RSS ಬಗ್ಗೆ ಮಾತನಾಡುವವರು ಈಗೀಗ ಎತ್ತುತ್ತಿರುವ ಪ್ರಶ್ನೆ, RSS ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತಾ? ಎಂಬುದು. ರೋಷಾವೇಶದಿಂದ ಈ ಪ್ರಶ್ನೆಯನ್ನು ಕೇಳುವುದನ್ನು ನಾವು ನೋಡಿದ್ದೇವೆ. RSS ನಿಜಕ್ಕೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿತ್ತೇ? ಎಂಬ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ.
RSS ಹಾಗೂ ಅದರ ಸಂಸ್ಥಾಪಕಾರದ ಡಾ.ಕೇಶವ ಬಲಿರಾಮ ಹೆಡ್ಗೇವಾರ್ ಅವರ ಸಹಿತವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಸೂರ್ಯ ಚಂದ್ರರಷ್ಟೇ ಸತ್ಯ.! ಹೌದು. ಕೇಶವ ಬಲಿರಾಮ ಹೆಡ್ಗೇವಾರ್ ಅವರು ಸಂಘವನ್ನು ಸ್ಥಾಪಿಸುವ ಮುನ್ನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪಕ್ಷದ ಕಾರ್ಯಕರ್ತರು ಹಾಗೂ ನಾಗಪುರದ ಮುಖಂಡರೂ ಆಗಿದ್ದನ್ನು ನಾವು ಗಮನಿಸಬೇಕು, 1919-1924 ರ ಸಂದರ್ಭದಲ್ಲಿ ನಡೆದಿದ್ದ ಖಿಲಾಪತ್ ಚಳುವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಡಾ.ಜಿ ಸುಮಾರು 1 ವರ್ಷಗಳ ಕಾಲ ಬಂಧನಕ್ಕೊಳಗಾಗಬೇಕಾಯಿತು. 1930 ರ ಸಮಯದಲ್ಲಿ ನಡೆದ ಜಂಗಲ್ ಸತ್ಯಾಗ್ರಹದಲ್ಲೂ ಸಹ ಡಾ.ಜಿ ಅವರು ಪಾಲ್ಗೊಂಡಿದ್ದರು.
ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಡಾ.ಜಿ ಹೆಡ್ಗೇವಾರ್ ಅವರಿಗೆ ದೇಶದ ಬಗ್ಗೆ ಹಾಗೂ ಸ್ವಾತಂತ್ರ್ಯದ ಬಗ್ಗೆ ಸ್ಪಷ್ಟತೆ ಇತ್ತು ಎಂಬುದು ಈ ಒಂದು ಘಟನೆಯಿಂದ ತಿಳಿಯುತ್ತದೆ, ಒಮ್ಮೆ ಡಾ.ಜಿ ಅವರು ಓದುತ್ತಿದ್ದ ನಾಗಪುರದ ನೀಲ್ ಸಿಟಿ ಶಾಲೆಯಲ್ಲಿ ಅವರು ಪ್ರಾಥಮಿಕ ತರಗತಿಯಲ್ಲಿ ಓದುತ್ತಿದ್ದಾಗಲೇ ವಿಕ್ಟೋರಿಯಾ ರಾಣಿಯ 60 ನೇ ಜಯಂತಿ ನಿಮಿತ್ತ ಶಾಲೆಯಲ್ಲಿ ವಿತರಿಸಿದ್ದ ಲಡ್ಡುವನ್ನು ತಿನ್ನದೇ ಅದನ್ನು ಎಸೆದಿದ್ದರು, ನಮ್ಮ ದೇಶದ ಸ್ವಾತಂತ್ರ್ಯವನ್ನು ಕಸಿದುಕೊಂಡವರ ಜನ್ಮದಿನವನ್ನು ಆಚರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಸಣ್ಣ ವಯಸ್ಸಿನಲ್ಲಿಯೇ ಅವರಲ್ಲಿತ್ತು.! 18 ರ ವಯಸ್ಸಿನಲ್ಲಿಯೇ ಬಾಂಬನ್ನು ತಯಾರಿಸಿ ಸ್ಥಳೀಯ ಪೊಲೀಸ್ ಠಾಣೆ ಮೇಲೆ ಎಸೆದಿದ್ದರು ಡಾ.ಜಿ.
