(3) ಗೋಲ್ವಾಲ್ಕರರನ್ನು ಇನ್ನಿಲ್ಲದಂತೆ ಬಯ್ಯುವುದಕ್ಕೆಂದೇ ಅಧ್ಯಾಯಗಳನ್ನು ಮುಡಿಪಾಗಿಟ್ಟಿರುವ ಮಹಾದೇವ, ಒಂದೆರಡು ಸುಳ್ಳುಗಳಲ್ಲ, ಸುಳ್ಳುಗಳ ಸರಮಾಲೆಯನ್ನೇ ಹೆಣೆದಿದ್ದಾರೆ. ಸಂವಿಧಾನವನ್ನು ಬದಲಿಸಬೇಕೆಂದು ಗೋಲ್ವಾಲ್ಕರ್ ಹೇಳಿದ್ದಾರೆ – ಎಂದು ಸುಳ್ಳು ಹೇಳುವ ಮಹಾದೇವ, ಆ ಮಾತಿನ ಹಿಂದುಮುಂದಿನ ವಾಕ್ಯಗಳಲ್ಲಿ ಗೋಲ್ವಾಲ್ಕರರು ಏನು ಹೇಳಿದ್ದಾರೆಂಬುದನ್ನು ಮುಚ್ಚಿಡುತ್ತಾರೆ! ಪೂರ್ಣಪಾಠ ನೋಡಿ: Let the Constitution be re-examined and re-drafted, so as to establish the Unitary form of Government and thus effectively disprove the mischievous propaganda indulged in by the British and so unwittingly imbibed by the present leaders, about our being just a juxtaposition of so many distinct ‘ethnic groups’ or ‘nationalities’ happening to live side by side and grouped together by the accident of geographical contiguity and one uniform supreme foreign domination. Let us be grateful to the makers of the present Constitution as also to the worthy members of the States Reorganisation Committee (1956) for the services rendered but let us not allow the nation to become a house divided against itself and heading towards destruction by falling to pieces. – ಗೋಲ್ವಾಲ್ಕರ್ ಹೇಳುವ ಈ ಮಾತುಗಳು, ಅವರು ಸಂವಿಧಾನದ ಬಗ್ಗೆ ಆಡಿದರೆನ್ನಲಾದ ಆಕ್ಷೇಪಾರ್ಹ ವಾಕ್ಯಗಳ ಆಚೀಚೆಯಲ್ಲೇ ಇವೆಯೆಂಬುದನ್ನು ಬಹುಶಃ ಮಹಾದೇವ ಗಮನಿಸಿಲ್ಲ!
(4) ಯಾವ ಚಿಂತನಗಂಗಾ ಕೃತಿಯನ್ನು ಮಹಾದೇವ ಉಲ್ಲೇಖಿಸುತ್ತಾರೋ ಅದೇ ಕೃತಿಯಲ್ಲಿ ಗೋಲ್ವಾಲ್ಕರ್ “With the amendments striking at the very heart of the Constitution coming up every now and then, people are exhorted to pledge themselves to uphold the sanctity of the Constitution and the integrity of the country! And who are those that administer the pledge? The determined disrupters of the constitution and the ‘partition experts’ of our country! Can mockery go further?” ಎಂದು ಬರೆಯುತ್ತಾರಲ್ಲ, ಅದನ್ನು ಮಹಾದೇವ ಯಾಕೆ ಹೇಳುವುದಿಲ್ಲ? ಸಂವಿಧಾನವನ್ನು ಬದಲಿಸಬೇಕೆಂಬ ಧಾರ್ಷ್ಟ್ಯದಿಂದ ಮಾತಾಡುವವನು ಮೇಲಿನ ಮಾತುಗಳನ್ನು ಹೇಳಲು ಸಾಧ್ಯವಾ? ಡಾ. ಅಂಬೇಡ್ಕರರು ಬರೆದ ಸಂವಿಧಾನದ ಸೆಕ್ಯುಲರ್ ಭಾವನೆಗಳಿಗೆ ಗೋಲ್ವಾಲ್ಕರರು ವಿರುದ್ಧವಾಗಿದ್ದರು – ಎಂದು ಹೇಳುವ ಮಹಾದೇವ, ಅದೇ ಗೋಲ್ವಾಲ್ಕರರು ತಮ್ಮ ಕೃತಿಯಲ್ಲಿ “ಇಡೀ ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಪದವೇ ಇಲ್ಲ” – ಎಂದೂ ಬರೆದಿದ್ದಾರೆಂಬುದನ್ನು ಒಪ್ಪಿಕೊಳ್ಳುತ್ತಾರಾ? ಒಪ್ಪಿಕೊಳ್ಳುವುದಿಲ್ಲವೆಂದರೆ ಅವರು ಡಾ. ಅಂಬೇಡ್ಕರ್ ಬರೆದ ಮೂಲ ಸಂವಿಧಾನದಲ್ಲಿ “ಸೆಕ್ಯುಲರ್” ಶಬ್ದವನ್ನು ಎತ್ತಿತೋರಿಸಿ ಯಾಕೆ ಗೋಲ್ವಾಲ್ಕರರನ್ನು ಸೋಲಿಸಬಾರದು?
