ನವದೆಹಲಿ: ಉತ್ತರ ಕಾಶ್ಮೀರದ ಸೊಪೋರ್ನಲ್ಲಿ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಹೇಳಿಕೆ ನೀಡಿರುವ ಪೊಲೀಸರು, ಇತ್ತೀಚೆಗೆ ಸ್ಥಳೀಯರಲ್ಲದ ಕಾರ್ಮಿಕರ ಹತ್ಯೆಗಳು ಮತ್ತು ಅನೇಕ ಸ್ಥಳಗಳಲ್ಲಿ ಗ್ರೆನೇಡ್ ದಾಳಿಗಳು ನಡೆದ ಬಗ್ಗೆ ತನಿಖೆ ನಡೆಸಲಾಗಿದೆ ಮತ್ತು ವಿವಿಧ ಸ್ಥಳಗಳಿಂದ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ನಿರಂತರ ವಿಚಾರಣೆಯಿಂದ ಹತ್ಯೆಗಳ ಹಿಂದೆ ಎಲ್ಇಟಿ ಸಂಘಟನೆಯ ಪಾತ್ರ ಪತ್ತೆಯಾಗಿದೆ ಎಂದಿದ್ದಾರೆ.
“ಮೇ 2 ರಂದು, ಹೈಗಮ್ ಪ್ರದೇಶದ ತೋಟಗಳಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಚಲಿಸುತ್ತಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆಗಿಳಿದವು. ಈ ವೇಳೆ ಶಂಕಿತ ವ್ಯಕ್ತಿಗಳು ತೋಟಗಳ ಕಡೆಗೆ ಓಡಿಹೋಗಿದ್ದಾರೆ. ಹೀಗಾಗಿ ಭದ್ರತಾ ಸಿಬ್ಬಂದಿ ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್ ಬಳಸಿ ಮೂವರು ವ್ಯಕ್ತಿಗಳನ್ನು ಬೆನ್ನಟ್ಟಿದೆ ಮತ್ತು ಹಿಡಿದಿವೆ” ಎಂದು ಹೇಳಿಕೆ ತಿಳಿಸಿದೆ.
ಶಂಕಿತರನ್ನು ಉಸ್ಮಾನ್-ಬಾದ್ ವಾರ್ಪೋರಾದ ತಫ್ಹೀಮ್ ರೆಯಾಜ್, ಬ್ರತ್ ಕಲಾನ್ ಸೋಪೋರ್ನ ಸೀರತ್ ಶಾಬಾಜ್ ಮಿರ್ ಮತ್ತು ಮಿರ್ಪೋರಾ ಬ್ರತ್ಕಲನ್ನ ರಮೀಜ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ. ಇವರಿಂದ ಮೂರು ಚೀನೀ ಪಿಸ್ತೂಲ್ಗಳು ಮತ್ತು ಮದ್ದುಗುಂಡುಗಳು, ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.