ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬೈನ ಸರ್ಕಾರಿ ಆಸ್ಪತ್ರೆಯಲ್ಲಿ 132 ವರ್ಷಗಳಷ್ಟು ಹಳೆಯದಾದ ಸುರಂಗವೊಂದು ಪತ್ತೆಯಾಗಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಮುಂಬೈನ ಬೈಕುಲ್ಲಾದಲ್ಲಿರುವ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ವಿಭಾಗದ ಕಟ್ಟಡದ ಅಡಿಯಲ್ಲಿ 200 ಮೀಟರ್ ಉದ್ದದ ಸುರಂಗ ಪತ್ತೆಯಾಗಿದೆ.
“ನೀರು ಸೋರಿಕೆಯ ದೂರಿನ ನಂತರ ನಾವು ನರ್ಸಿಂಗ್ ಕಾಲೇಜು ಕಟ್ಟಡವನ್ನು ಪರಿಶೀಲಿಸಿದ್ದೇವೆ. ಪಿಡಬ್ಲ್ಯೂಡಿ ಎಂಜಿನಿಯರ್ಗಳು ಮತ್ತು ಭದ್ರತಾ ಸಿಬ್ಬಂದಿ ಕಟ್ಟಡವನ್ನು ಸರ್ವೆ ಮಾಡಿ 132 ವರ್ಷಗಳಷ್ಟು ಹಳೆಯದಾದ ಸುರಂಗವನ್ನು ಕಂಡು ಹಿಡಿದಿದ್ದಾರೆ. ಸುರಂಗವನ್ನು ಒಂದು ತುದಿಯಿಂದ ಮುಚ್ಚಲಾಗಿದೆ” ಎಂದು ಆಸ್ಪತ್ರೆ ವೈದ್ಯಾಧಿಕಾರಿ ಡಾ ಅರುಣ್ ರಾಥೋಡ್ ಹೇಳಿದ್ದಾರೆ.
200 ಮೀಟರ್ ಉದ್ದದ ರಚನೆಯು ಕಟ್ಟಡದ ಅಡಿಯಲ್ಲಿ ಕಂಡುಬಂದಿದೆ ಎಂದು ವರದಿಗಳು ಸೂಚಿಸುತ್ತವೆ, ಕಟ್ಟಡ ಮೂಲತಃ ಸರ್ ದಿನ್ಶಾ ಮಾನೋಕ್ಜಿ ಪೆಟಿಟ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಾಗಿದ್ದು ಅದನ್ನು ನಂತರ ನರ್ಸಿಂಗ್ ಕಾಲೇಜಾಗಿ ಪರಿವರ್ತಿಸಲಾಯಿತು. ಸುರಂಗ ಪತ್ತೆಯಾದ ಕೂಡಲೇ, ಕಟ್ಟಡವು ಪಾರಂಪರಿಕ ರಚನೆಯಾಗಿರುವುದರಿಂದ ಆವಿಷ್ಕಾರದ ಬಗ್ಗೆ ಅಧಿಕಾರಿಗಳು ಮುಂಬೈ ಕಲೆಕ್ಟರ್ ಮತ್ತು ಮಹಾರಾಷ್ಟ್ರ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸುರಂಗವು 4.5 ಅಡಿ ಎತ್ತರದಲ್ಲಿದೆ ಮತ್ತು ಹಲವಾರು ಇಟ್ಟಿಗೆ ಕಂಬಗಳನ್ನು ಹೊಂದಿದೆ ಮತ್ತು ಪ್ರವೇಶದ್ವಾರವನ್ನು ಕಲ್ಲಿನ ಗೋಡೆಯಿಂದ ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಆಸ್ಪತ್ರೆಯ ಕೆಲವು ಮಾಜಿ ಉದ್ಯೋಗಿಗಳ ಪ್ರಕಾರ, ಈ ಕಟ್ಟಡದ ಹಿಂದೆ ಇರುವ ಮತ್ತೊಂದು ಬ್ರಿಟಿಷ್-ಯುಗದ ಕಟ್ಟಡವು ಕೆಳಭಾಗದಲ್ಲಿ ಇದೇ ರೀತಿಯ ರಚನೆಯನ್ನು ಹೊಂದಿದೆ, ಆದರೆ ಅದನ್ನು ಇನ್ನೂ ಪರಿಶೀಲಿಸಲಾಗಿಲ್ಲ. ಎರಡು ಕಟ್ಟಡಗಳನ್ನು ಸುರಂಗದ ಮೂಲಕ ಸಂಪರ್ಕಿಸಬಹುದು.
ಬ್ರಿಟಿಷರ ಕಾಲದ ಪಾರಂಪರಿಕ ಕಟ್ಟಡಕ್ಕೆ ಆಗಿನ ಬಾಂಬೆಯ ಗವರ್ನರ್ ಲಾರ್ಡ್ ರೇ ಅವರು ಜನವರಿ 27, 1890 ರಂದು ದ ಶಿಲಾನ್ಯಾಸ ಹಾಕಿದರು ಎಂದು ಡಾ. ರಾಥೋಡ್ ಹೇಳಿದ್ದಾರೆ. ಸುರಂಗ ಪತ್ತೆಯಾದ ಕಟ್ಟಡವನ್ನು ಆರ್ಕಿಟೆಕ್ಚರಲ್ ಎಕ್ಸಿಕ್ಯೂಟಿವ್ ಜಾನ್ ಆಡಮ್ಸ್ ವಿನ್ಯಾಸಗೊಳಿಸಿದ್ದು, ಮಾರ್ಚ್ 15, 1892 ರಂದು ಉದ್ಘಾಟಿಸಲಾಗಿದೆ. ಇದರ ನಿರ್ಮಾಣ ವೆಚ್ಚ 1,19,351 ರೂಪಾಯಿಗಳು. ಜೆಜೆ ಆಸ್ಪತ್ರೆಯ ಆವರಣವು ಹಲವಾರು ಬ್ರಿಟಿಷರ ಕಾಲದ ಪರಂಪರೆಯ ರಚನೆಗಳನ್ನು ಹೊಂದಿದೆ.
Maharashtra | A 132-year-old tunnel has been discovered at the govt-run JJ Hospital in Mumbai’s Byculla. Built in the British Era, the 200-metre-long tunnel was found under the building of a medical ward (04.11) pic.twitter.com/RuNv2rbggP
— ANI (@ANI) November 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.