
ನವದೆಹಲಿ: ಉದ್ಯೋಗಿಗಳು ಬಿಂದಿ, ತಿಲಕ ಧರಿಸುವಂತಿಲ್ಲ ಆದರೆ ಕಪ್ಪು ಬಣ್ಣದ ಹಿಜಾಬ್ ಧರಿಸಬಹುದು ಎಂದು ಆದೇಶ ಹೊರಡಿಸಿರುವ ಲೆನ್ಸ್ಕಾರ್ಟ್ ವಿರುದ್ಧ ತೀವ್ರ ಆಕ್ರೋಶ ಭುಗಿಲೆದ್ದಿದೆ. ಧಾರ್ಮಿಕ ತಾರತಮ್ಯದ ಈ ಆದೇಶದ ವಿರುದ್ಧ ಆನ್ಲೈನ್ನಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಲೆನ್ಸ್ಕಾರ್ಟ್ ಸಂಸ್ಥಾಪಕ ಪಿಯೂಷ್ ಬನ್ಸಾಲ್ ಅವರು, ” ಆ ಸುತ್ತೋಲೆ ಹಳೆಯದಾಗಿದ್ದು ಸಂಸ್ಥೆಯ ಪ್ರಸ್ತುತ ನಿಲುವನ್ನು ಪ್ರತಿಬಿಂಬಿಸುವುದಿಲ್ಲ. ಆದರೆ ಉಂಟಾಗಿರುವ ಗೊಂದಲಕ್ಕೆ ಕ್ಷಮಾಪಣೆ ಕೇಳುತ್ತೇನೆ. ಉದ್ಯೋಗಿಗಳು ತಮ್ಮ ಧಾರ್ಮಿಕ ಗುರುತುಗಳನ್ನು ಪ್ರದರ್ಶಿಸಲು ಸಂಪೂರ್ಣ ಸ್ವತಂತ್ರರು” ಎಂದಿದೆ.
ಆದರೆ X ಬಳಕೆದಾರರು ಲೆನ್ಸ್ಕಾರ್ಟ್ ಮತ್ತು ಅದರ ಸಂಸ್ಥಾಪಕ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದು, ಆನ್ಲೈನ್ನಲ್ಲಿ ಪ್ರಸಾರವಾದ ಆದೇಶವನ್ನು ಫೆಬ್ರವರಿ 2026 ರಲ್ಲಿ ಹೊರಡಿಸಲಾಗಿದೆ ಎಂದಿದ್ದಾರೆ
“ಸರಿ, ಹಾಗಾದರೆ ನೀವು ನಿಮ್ಮ ಕಂಪನಿಯ ಪ್ರಸ್ತುತ ನೀತಿಯ ಪ್ರತಿಯನ್ನು ಸಾರ್ವಜನಿಕಗೊಳಿಸಬೇಕು. ಏಕೆಂದರೆ ನಾವು ನೋಡಿದ್ದು ನೀವು ಹೇಳುತ್ತಿರುವುದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಒಬ್ಬ X ಬಳಕೆದಾರರು ಬರೆದಿದ್ದಾರೆ.
“ಇದು ಫೆಬ್ರವರಿ ತಿಂಗಳ ನೀತಿ ಗೆಳೆಯ. ನೀವು ಯಾರನ್ನು ಮೂರ್ಖರನ್ನಾಗಿ ಮಾಡುತ್ತಿದ್ದೀರಿ? ಸಾರ್ವಜನಿಕರನ್ನೇ ಅಥವಾ ನಿಮ್ಮನ್ನೇ?” ಮತ್ತೊಬ್ಬರು ಹೇಳಿದ್ದಾರೆ.
Hi, all. I’ve been seeing an inaccurate policy document going viral about Lenskart.
I want to speak directly that this document does not reflect our present guidelines.
Our policy has no restrictions on any form of religious expression, including bindi and tilak, and we…
— Peyush Bansal (@peyushbansal) April 15, 2026
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


