News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದಿನಿಂದ ನವದೆಹಲಿಯಲ್ಲಿ 90ನೇ ಇಂಟರ್‌ಪೋಲ್ ಜನರಲ್ ಅಸೆಂಬ್ಲಿ

ನವದೆಹಲಿ: ಭಾರತವು ನವದೆಹಲಿಯಲ್ಲಿ 90ನೇ ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯನ್ನು ಇಂದು ಆಯೋಜಿಸಿದೆ.

ಇಂಟರ್‌ನ್ಯಾಶನಲ್ ಕ್ರಿಮಿನಲ್ ಪೋಲೀಸ್ ಆರ್ಗನೈಸೇಶನ್ (ಇಂಟರ್‌ಪೋಲ್) 195 ಸದಸ್ಯ ರಾಷ್ಟ್ರಗಳನ್ನು ಒಳಗೊಂಡ, ಫ್ರಾನ್ಸ್‌ನ ಲಿಯಾನ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಶ್ವದ ಅತಿದೊಡ್ಡ ಅಂತರರಾಷ್ಟ್ರೀಯ ಪೊಲೀಸ್ ಸಂಸ್ಥೆಯಾಗಿದೆ.

ಇಂಟರ್‌ಪೋಲ್‌ನ 90ನೇ ವಾರ್ಷಿಕ ಮಹಾಸಭೆಯು ಅಕ್ಟೋಬರ್ 18-21ರ ನಡುವೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ದೆಹಲಿಯಲ್ಲಿ ನಡೆಯುವ ಇಂಟರ್‌ಪೋಲ್ ಸಭೆಯಲ್ಲಿ ಸಚಿವರು, ರಾಷ್ಟ್ರಗಳ ಪೊಲೀಸ್ ಮುಖ್ಯಸ್ಥರು, ರಾಷ್ಟ್ರೀಯ ಕೇಂದ್ರ ಬ್ಯೂರೋಗಳ ಮುಖ್ಯಸ್ಥರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 195 ಇಂಟರ್‌ಪೋಲ್ ಸದಸ್ಯ ರಾಷ್ಟ್ರಗಳ ನಿಯೋಗಗಳು ಭಾಗವಹಿಸಲಿವೆ.

ಇಂಟರ್‌ಪೋಲ್‌ನ ಸರ್ವೋಚ್ಚ ಆಡಳಿತ ಮಂಡಳಿ, ಅದರ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಲ್ ಅಸೆಂಬ್ಲಿ ವರ್ಷಕ್ಕೊಮ್ಮೆ ಸಭೆ ಸೇರುತ್ತದೆ. 1997 ರಲ್ಲಿ ನಡೆದ ಸಭೆಯ ನಂತರ 25 ವರ್ಷಗಳ ನಂತರ ಭಾರತದಲ್ಲಿ ಸಭೆ ನಡೆಯಲಿದೆ.

ಸಂಸ್ಥೆಯು ನಾಲ್ಕು ಆಡಳಿತ ವಿಭಾಗಗಳನ್ನು ಹೊಂದಿದೆ. ಅದೆಂದರೆ ಜನರಲ್ ಅಸೆಂಬ್ಲಿ, ಜನರಲ್ ಸೆಕ್ರೆಟರಿಯೇಟ್, ಕಾರ್ಯಕಾರಿ ಸಮಿತಿ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top