News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹೊಸ ವರ್ಷಕ್ಕೆ ಹೋಟೆಲ್‌ ಬುಕ್ಕಿಂಗ್‌ನಲ್ಲಿ ಗೋವಾವನ್ನು ಹಿಂದಿಕ್ಕಿದ ವಾರಣಾಸಿ

ನವದೆಹಲಿ: ಹೊಸ ವರ್ಷ ಬಂತೆಂದರೆ ಹೆಚ್ಚಿನವರು ಗೋವಾ ಅಥವಾ ಕೇರಳ ಮುಂತಾದ ಸ್ಥಳಗಳಿಗೆ ತೆರಳಿ ಮೋಜು-ಮಸ್ತಿ, ವಿಶ್ರಾಂತಿ ಮಾಡುತ್ತಾರೆ. ಆದರೆ ಈ ಬಾರಿ ಮಾತ್ರ ಟ್ರೆಂಡ್‌ ಸ್ವಲ್ಪ ಬದಲಾವಣೆಯಾದ ಹಾಗೆ ಕಾಣಿಸುತ್ತಿದೆ.

ಈ ಹೊಸ ವರ್ಷದ ಸಂದರ್ಭದಲ್ಲಿ ಆಧ್ಯಾತ್ಮಿಕ ನಗರ ವಾರಣಾಸಿ ಅತಿಹೆಚ್ಚು ಜನರನ್ನು ಕೈಬೀಸಿ ಕರೆದಿದೆ. ಗೋವಾಗಿಂತ ಹೆಚ್ಚಿನ ಸಂಖ್ಯೆಯ ಹೋಟೆಲ್‌ ಬುಕ್ಕಿಂಗ್‌ ವಾರಣಾಸಿಯಲ್ಲಿ ನಡೆದಿದೆ.

ಈ ವರ್ಷ ವಾರಣಾಸಿಯ ಹೋಟೆಲ್ ಬುಕಿಂಗ್‌ನಲ್ಲಿ ಭಾರಿ ಏರಿಕೆ ಕಂಡಿದೆ, ಆನ್‌ಲೈನ್ ಹೋಟೆಲ್ ಬುಕಿಂಗ್ ಪ್ಲಾಟ್‌ಫಾರ್ಮ್ ಓಯೋದ ಸಂಸ್ಥಾಪಕ ಮತ್ತು ಸಿಇಒ ರಿತೇಶ್ ಅಗರ್ವಾಲ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

“ಗೋವಾದಿಂದ ಬುಕಿಂಗ್‌ಗಳು ಗಂಟೆಯಿಂದ ಗಂಟೆಗೆ ಏರುತ್ತಲೆ ಇದೆ. ಆದರೆ ಗೋವಾವನ್ನು ಹಿಂದಿಕ್ಕುತ್ತಿರುವ ನಗರ ವಾರಣಾಸಿ” ಎಂದಿದ್ದಾರೆ.

2022 ರ ಕೊನೆಯ ದಿನದಂದು ಟ್ವೀಟ್‌ ಮಾಡಿರುವ ಅವರು,””ಜಾಗತಿಕವಾಗಿ 700+ ನಗರಗಳಲ್ಲಿ ಹೋಟೆಲ್‌ ರೂಮ್ ಬಹುತೇಕ ಮಾರಾಟವಾಗಿವೆ. Oyo ಮಲೇಷ್ಯಾ, ಯುಕೆ, ಚೀನಾ, ಇಂಡೋನೇಷ್ಯಾ, ಯುಎಸ್, ಯುರೋಪ್ ಮತ್ತು ಗಲ್ಫ್‌ನಲ್ಲಿ ಅಸ್ತಿತ್ವವನ್ನು ಹೊಂದಿದೆ. Oyo  ಈ ಹೊಸ ವರ್ಷದ ಮುನ್ನಾದಿನದಂದು ಜಾಗತಿಕವಾಗಿ 450k+ ಬುಕ್ಕಿಂಗ್‌ಗಳನ್ನು ನೋಡಿದೆ. ಇದು ಕಳೆದ ವರ್ಷಕ್ಕಿಂತ 35 ಶೇಕಡಾ ಹೆಚ್ಚು” ಎಂದಿದೆ.

“ಕಳೆದ 5 ವರ್ಷಗಳಲ್ಲೇ ಈ ವರ್ಷ ಭಾರತದಲ್ಲಿ ದಿನಕ್ಕೆ ಒಂದು ಹೋಟೆಲ್‌ಗೆ ಅತಿ ಹೆಚ್ಚು ಬುಕಿಂಗ್‌ಗಳನ್ನು ನಾವು ಇಂದು ನೋಡುತ್ತಿದ್ದೇವೆ. ಹೆಚ್ಚುವರಿಯಾಗಿ, 750+ ನಗರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಬುಕಿಂಗ್‌ನಲ್ಲಿ 50 ಪ್ರತಿಶತದಷ್ಟು ಜಿಗಿತವನ್ನು ಕಂಡಿವೆ ” ಎಂದು ಅಗರ್ವಾಲ್ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top