
ಮಂಡ್ಯ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಶ್ರೀ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನ ದರ್ಶನ ಪಡೆದಿದ್ದಾರೆ.
ಬಳಿಕ ಮಾತನಾಡಿದ ಅವರು, ಇಂದು ನನ್ನ ಹೃದಯ ತುಂಬಿದೆ, ಈ ಭಾವನೆಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟವಾಗುತ್ತಿದೆ. ಶ್ರೀ ಕಾಲ ಭೈರವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ಶ್ರೀ ಗುರು ಭೈರವೈಕ್ಯ ದೇಗುಲದ ಉದ್ಘಾಟನೆಯನ್ನು ಕಣ್ತುಂಬಿಕೊಂಡಿದ್ದು, ಐತಿಹಾಸಿಕ ಜ್ವಾಲಾಪೀಠದಲ್ಲಿ ಸಮಯ ಕಳೆದಿದ್ದು, ಆಧ್ಯಾತ್ಮಿಕ ಮೇರು ಶಿಖರ ತಲುಪಿದ ಸಂತರ ಸಾಮಿಪ್ಯ ಮತ್ತು ಇಲ್ಲಿ ನೆರೆದಿರುವ ಜನಸಮೂಹ ಈ ಎಲ್ಲಾ ಅನುಭವಗಳು ನನ್ನಲ್ಲಿ ಸದಾ ಹಸಿರಾಗಿರಲಿದೆ ಎಂದಿದ್ದಾರೆ.
ನಿಮ್ಮೆಲ್ಲರ ನಡುವೆ ಇರುವ ಅವಕಾಶ ಸಿಕ್ಕಿದ್ದು ಒಂದು ಸೌಭಾಗ್ಯ ಎಂದು ನಾನು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.
ಭಾರತವು ಸಾವಿರಾರು ವರ್ಷಗಳಿಂದ ಮುಂದುವರೆದುಕೊಂಡು ಬರುತ್ತಿರುವ ಜೀವಂತ ನಾಗರಿಕತೆಯಾಗಿದೆ. ಇಷ್ಟು ದೀರ್ಘಕಾಲದಿಂದ ಉಳಿದು ಮುಂದುವರೆದುಕೊಂಡು ಬರುತ್ತಿರುವ ಪರಂಪರೆಗಳ ಉದಾಹರಣೆ ಬಹಳ ಕಡಿಮೆ ಇದೆ. ನಾವು ಆದಿಚುಂಚಗಿರಿ ಮಹಾ ಸಂಸ್ಥಾನ ಮಠವನ್ನು ನೋಡಿದಾಗ ಅಂತಹ ಪರಂಪರೆಯ ನಿರಂತರತೆಯ ನಿಜ ರೂಪದ ದರ್ಶನವಾಗುತ್ತದೆ. ಈ ಪವಿತ್ರ ಮಠವು ಸುಮಾರು 2,000 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದರ ಗುರು ಪರಂಪರೆ, ಅದರ ಆಧ್ಯಾತ್ಮಿಕತೆ ಮತ್ತು ಅದರ ಸೇವಾ ಸಂಪ್ರದಾಯವು ಈ ಭೂಮಿಯನ್ನು ತಲೆಮಾರುಗಳಿಂದ ಶ್ರೀಮಂತಗೊಳಿಸಿದೆ ಎಂದಿದ್ದಾರೆ.
ನಮ್ಮ ಸಮಾಜದಲ್ಲಿ ಕಾಲಕಾಲಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಮಾತ್ರವಲ್ಲದೇ ಜನರ ನಡುವೆ ವಾಸಿಸಿ, ಅವರ ಸಂತೋಷ ಮತ್ತು ದುಃಖಗಳನ್ನು ಅರ್ಥಮಾಡಿಕೊಂಡ, ಅವರ ಹೋರಾಟಗಳ ಅನುಭವ ಪಡೆದ ಮತ್ತು ಸಮಾಜಕ್ಕೆ ದುಃಖ, ನೋವು ಮತ್ತು ಕಷ್ಟಗಳಿಂದ ಹೊರಬರುವ ಮಾರ್ಗವನ್ನು ತೋರಿಸಿದ ಮಹಾನ್ ವ್ಯಕ್ತಿಗಳ ಆಗಮನವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


