ನವದೆಹಲಿ: ಫ್ರಾನ್ಸ್ನಲ್ಲಿ ಕ್ಯಾನೆಸ್ ಚಲನಚಿತ್ರೋತ್ಸವದ ಜೊತೆಗೆಯೇ ಆಯೋಜಿಸಲಾಗಿರುವ ಮಾರ್ಚ್ ಡು ಫಿಲ್ಮ್ನಲ್ಲಿ ಭಾರತವು ಅಧಿಕೃತ ‘ಕಂಟ್ರಿ ಆಫ್ ಆನರ್’ ಆಗಲಿದೆ.
ಮೇ 17 ರಿಂದ ಫೆಸ್ಟಿವಲ್ ಆಯೋಜಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫ್ರಾನ್ಸ್ ಮತ್ತು ಭಾರತ ತಮ್ಮ ರಾಜತಾಂತ್ರಿಕ ಬಾಂಧವ್ಯದ 75 ವರ್ಷಗಳನ್ನು ಪೂರೈಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಪ್ಯಾರಿಸ್ ಭೇಟಿ ಮತ್ತು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗಿನ ಮಾತುಕತೆ ಈ ಸಂದರ್ಭದಲ್ಲಿ ಇನ್ನಷ್ಟು ಮಹತ್ವವನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು.
ಈ ಮಹತ್ವದ ರಾಜತಾಂತ್ರಿಕ ಹಿನ್ನಲೆಯಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್ನ ಮಾರ್ಚೆ’ಡು ಫಿಲ್ಮ್ನಲ್ಲಿ ಭಾರತವನ್ನು ‘ಕಂಟ್ರಿ ಆಫ್ ಆನರ್’ ಎಂದು ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಯಾವುದೇ ದೇಶಕ್ಕೆ ಇಂತಹ ಗೌರವ ನೀಡುತ್ತಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಮೆಜೆಸ್ಟಿಕ್ ಬೀಚ್ನಲ್ಲಿ ಆಯೋಜಿಸಲಾಗುತ್ತಿರುವ ಮಾರ್ಚ್ ಡು ಫಿಲ್ಮ್ನ ಓಪನಿಂಗ್ ನೈಟ್ನಲ್ಲಿ ಫೋಕಸ್ ಕಂಟ್ರಿಯಾಗಿ ಭಾರತದ ಉಪಸ್ಥಿತಿಯು ಭಾರತಕ್ಕೆ ಗೌರವ ಸ್ಥಾನಮಾನವನ್ನು ಖಚಿತಪಡಿಸುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕೇನ್ಸ್ ನೆಕ್ಸ್ಟ್ನಲ್ಲಿ ಭಾರತವು ಗೌರವಾನ್ವಿತ ರಾಷ್ಟ್ರವಾಗಿದೆ, ಇದರ ಅಡಿಯಲ್ಲಿ ಐದು ಹೊಸ ಸ್ಟಾರ್ಟ್-ಅಪ್ಗಳಿಗೆ ಆಡಿಯೋ-ವಿಷುಯಲ್ ಇಂಡಸ್ಟ್ರಿಗೆ ಪಿಚ್ ಮಾಡಲು ಅವಕಾಶವನ್ನು ನೀಡಲಾಗುತ್ತದೆ.
ಅನಿಮೇಷನ್ ಡೇ ನೆಟ್ವರ್ಕಿಂಗ್ನಲ್ಲಿ ಹತ್ತು ವೃತ್ತಿಪರರು ಭಾಗವಹಿಸಲಿದ್ದಾರೆ.
ಆರ್ ಮಾಧವನ್ ನಿರ್ಮಿಸಿದ “ರಾಕೆಟ್ರಿ” ಚಿತ್ರದ ವಿಶ್ವ ಪ್ರೀಮಿಯರ್ ಭಾರತದ ಭಾಗವಹಿಸುವಿಕೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ಮೇ 19 ರಂದು ಮಾರುಕಟ್ಟೆಯ ಸ್ಕ್ರೀನಿಂಗ್ನ ಪಲೈಸ್ ಕೆ.ನಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತದೆ.
“ಗೋಸ್ ಟು ಕೇನ್ಸ್ ಸೆಕ್ಷನ್” ನಲ್ಲಿ ಐದು ಆಯ್ದ ಚಲನಚಿತ್ರಗಳನ್ನು ಪ್ರದರ್ಶಿಸಲು ಭಾರತಕ್ಕೆ ಅವಕಾಶ ನೀಡಲಾಗಿದೆ.
ಈ ಚಲನಚಿತ್ರಗಳು ಫಿಲ್ಮ್ ಬಜಾರ್ ಅಡಿಯಲ್ಲಿ WIP ಲ್ಯಾಬ್ನ ಭಾಗವಾಗಿದೆ. ಬಿಡುಗಡೆಯಾಗದ ಚಲನಚಿತ್ರಗಳ ಪ್ರದರ್ಶನಕ್ಕಾಗಿ ಮೇ 22 ರಂದು ಒಲಂಪಿಯಾ ಸ್ಕ್ರೀನ್ ಎಂಬ ಸಿನಿಮಾ ಹಾಲ್ ಅನ್ನು ಭಾರತಕ್ಕೆ ಸಮರ್ಪಿಸಲಾಗಿದೆ. ಈ ವರ್ಗದ ಅಡಿಯಲ್ಲಿ ಐದು ಚಲನಚಿತ್ರಗಳನ್ನು ಆಯ್ಕೆ ಮಾಡಲಾಗಿದೆ.
ಈ ವರ್ಷ ಇಂಡಿಯಾ ಪೆವಿಲಿಯನ್ ‘ಇಂಡಿಯಾ ದಿ ಕಂಟೆಂಟ್ ಹಬ್ ಆಫ್ ದಿ ವರ್ಲ್ಡ್’ ಎಂಬ ಥೀಮ್ ಅನ್ನು ಒಳಗೊಂಡಿದೆ. ಇದು ದೇಶದ ಭಾಷಾ, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯ ಭಾರತೀಯ ಸಿನಿಮಾಗಳನ್ನು ಪ್ರದರ್ಶಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.