಡಿಮೆಯಾಗುತ್ತದೆ. ಈ ಸವಾಲನ್ನು ಎದುರಿಸಲು ಕಟ್ಟುನಿಟ್ಟಾದ ಕಾನೂನು ಜಾರಿಯ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



