News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

1,000 ಮಿಲಿಯನ್ ಟನ್ ಸರಕು ಸಾಗಣೆ ಮೈಲಿಗಲ್ಲು ಸಾಧಿಸಿದ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೇ ಪ್ರಸಕ್ತ ಹಣಕಾಸು ವರ್ಷದಲ್ಲಿ 1,000 ಮಿಲಿಯನ್ ಟನ್ ಸರಕು ಸಾಗಣೆ ಗಡಿಯನ್ನು ದಾಟುವ ಮೂಲಕ ಸರಕು ಸಾಗಣೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದೆ.

ಇಲ್ಲಿಯವರೆಗೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ರೈಲ್ವೆಯು 1,002 ಮಿಲಿಯನ್‌ ಟನ್ ಸರಕುಗಳನ್ನು ಲೋಡ್ ಮಾಡಿದೆ. ಕಳೆದ ಹಣಕಾಸ ವರ್ಷದ ಅವಧಿಯಲ್ಲಿ ಮಹತ್ವ  ಮೈಲಿಗಲ್ಲನ್ನು 6 ಡಿಸೆಂಬರ್ 2021 ರಂದು ಸಾಧಿಸಲಾಗಿದ್ದು, ರೈಲ್ವೆಯು 926.4 MT ಸರಕು ಸಾಗಣೆಯನ್ನು ಮಾಡಿತ್ತು.

ಕಳೆದ ವರ್ಷಕ್ಕಿಂದ ಈ ಹಣಕಾಸು ವರ್ಷದಲ್ಲಿ, ಭಾರತೀಯ ರೈಲ್ವೆ 76.3 ಮಿಲಿಯನ್‌ ಹೆಚ್ಚಿನ ಸರಕು ಲೋಡ್‌ ಮಾಡಿದೆ. ಈ ಮೂಲಕ 8.25 ಶೇಕಡಾ ಬೆಳವಣಿಗೆಯೊಂದಿಗೆ ದಾಖಲೆ ಬರೆದಿದೆ.

ಆದಾಯದ ಪರಿಭಾಷೆಯಲ್ಲಿ, ಸರಕು ಸಾಗಣೆ ಆದಾಯವು ಪ್ರಸಕ್ತ ವರ್ಷದಲ್ಲಿ 108,593 ಕೋಟಿ ರೂ.ಗೆ ಸಮೀಪದಲ್ಲಿದೆ, ಇದು ಕಳೆದ ವರ್ಷ 6 ಡಿಸೆಂಬರ್ 2021 ರವರೆಗೆ 93,532 ಕೋಟಿ ರೂ.ಗಳಷ್ಟಿತ್ತು, ಹೀಗಾಗಿ ಶೇ.16.10 ರಷ್ಟು ಸುಧಾರಣೆಯನ್ನು ತೋರಿಸುತ್ತದೆ.

ಸರಕುಗಳ ಪೈಕಿ ಅತಿಹೆಚ್ಚು ಶೇ. 48 ರಷ್ಟು ಕಲ್ಲಿದ್ದಲು ಸಾಗಾಣೆ ಮಾಡಲಾಗಿದೆ. ಎರಡನೇ ಅತಿದೊಡ್ಡ ಸಾಗಾಣೆ ಕಲ್ಲು, ಬೂದಿ, ಬಾಕ್ಸೈಟ್, ಲೋಹಗಳು, ಆಟೋಮೊಬೈಲ್‌ಗಳು, ಜಿಪ್ಸಮ್ ಉಪ್ಪು, ಉಪ್ಪು ಇತ್ಯಾದಿಗಳು. ಇದು ಶೇಕಡಾ 10 ರಷ್ಟು ಆಗಿದೆ.

ಮೂರನೇ ಅತಿ ದೊಡ್ಡ ಸಾಗಾಣೆಯೆಂದರೆ ಸಿಮೆಂಟ್ ಮತ್ತು ಕ್ಲಿಂಕರ್ ಗ್ರೂಪ್.‌ ಇದು, ಪ್ರಮಾಣದಲ್ಲಿ ಶೇಕಡಾ 8 ರಷ್ಟು ಆಗಿದೆ. ನಂತರ ರಸಗೊಬ್ಬರಗಳು 13.9 ರಷ್ಟು ಸಾಗಾಣೆ ಕಂಡಿವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top