ಕಲ್ಕತ್ತಾದಲ್ಲಿ ತಾವು ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾಗ ಕ್ರಾಂತಿಕಾರಿಗಳೊಂದಿಗೆ ನಿಕಟಪೂರ್ವ ಸಂಪರ್ಕವಿತ್ತು. ತಮ್ಮ ಶಿಕ್ಷಣ ಮುಗಿಸಿ ನಾಗಪುರಕ್ಕೆ ಹಿಂದಿರುಗಿದ ನಂತರ ಕಾಂಗ್ರೆಸ್ ಪಕ್ಷ ಸೇರಿ 1920 ರ ನಾಗಪುರ ಎಐಸಿಸಿ ಅಧಿವೇಶನದಲ್ಲಿ ಸ್ವಯಂಸೇವಾ ಪಡೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಮಹಾತ್ಮಗಾಂಧಿ ಆರಂಭಿಸಿದ್ದ ಅಸಹಕಾರ ಚಳುವಳಿಯಲ್ಲಿಯೂ ಸಹ ಡಾ.ಜಿ ತಮ್ಮ ಸ್ನೇಹಿತರೊಂದಿಗೆ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿದ್ದರು. 1929, ಡಿಸೆಂಬರ್31 ರಂದು ನಡೆದ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ 1930 ಜನವರಿ 26 ರನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಣೆ ಮಾಡಲು ನಿರ್ಧರಿಸಿತ್ತು, ಡಾ.ಜಿ ಹೆಡ್ಗೇವಾರ್ ಅವರು ಕೂಡಾ ಸಂಘದ ಎಲ್ಲಾ ಶಾಖೆಗಳಲ್ಲೂ ಆ ದಿನ ರಾಷ್ಟ್ರಧ್ವಜ ಹಾರಿಸಲು ಸೂಚನೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಕಾಂಗ್ರೆಸ್ ಗೆ ಬೆಂಬಲ ನೀಡುತ್ತಿದ್ದದ್ದನ್ನು ಗಮನಿಸಿದ ಬ್ರಿಟಿಷರು ಸರ್ಕಾರಿ ಉದ್ಯೋಗದಲ್ಲಿದ್ದವರು ಆರೆಸ್ಸೆಸ್ ಜತೆಗೆ ಸಂಪರ್ಕ ಹೊಂದಿರಬಾರದು ಎಂಬ ಸುತ್ತೋಲೆಯನ್ನು ಹೊರಡಿಸಿತ್ತು. ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಆಸಫ್ ಆಲಿ ಒಂದು ಸಂದರ್ಶನದಲ್ಲಿ ಹೀಗೆ ಹೇಳಿದ್ದರು.. ” 1942 ರ ಸತ್ಯಾಗ್ರಹದ ಸಂದರ್ಭದಲ್ಲಿ ಬ್ರಿಟಿಷರಿಂದ ಕಣ್ಣು ತಪ್ಪಿಸಿಕೊಂಡು ನಾನು ಅಡಗಿದ್ದು ದೆಹಲಿಯ ಆರೆಸ್ಸೆಸ್ ನ ಸಂಘಚಾಲಕರಾಗಿದ್ದ ಲಾಳ ಹಂಸರಾಜ ಗುಪ್ತರ ಮನೆಯಲ್ಲಿ , ಸುಮಾರು 2 ವಾರಗಳ ಕಾಲ ನನಗೆ ಯಾವುದೇ ತೊಂದರೆ ಆಗದಂತೆ ನನ್ನನ್ನು ಲಾಲಾಜಿ ಅವರು ನೋಡಿಕೊಂಡಿದ್ದರು. ಅಲ್ಲದೇ ಲಾಲಾಜಿ ಅವರ ಪತ್ನಿ ತಮ್ಮ ಗಾಗ್ರ ಮತ್ತು ಚುನರಿಯನ್ನು ನನಗೆ ಕೊಟ್ಟು ಸಹಾಯ ಮಾಡಿದ್ದರು” ಎಂದು ಹೇಳಿದ್ದರು. ಇಂತಹ ಅನೇಕ ಸ್ವಯಂಸೇವಕರು ತಮ್ಮ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರ ಕಣ್ಣು ತಪ್ಪಿಸಿ ಆಶ್ರಯ ನೀಡಿದ್ದರು.
ಸಂಘದ ಬಗ್ಗೆ ಎಳ್ಳಷ್ಟೂ ತಿಳಿಯದವರೆಲ್ಲ ಸಂಘ ಆಳ ಅಗಲದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಾರೆ, ಸ್ವಾತಂತ್ರ್ಯ ಹೋರಾಟದಲ್ಲಿ RSS ಪಾತ್ರದ ಬಗ್ಗೆ ಗೊತ್ತಿಲ್ಲದವರೂ ಸಹ ಅದೇ ರೀತಿ ತಮಗೆ ಗೊತ್ತಿರುವುದೇ ಸತ್ಯ ಎಂದು ತಿಳಿದು ಸಮಾಜಕ್ಕೆ ತಪ್ಪು ಮಾಹಿತಿಯನ್ನು ಹಂಚುತ್ತಾರೆ.! ಯಾರೆಷ್ಟೇ ಸುಳ್ಳು ಸುದ್ಧಿಯನ್ನು ಹರಡಿದರೂ ಸಹ ಸಂಘ ಕಾರ್ಯ ನಿರಂತರವಾಗಿ ನಡೆಯುತ್ತಿದೆ ನಡೆಯುತ್ತದೆ ಕೂಡಾ.!
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.