(5) ಮಹಾದೇವರ ಮುಂದಿನ ಆರೋಪ, ಗೋಲ್ವಾಲ್ಕರರು ಹಿಟ್ಲರ್ ಮತ್ತು ನಾಜಿಗಳ ಪರವಾಗಿ ಮಾತಾಡಿದರು ಎಂಬುದು. “ಜರ್ಮನಿ ತನ್ನ ಜನಾಂಗ ಹಾಗೂ ಸಂಸ್ಕೃತಿಯ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ದೇಶದಲ್ಲಿದ್ದ ಸೆಮೆಟಿಕ್ ಜನಾಂಗದ ಯಹೂದ್ಯರನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಿ ಪ್ರಪಂಚವನ್ನೇ ಬೆಚ್ಚಿಬೀಳಿಸಿತು. ಇಲ್ಲಿ ಅತ್ಯುಚ್ಚಮಟ್ಟದ ಜನಾಂಗೀಯ ಅಭಿಮಾನ ತೋರಿ ಬಂದಿದೆ. ಹಿಂದುಸ್ಥಾನದಲ್ಲಿರುವ ನಾವು ಈ ಉತ್ತಮ ಪಾಠದಿಂದ ಕಲಿಯಬೇಕಾಗಿದೆ ಮತ್ತು ಲಾಭ ಪಡೆಯಬೇಕಾಗಿದೆ” – ಎಂದು ಗೋಲ್ವಾಲ್ಕರ್ ಹೇಳಿದ್ದಾರೆಂದು ಮಹಾದೇವ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಆದರೆ ಈ ವಾಕ್ಯಗಳ ನಡುವೆ ಮೂಲದಲ್ಲಿ ಇದ್ದ ಒಂದು ವಾಕ್ಯವನ್ನು ಮಹಾದೇವ ತನ್ನ ಪುಸ್ತಕದಲ್ಲಿ ಉದ್ದೇಶಪೂರ್ವಕ ಬಿಟ್ಟಿದ್ದಾರೆ. ಅದು ಹೀಗಿದೆ: “ಜರ್ಮನಿಯ ಈ (ಯಹೂದ್ಯರ ಹತ್ಯೆ) ಕೃತ್ಯದಿಂದಾಗಿ, ಮೂಲದಲ್ಲೇ ವ್ಯತ್ಯಾಸಗಳಿರುವ ಎರಡು ಭಿನ್ನ ಜನಾಂಗಗಳಾಗಲೀ ಸಂಸ್ಕೃತಿಗಳಾಗಲೀ ಬಹುಕಾಲ ಪರಸ್ಪರ ಶಾಂತಿ-ಸಾಮರಸ್ಯಗಳಿಂದ ಒಂದಾಗಿ ಬದುಕುವುದು, ಒಂದೇ ರಾಷ್ಟ್ರವಾಗಿ ಅಭಿವೃದ್ಧಿ ಹೊಂದುವುದು ಕಷ್ಟಸಾಧ್ಯವಾದ ಸಂಗತಿ ಎಂಬುದು ಹಿಂದೂಸ್ಥಾನದಲ್ಲಿರುವ ನಾವು ಕಲಿಯಬೇಕಾದ ಬಹುಮುಖ್ಯ ಪಾಠ.” ಈ ವಾಕ್ಯವನ್ನು ಸೇರಿಸಿಕೊಂಡು ಮೇಲೆ ಉಲ್ಲೇಖಿಸಿದ ಗೋಲ್ವಾಲ್ಕರರ ಮಾತುಗಳನ್ನು ಓದಿದಾಗ ಬರುವ ಅರ್ಥಕ್ಕೂ, ಬೇಕೆಂದೇ ಕೆಲವು ಸಾಲುಗಳನ್ನು ಕತ್ತರಿಸಿ ತೆಗೆದು ಮಹಾದೇವರು ಹುಟ್ಟಿಸಿರುವ ವಿಕೃತಾರ್ಥಕ್ಕೂ ನಡುವೆ ಅದೆಷ್ಟು ವ್ಯತ್ಯಾಸವಿದೆ, ಗಮನಿಸಿ. ಮಹಾದೇವರ ಇಡಿಯ ಪುಸ್ತಕ ಇಂಥ ವಿಷದಿಂದ ತುಂಬಿದೆ.
ನಾನಾಗಲೇ ಹೇಳಿದಂತೆ ದೇವನೂರರ ಇಡೀ ಪುಸ್ತಕ ಒಂದು ವಿಷದ ಮುದ್ದೆ. ಅದನ್ನು ಓದುತ್ತಿದ್ದರೆ ಈ ವ್ಯಕ್ತಿಯ ಬೌದ್ಧಿಕ ಕ್ಯಾನ್ಸರ್ ಅದೆಷ್ಟು ಭೀಕರವಾಗಿದೆ ಎಂದು ಭಯವೂ ತಾತ್ಸಾರವೂ ಉಂಟಾಗುತ್ತದೆ. ರೋಗಿಯೊಬ್ಬ ತನ್ನ ವ್ರಣವನ್ನು ಕೋರೆಬಿದ್ದ ಉಗುರುಗಳಿಂದ ಪರಪರ ಕೆರೆಯುತ್ತ, ಅದನ್ನು ಗುಣಪಡಿಸಬಂದ ವೈದ್ಯರನ್ನೇ ಅತ್ಯಂತ ತುಚ್ಛ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಕೂಗಾಡುತ್ತಿರುವಂತೆ ಕಾಣುತ್ತದೆ ಈ ಪುಸ್ತಕದ ಹೂರಣ. ಇಲ್ಲಿ ಪ್ರತಿ ಪುಟದಲ್ಲೂ ಹತ್ತಿಪ್ಪತ್ತು ಬೈಗುಳಗಳಿವೆ. ಮತ್ತು ಈ ಬೈಗುಳಗಳಿಗೆ ಒಂದು ತರ್ಕಬದ್ಧತೆಯಾಗಲೀ ಸಂಸ್ಕಾರವಾಗಲೀ ಇಲ್ಲ. ಉದಾಹರಣೆಗೆ ನೋಡಿ: “ಕಾಂಗ್ರೆಸ್ಸಿನ ಇಂದಿರಾಗಾಂಧಿಯವರೂ ಕೂಡ ಅಲ್ಪಕಾಲದವರೆಗೆ ಸರ್ವಾಧಿಕಾರಿಯಾಗಿದ್ದರು. ಇದು ಅಲ್ಪಕಾಲದವರೆಗೆ ಮಾತ್ರ. ಜೊತೆಗೆ ಇಂದಿರಾ ಅವರ ಸರ್ವಾಧಿಕಾರವು ಆಡಳಿತಾತ್ಮಕ ಸರ್ವಾಧಿಕಾರ ಮಾತ್ರ ಆಗಿತ್ತು. ಇಂದಿರಾರ ಆ ಅಲ್ಪಕಾಲದ ಸರ್ವಾಧಿಕಾರದಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಪತ್ರಿಕಾರಂಗ, ಸ್ವಾಯತ್ತ ಸಂಸ್ಥೆಗಳು ಈಗಿನಷ್ಟು ನಿತ್ರಾಣಗೊಂಡಿರಲಿಲ್ಲ. ಆದರೆ ಇಂದಿನ ಮೋದಿಯವರ ಆಳ್ವಿಕೆಯಲ್ಲಿ ನ್ಯಾಯಾಂಗ, ಕಾರ್ಯಾಂಗ ಹಾಗೂ ಮಾಧ್ಯಮ, ಸ್ವಾಯತ್ತ ಸಂಸ್ಥೆಗಳು ಉಸಿರಾಡಲು ಕಷ್ಟಪಡುತ್ತಿವೆ. ಆರೆಸ್ಸೆಸ್ಸಿನ ಕನಸಿನ ಆಳ್ವಿಕೆಯು ಸಮಾಜದ ಎಲ್ಲಾ ಕ್ಷೇತ್ರಗಳನ್ನೂ ಕಬ್ಜಾ ಮಾಡಿಕೊಳ್ಳತೊಡಗಿದೆ”
ಒಟ್ಟಾರೆಯಾಗಿ ಎಲ್ಲ ನದಿಕೊಳ್ಳಗಳ ನೀರೂ ಕೊನೆಗೆ ಸಾಗರವನ್ನೇ ಮುಟ್ಟುತ್ತವೆ ಎಂಬಂತೆ ಪ್ರಗತಿಪರ ಬುದ್ಧಿಜೀವಿಗಳ ಏನೆಲ್ಲ ಬಯ್ದಾಟಗಳೂ ಕೊನೆಗೆ ಬಂದು ನಿಲ್ಲುವುದು ಮೋದಿಭರ್ತ್ಸನೆಯಲ್ಲಿ! ಮೋದಿಯಿಂದಾಗಿ ಈ ಎಲ್ಲ ಪ್ರಗತಿಪರರಿಗೆ ಒಂದಷ್ಟು ಹೆಸರು, ಕೆಲಸ, ಗಂಜಿ! ಮೋದಿ ಇಲ್ಲದೆ ಹೋಗಿದ್ದರೆ ಇವರ ಹೊಟ್ಟೆಪಾಡಿನ ಗತಿ ಏನಿರುತ್ತಿತ್ತೋ! (ಮುಂದುವರಿಯುವುದು)
✍️ ರೋಹಿತ್ ಚಕ್ರತೀರ್ಥ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.