ಸಾಧನೆಗೆ ವಯಸ್ಸಿನ ಮಿತಿಯೇ ಇರುವುದಿಲ್ಲ ಎಂಬ ಮಾತಿದೆ, ಅದು ಅಕ್ಷರಶಃ ನಿಜ. ಅರ್ಷ್ ಷಾ ದಿಲ್ಭಾಗಿ ಹದಿಹರೆಯದ ತರುಣ. ಪಾಣಿಪತ್ ನಿವಾಸಿಯಾಗಿರುವ ಈತ ತನ್ನ 16ನೇ ವಯಸ್ಸಿನಲ್ಲಿ AAC ( Augmentative and Alternative Communication) ಎಂಬ ವಿಶಿಷ್ಟ ಸಾಧನವನ್ನು ಕಂಡು ಹಿಡಿದಿದ್ದಾನೆ. ಈ ಸಾಧನಕ್ಕೆ Talk ಎಂದು ಹೆಸರು ನೀಡಿದ್ದಾನೆ.
ಕಳೆದ ವರ್ಷ ಅರ್ಷ್ನ ಈ ಸಾಧನವು ಗೂಗಲ್ ಸೈನ್ಸ್ ಫೇರ್-2014ಗೆ ಆಯ್ಕೆಗೊಂಡಿತ್ತು. ಈ ಮೂಲಕ ಅರ್ಷ್ ಸಾಧನೆಯ ಗರಿಯನ್ನು ಮುಡಿಗೇರಿಸಿದ. ಈ ಸಾಧನವು ಉಸಿರಾಟವನ್ನು ಮಾತಾಗಿ ಪರಿವರ್ತಿಸಿ ಸಂವಹನಕ್ಕೆ ನೆರವಾಗುತ್ತದೆ. ಮುಖ್ಯವಾಗಿ ಪಾರ್ಕಿಸನ್, ಬುದ್ಧಿಮಾಂದ್ಯತೆಯಂತಹ ಬೌದ್ಧಿಕ ಬೆಳವಣಿಗೆಯಲ್ಲಿ ಕುಂಠಿತಗೊಂಡಿರುವ ವಿಕಲಚೇತನರಿಗೆ ಈ ಸಾಧನವು ಸಹಾಯಕವಾಲಿದೆ. ಈ ಮೂಲಕ ಅವನು ಕಂಡುಹಿಡಿದ ಸಾಧನ ಮತ್ತು ಆತನ ಸಾಧನೆಯಿಂದ ಕೆಲವರ ಜೀವನದಲ್ಲಿ ಆಶಾಕಿರಣ ಮೂಡಬಹುದು.
ಒಂದು ಲೆಕ್ಕಾಚಾರದ ಪ್ರಕಾರ 1.4% ರಷ್ಟು ಜನ ಪ್ರಪಂಚದಲ್ಲಿ ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಇಷ್ಟು ಮಾಹಿತಿಯಿದ್ದರೂ ನಿಖರ ಮಾಹಿತಿ ದೊರೆಯದಿದ್ದುದರಿಂದ ಖಾಯಿಲೆಗೊಳಗಾದವರ ಸಂಖ್ಯೆ ಇನ್ನೂ ಹೆಚ್ಚಿದೆ ಎಂಬುದು ತಜ್ಞರ ಅಭಿಪ್ರಾಯ.
ಪ್ರಸಕ್ತ AAC ( Augmentative and Alternative Communication) ಸಾಧನವು ಈ ಹಿಂದಿನ ಸಾಧನಕ್ಕಿಂತ ಉತ್ತಮವಾಗಿದೆ. ಅಲ್ಲದೆ ಇದನ್ನು ಖರೀದಿಸಲು ತಗಲುವ ವೆಚ್ಚವೂ ಕಡಿಮೆ, ಎಲ್ಲಿ ಬೇಕಾದರೂ ಕೊಂಡ್ಯೊಯಲು ಸುಲಭವಾಗುವಂತಿದೆ. ಅರ್ಷ್ನ ಈ ಸಾಧನೆ ದೇಶವೇ ಹೆಮ್ಮೆ ಪಡುವಂತದ್ದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.