ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗದ ವಹಿವಾಟು 1.15 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆಸುವ ಮೂಲಕ ದಾಖಲೆ ಬರೆದಿದೆ. ಅದರ ಉತ್ಪನ್ನಗಳ ಮಾರಾಟದಲ್ಲಿ ಭಾರೀ ಬೆಳವಣಿಗೆ ದಾಖಲಾಗಿದೆ.
ಖಾದಿ ಮತ್ತು ಅದರ ಉತ್ಪನ್ನಗಳಿಗೆ ಹೆಚ್ಚಿನ ಜಾಗತಿಕ ಬೇಡಿಕೆಯ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ವಹಿವಾಟು 1.15 ಲಕ್ಷ ಕೋಟಿ ರೂಪಾಯಿ ದಾಟಿದೆ ಎಂದು ಅಂದಾಜಿಸಲಾಗಿದೆ.
ಕಳೆದ ಎಂಟು ವರ್ಷಗಳಲ್ಲಿ ಭಾರತವು ಖಾದಿ ಉತ್ಪನ್ನಗಳ ಮಾರಾಟದಲ್ಲಿ ನಾಲ್ಕು ಪಟ್ಟು ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಜಾಗತಿಕವಾಗಿ ಖಾದಿ ಫ್ಯಾಬ್ರಿಕ್ ಸ್ಥಳೀಯ ಮತ್ತು ಸಾಗರೋತ್ತರ ಗ್ರಾಹಕರಿಂದ ಹೆಚ್ಚು ಒಲವು ಪಡೆದುಕೊಂಡಿದೆ, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾವಲಂಬನೆಗಾಗಿ ಖಾದಿ ಅನ್ನು ನಿರಂತರ ಪ್ರೋತ್ಸಾಹಿಸುತ್ತಿದ್ದಾರೆ.
ಖಾದಿ ಬಟ್ಟೆಯ ಹೆಚ್ಚಿನ ಜನಪ್ರಿಯತೆಗೆ ಕಾರಣವೆಂದರೆ ಅದು ಚಳಿಗಾಲ ಮತ್ತು ಬೇಸಿಗೆ ಎರಡಕ್ಕೂ ಕೇಳಿ ಮಾಡಿಸಿದ ಬಟ್ಟೆ. ಜೊತೆಗೆ ದೇಶಭಕ್ತಿಯ ಉತ್ಸಾಹವನ್ನು ಹೊಂದಿದೆ. “2021-22 ರಲ್ಲಿ, ಖಾದಿ ಗ್ರಾಮೋದ್ಯೋಗ ಆಯೋಗ (KVIC) ಯ ಒಟ್ಟಾರೆ ವಹಿವಾಟು 1,15,415.22 ಕೋಟಿ ರೂ. ಹಿಂದಿನ ವರ್ಷದಲ್ಲಿ ಇದು 95,741.74 ಕೋಟಿ ರೂ. ಆಗಿತ್ತ. ಅಂದರೆ ಶೇ.20.54 ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಇಲಾಖೆ ತಿಳಿಸಿದೆ.
2021 ರ ಮೊದಲ ಮೂರು ತಿಂಗಳಲ್ಲಿ ಭಾಗಶಃ ಲಾಕ್ಡೌನ್ ಹೊರತಾಗಿಯೂ ಖಾದಿ ಉತ್ಪನ್ನಗಳ ಮಾರಾಟದಲ್ಲಿ ದಾಖಲೆಯ ಬೆಳವಣಿಗೆ ಸಂಭವಿಸಿದೆ. “ಖಾದಿ ಉತ್ಪನ್ನಗಳು ಮತ್ತು ಬಟ್ಟೆಗಳು ಯುನೈಟೆಡ್ ಸ್ಟೇಟ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್, ಮಾರಿಷಸ್, ಆಸ್ಟ್ರೇಲಿಯಾ, ಕೆನಡಾ, ರಷ್ಯಾ, ಭೂತಾನ್, ಕತಾರ್, ಶ್ರೀಲಂಕಾ, ಯುನೈಟೆಡ್ ಕಿಂಗ್ಡಮ್, ಜರ್ಮನಿ, ಜಪಾನ್, ಇಟಲಿ, ನ್ಯೂಜಿಲೆಂಡ್ ಮತ್ತು ಇತರ ಹಲವು ಯುರೋಪಿಯನ್ ಮತ್ತು ಪಶ್ಚಿಮ ಏಷ್ಯಾ ದೇಶಗಳು ಸೇರಿದಂತೆ 18 ದೇಶಗಳಲ್ಲಿ ಜನಪ್ರಿಯತೆಯನ್ನು ಗಳಿಸಿವೆ”ಎಂದು ಹಿರಿಯ ಕೆವಿಐಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.