ನಮಸ್ತೆ ಶಾರದಾದೇವಿ ಕಾಶ್ಮೀರ ಪುರವಾಸಿನಿ
ತ್ವಾಮಹಂ ಪ್ರಾರ್ಥಯೆ ನಿತ್ಯಂ ವಿದ್ಯಾದಾನಂ ಚ ದೇಹಿಮೆ
ಹೀಗೆ ಪ್ರತಿನಿತ್ಯ ನಮ್ಮ ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದೆವು. ಆದರೆ ಈಗ ಕಾಶ್ಮೀರದಲ್ಲಿ ಶಾರದೆ ಎಲ್ಲಿಹಳು!
ನಾನು ನನ್ನ ತಂದೆಯನ್ನು ಕಳೆದುಕೊಂಡೆ
ನನ್ನ ತಾಯಿಯನ್ನು ಕಳೆದುಕೊಂಡೆ
ನನ್ನ ಸಹೋದರನನ್ನು ಕಳೆದುಕೊಂಡೆ
ನನ್ನ ಸಹೋದರಿಯನ್ನು ಕಳೆದುಕೊಂಡೆ
ನನ್ನ ಬಂಧು-ಬಳಗದವರನ್ನು ಕಳೆದುಕೊಂಡೆ
ನನ್ನ ಮನೆಯನ್ನು ಕಳೆದುಕೊಂಡೆ
ನನ್ನ ಆಸ್ತಿ-ಸಂಪತ್ತನ್ನು ಕಳೆದುಕೊಂಡೆ
ನನ್ನ ಭೂಮಿಯನ್ನು ಕಳೆದುಕೊಂಡೆ
ನನ್ನ ಸಂಸ್ಕೃತಿಯನ್ನು ಕಳೆದುಕೊಂಡೆ
ನನ್ನ ಅಸ್ಮಿತೆಯನ್ನೇ ಕಳೆದುಕೊಂಡೆ
ನಾನೇ ಈ ಪುಣ್ಯಭೂಮಿಯ ಮುಖ್ಯ ಕೇಂದ್ರದಂತಿದ್ದ ಕಾಶ್ಮೀರದಲ್ಲಿ ವಾಸಿಸುತ್ತಿದ್ದ ಹಾಗೂ ಈಗ ಸೆಕ್ಯುಲರ್ ವಸ್ತುಗಳಿಂದ ನಿರ್ಮಾಣಗೊಂಡಿರುವ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ದೌರ್ಭಾಗ್ಯವಂತ ಹಿಂದೂ ಕಾಶ್ಮೀರಿ ಪಂಡಿತ.
1990ರಲ್ಲಿ ನಮ್ಮ ಕಾಲದಲ್ಲಾದ ಕಾಶ್ಮೀರಿ ಹಿಂದೂಗಳ ನರಮೇಧವನ್ನು ಒಳಗೊಂಡಂತೆ ಒಟ್ಟು ಏಳು ಬಾರಿ ಈ ದುರಂತ ಜರುಗಿರುವುದು ಕಂಡುಬರುತ್ತದೆ. ಒಂದಲ್ಲ, ಎರಡಲ್ಲ ಏಳು ಬಾರಿ ಸಂಭವಿಸಿದೆ ಎಂದರೆ ನಾವು ಹಿಂದೂಗಳು ಯಾವ ಅವಸ್ಥೆಯಲ್ಲಿದ್ದೇವೆ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾಗುತ್ತದೆ. ಸಾವಿರ ವರ್ಷಗಳ ಗುಲಾಮಗಿರಿಯ ದುರಾದೃಷ್ಟಕರ, ದೌರ್ಭಾಗ್ಯಕರ ಇತಿಹಾಸವನ್ನು ಹೊಂದಿದ್ದರೂ ಭವಿಷ್ಯದಲ್ಲಿ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅರಿವು ತಾಳದೆ ಭ್ರಮಾ ಲೋಕದಲ್ಲಿ ಮುಳುಗಿ ಅತೀವ ನಂಬಿಕೆ, ಸಜ್ಜನಿಕೆ, ವಿಭಜನೆಗಳೆಂಬ ಸೂಕ್ಷ್ಮ ಮಾರಕಾಸ್ತ್ರಗಳಿಗೆ ಬಲಿಯಾಗಿ ಮತ್ತೆ ಅದೇ ರೀತಿಯ ಸಮಸ್ಯೆಯನ್ನು ಆಹ್ವಾನಿಸುತ್ತಿದ್ದೇವೆ. ಶತ್ರುಗಳು ನಮ್ಮ ಬಗೆಗಿರುವ ಕೋಪ, ದ್ವೇಷಗಳನ್ನೆಲ್ಲಾ ನೇರವಾಗಿ ತೋರ್ಪಡಿಸಿಕೊಂಡರೂ ನಾವು ಮಾತ್ರ ಅದನ್ನು ನಂಬದೆ ಎಲ್ಲಾ ಸರಿಯಾಗುವುದೆಂದು ಭಾವಿಸಿದ್ದೆವು. ಒಂದು ತಿಂಗಳು ಕಾದೆವು, ಎರಡು ತಿಂಗಳು ಕಾದೆವು ಹೀಗೆ ಈ ಕಾಯುವಿಕೆಯಲ್ಲಿ ಈ ದೇಶದ, ನಮ್ಮ ಜೀವನದ ಅತಿ ದೊಡ್ಡ ದುರಂತಕ್ಕೆ ಸಾಕ್ಷಿಯಾಗುತ್ತೇವೆಂದು ಕಲ್ಪಿಸಿಯೂ ಇರಲಿಲ್ಲ. ನಿನ್ನೆಯವರೆಗೂ ನಮ್ಮ ಮಿತ್ರರಂತಿದ್ದ ಕಾಶ್ಮೀರಿ ಮುಸಲ್ಮಾನರು ಅಂದಿನಿಂದ ಬೆನ್ನಿಗೆ ಚೂರಿ ಹಾಕಿ ಮತಾಂಧತೆಯ ಪರಾಕಾಷ್ಠೆಯನ್ನು ಹಾಗೂ ಮಾನವೀಯತೆಯ ಅಂಧಕಾರತೆಯನ್ನು ತಲುಪುತ್ತಾರೆ ಎಂದು ಕನಸ್ಸಿನಲ್ಲಿಯೂ ಭಾವಿಸಿರಲಿಲ್ಲ. ಒಂದೇ ಬಾರಿಗೆ ಅವರೆಲ್ಲಾ ಬದಲಾದರೊ ಅಥವಾ ಅವರನ್ನು ಕುರಿತು ನಮಗಿದ್ದ ನಂಬಿಕೆ, ವಿಶ್ವಾಸಗಳು ಬದಲಾಯಿತೊ ತಿಳಿಯದು. ‘ಜಿಹಾದಿಗಳು ಎಂದಿಗೂ ಜಿಹಾದಿಗಳೇ’ ಎಂಬ ಕಟುಸತ್ಯವನ್ನು ಮರೆತಿದ್ದಕ್ಕೆ ನಮಗೆ ದಂಡನೆ ದೊರೆಯಿತೆ? ಕ್ಷಾತ್ರವನ್ನು ಕಡೆಗಣಿಸಿ ಅದರ ಮಹತ್ವವನ್ನು ಕಿರಿದಾಗಿಸಿದ್ದಕ್ಕೆ ತಕ್ಕ ಶಿಕ್ಷೆ ದೊರೆಯಿತೆ? ಭಗವಾನ್ ಪರಶುರಾಮ ಅವರು ಭೋದಿಸಿದ ಅತ್ಯುತ್ತಮ ಆದರ್ಶವಾದ ‘ಅಗ್ರತಃ ಚತುರೋ ವೇದಃ ಪೃಷ್ಠತಃ ಸಶರಂ ಧನುಃ|
ಇದಂ ಬ್ರಹ್ಮಂ ಇದಂ ಕ್ಷಾತ್ರಂ ಶಾಪಾದಪಿ ಶರಾದಪಿ||’ ಎಂಬುದನ್ನು ನಾವು ಪಾಲಿಸದಿದ್ದಕ್ಕಾಗಿ ನಡೆದುಹೋದ ಮಾನವ ಧರ್ಮದ ಘೋರ ಹತ್ಯೆಗೆ ಮೂಕ ಸಾಕ್ಷಿಯಾದೆವೇ? ಪಂಡಿತರಾದರೂ ಪಾಮರರ ಕುಕೃತ್ಯಕ್ಕೆ ಬಲಿಯಾಗಿ ಜ್ಞಾನದ ಸಂಪತ್ತನ್ನು ವ್ಯರ್ಥ ಮಾಡಿಕೊಂಡು ಬಿಟ್ಟೆವೇ? ಅಸಮರ್ಥ ನಾಯಕರ ಆಡಳಿತಾವಧಿಯ ಅಲೆಗಳಿಗೆ ಸಿಲುಕಿ ನಮ್ಮ ಗೌರವದ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತೆ ಮಾಡಿಕೊಂಡೆವೇ? ಅಸಮರ್ಥ ನಾಯಕರಿಗಿಂತ ಭ್ರಷ್ಟ ನಾಯಕರ ದಾಳಿಗಳಿಗೆ ಬಲಿಯಾಗಿ ಅವರ ಜಿಹಾದಿಗಳ ಬೆಂಬಲಿತ ಯೋಜನೆಗಳ ದ್ವೇಷದ ಪೆಟ್ಟನ್ನು ತಿಂದೆವೇ? ಆಧ್ಯಾತ್ಮದ ಔನ್ನತ್ಯವನ್ನು ತಲುಪಿದ್ದ ಪವಿತ್ರ ಸ್ಥಳವು ರೌರವ ನರಕವಾಗುತ್ತಿದ್ದನ್ನು ಕಣ್ಣಾರೆಯೆ ಕಂಡರೂ ಏನೂ ಮಾಡಲಾಗದೆ ಅಸಹಾಯಕರಾದೆವೇ? ಜಿಹಾದ್ ಭಯ, ಜೀವ ಭಯ, ಮತಾಂಧತೆ ಭಯ, ಭಯೋತ್ಪಾದನೆ ಭಯಗಳೆಲ್ಲವೂ ಒಡಗೂಡಿ ನಮ್ಮನ್ನು ನಮ್ಮ ಕಾಶ್ಮೀರದಿಂದಲೇ ದೂರ ಮಾಡಿದವೇ? ನನ್ನ ಒಡನಾಡಿಗಳ, ಬಂಧು-ಬಳಗದವರ ಜೀವವನ್ನೇ ತೆಗೆದವೇ? ಇದೆಲ್ಲಕ್ಕಿಂತ ಪ್ರಾಣ ಹೋದರೂ ಸರಿಯೇ ತಾಯಿ-ತಾಯ್ನಾಡಿನ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಚಾರಿತ್ರ್ಯ-ಸಂಸ್ಕೃತಿಯ ಪರಾಕಾಷ್ಠ ಹಂತವನ್ನು ತಲುಪಿರುವ ಹಿಂದೂಗಳಾದ ನಾವು ತಾಯಂದಿರ, ಸಹೋದರಿಯರ ಮಾನಭಂಗವನ್ನು ತಡೆಯಲಾಗದೆ ಹೇಡಿ ಸೈತಾನರ ಹೇಯ ಕೃತ್ಯಗಳನ್ನು ಕಂಡು ಸ್ತಬ್ಧರಾಗಿ ಹೋದೆವೇ? ಏನು ನಡೆಯುತ್ತಿದೆ ಎಂದು ವಿಶ್ಲೇಷಿಸಿ ಅರ್ಥ ಮಾಡಿಕೊಳ್ಳುವ ಮುನ್ನ ದುರಂತ ಸಂಭವಿಸಿ ಎಲ್ಲವೂ ಸಮಾಧಿಯಾಗಿತ್ತು. ಅಂದು ಸೆಕ್ಯುಲರಿಸಂ, ಹ್ಯೂಮನಿಸಂ, ಕಮ್ಯುನಿಸಂ, ಸೋಷಿಯಲಿಸಂ ಅನ್ನು ತಮ್ಮ ಸ್ವಂತ ಆಸ್ತಿಗಳೆಂಬಂತೆ ಉಪಯೋಗಿಸುವ ಬುದ್ಧಿಜೀವಿಗಳು, ಮಾನವ ಅಧಿಕಾರಗಳ ಚಾಂಪಿಯನ್ ಗಳು, ಸ್ವಯಂಘೋಷಿತ ಸಂವಿಧಾನ ಪಂಡಿತರು, ಸರ್ವಧರ್ಮಗಳಲ್ಲೂ ಸಮಭಾವ ಹೊಂದಿರುವವರೆಂದು ಬಿಂಬಿಸಿಕೊಳ್ಳುವ ಪ್ರೋಪಗ್ಯಾಂಡವಾದಿಗಳು ಯಾರು ಭಯೋತ್ಪಾದಕರ ಪಾಲಿಗೆ ಪರಮದಯಾಳುವಾಗಿ ವರ್ತಿಸುವರೊ ಆದರೆ ಭಾರತೀಯ ಸೈನಿಕರು ತಮ್ಮ ಕರ್ತವ್ಯಕ್ಕಾಗಿ, ಈ ದೇಶದ ಸಾರ್ವಭೌಮತೆಗಾಗಿ ಭಯೋತ್ಪಾದಕರ ಹತ್ಯೆ ಮಾಡಿದಾಗ ಅವರನ್ನು ವಿರೋಧಿಸುವರೊ, ಯಾರು ಜಗತ್ತಿನ ಸಮಗ್ರ ವಿಷಯಗಳಿಗೂ ತಲೆ ಹಾಕಿ ತಮ್ಮ ಸಿದ್ಧಾಂತಕ್ಕನುಸಾರ ವಾದವನ್ನು ಮಂಡಿಸುವರೊ ಅಂತಹವರು ನಮ್ಮ ಕಾಶ್ಮೀರಿ ಹಿಂದೂಗಳ ನರಮೇಧ ನಡೆಯುತ್ತಿದ್ದ ಸಂದರ್ಭದಲ್ಲಿ ದೀರ್ಘಾವಧಿ ರಜೆಯನ್ನು ತೆಗೆದುಕೊಂಡಿದ್ದರು. ಕಾಶ್ಮೀರಿ ಹಿಂದೂಗಳ ವೇದನೆ ಅವರ ಹೃದಯವನ್ನು ತಲುಪಲಿಲ್ಲವೋ ಏನೊ ಅಥವಾ ತಲುಪದಂತೆ ಅವರೇ ಸುವ್ಯವಸ್ಥಿತವಾಗಿ ಹೃದಯದ ಬಾಗಿಲನ್ನು ಬಂದ್ ಮಾಡಿಕೊಂಡು ತೆರೆಯಲು ಪ್ರವೇಶ ಶುಲ್ಕವನ್ನು ವಿಧಿಸಿಕೊಂಡಿದ್ದರೋ ಏನೊ!
ರಸ್ತೆಯಲ್ಲಿ ಹೋಗುತ್ತಿದ್ದವರನ್ನೂ ಅವರು ಹಿಂದೂ ಎಂಬ ಒಂದೇ ಒಂದು ಕಾರಣಕ್ಕಾಗಿ ಅಮಾನುಷವಾಗಿ ಕೊಂದರು. ತಮಗೆ ವಿದ್ಯಾದಾನ ಮಾಡಿದ ಗುರುಗಳ ಮೇಲೆ ದಾಳಿ ನಡೆಸಿದರು. ಕಾಶ್ಮೀರದ ಪ್ರತಿಭಾವಂತಶಾಲಿ ಯುವಕ-ಯುವತಿಯರನ್ನು ನಿಸ್ತೇಜಗೊಳಿಸಿದರು. ಕಾಶ್ಮೀರದ ಭವಿಷ್ಯದ ಒಳಿತಿಗಾಗಿ ಶ್ರಮಿಸುತ್ತಿದ್ದ ಶ್ರದ್ಧಾವಂತ ಉದ್ಯೋಗಿಗಳ ಆಶಾಗೋಪುರವನ್ನು ಕೆಡವಿ ಹಾಕಿದರು. ಮತಾಂಧತೆಯೆಂಬ ಭೀಕರ, ಹೇಡಿ ಅಸ್ತ್ರವನ್ನು ಪ್ರಯೋಗಿಸಿ ಬೆನ್ನಿಗೆ ಚೂರಿ ಹಾಕಿದರು. ಈ ನೆಲದ ಸಮ್ಮಾನದ ಪ್ರತೀಕವಾಗಿರುವ ಸ್ತ್ರೀ ಸಂಕುಲದ ಮೇಲೆ ಭಯಾನಕ ಅತ್ಯಾಚಾರ ನಡೆಸಿದರು. ಸಭ್ಯತೆ, ಸೌಜನ್ಯತೆ, ಸೌಮ್ಯತೆಗಳೆಂಬ ಸತ್ವ ಜ್ಞಾನದ ಅಸ್ತ್ರವನ್ನು ಮತಾಂಧತೆ, ಭಯೋತ್ಪಾದಕತೆ, ಅನೈತಿಕತೆ ಅಮಾನವೀಯತೆಗಳೆಂಬ ತಮಸ್ಸಿನ ಅಜ್ಞಾನ ಅಸ್ತ್ರದಿಂದ ಸೋಲಿಸಿ ಕಪಟ ಮೋಸದ ಮೂಲಕ ವಿಜಯ ಸಾಧಿಸಿದರು. ತಮ್ಮ ಸ್ಮರಣೆಯಲ್ಲೇ ಇಟ್ಟಕೊಳ್ಳಲಾಗದಷ್ಟು ಜನರ ಕೊಲೆ ಮಾಡಿ ಅಪರಾಧಿಗಳಾದರೂ ಅಗೌರವಕ್ಕೆ ಪಾತ್ರವಾಗಿ ಕಂಬಿಯ ಹಿಂದೆ ನಿಲ್ಲುದೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜೊತೆ ನಿಲ್ಲುವ ಗೌರವವನ್ನು ಪಡೆದುಕೊಂಡರು! ಕೊನೆಗೆ ತಮ್ಮ ಜೊತೆಯಲ್ಲೇ ಚೆನ್ನಾಗಿದ್ದು ತಮಗಾಗಿ ಹಾಡುಗಳನ್ನು ಬರೆದ, ಕುರಾನ್ ಅನ್ನು ಗೌರವಿಸಿದ ಕವಿಗಳನ್ನೂ ಸಹ ಕಾಫಿರ್ ಎಂಬ ಕಾರಣಕ್ಕಾಗಿ ನಿರ್ಮಮವಾಗಿ ಹತ್ಯೆಗೈದರು. ಅಲ್ಪವಾದರೂ ಮನುಷ್ಯತ್ವವನ್ನು ಹೊಂದಿರುವವರು ಕಲ್ಪಿಸಿಕೊಳ್ಳಲೂ ಆಗದ ಒಬ್ಬ ಸ್ತ್ರೀಯನ್ನು ಯಾಂತ್ರಿಕ ಗರಗಸದಿಂದ ಕತ್ತರಿಸಿ ಹಾಕುವ ಹೇಯ ಕೃತ್ಯವನ್ನು ಮಾಡಿದರು. ಅಂದಿನ ಮುಖ್ಯಮಂತ್ರಿಯಾದ ಫಾರುಖ್ ಅಬ್ದುಲ್ಲಾ ಅವರು ರಾಜೀನಾಮೆ ನೀಡಿ ಅರಾಜಕತೆಯನ್ನು ಹೆಚ್ಚಿಸಿ ಮತಾಂಧರ ಬೆಂಬಲಿಗರಂತೆ ನಡೆದುಕೊಂಡದ್ದು ಈಗ ಐತಿಹಾಸಿಕ ಪ್ರಮಾದ! ಇನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ರಾಜ್ಯಪಾಲ ಜಗನ್ ಮೋಹನ್ ಅವರ ಆತಂಕ ಭರಿತ ಎಚ್ಚರಿಕೆಯ ಪತ್ರಗಳನ್ನು ಗಂಭೀರವಾಗಿ ಪರಿಗಣಿಸದೆ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕೀಯವನ್ನೇ ಮುಂದುವರಿಸಿದ್ದು ಅದಕ್ಕಿಂತ ದೊಡ್ಡ ಐತಿಹಾಸಿಕ ಪ್ರಮಾದ!!
ನಾವು ತಿಳಿದುಕೊಂಡೆವು ಕಾಶ್ಮೀರದ ಮುಸಲ್ಮಾನರು ಮತಾಂಧತೆಯಲ್ಲಿ ಸಿಲುಕಿ ಭ್ರಮಿತರಾಗಿ ಹೀಗೆ ಮಾಡಿದ್ದಾರೆ ಆದರೆ ಸ್ವಲ್ಪ ದಿನಗಳ ನಂತರ ಮತ್ತೆ ನಮ್ಮನ್ನು ಸ್ವಾಗತಿಸುತ್ತಾರೆ ಎಂದು, ಹಾಗೆಯೇ ಸರ್ಕಾರವೂ ಕೂಡ ಸಂಪೂರ್ಣ ಸಹಕಾರ, ಸಹಭಾಗಿತ್ವದೊಂದಿಗೆ ನಮಗೆ ನ್ಯಾಯ ದೊರಕಿಸಿ ಕೊಡುವುದೆಂದು. ಆದರೆ ನ್ಯಾಯವನ್ನು ದೊರಕಿಸಿಕೊಡುವುದಿರಲಿ, ಆ ಕಠೋರಸತ್ಯವನ್ನು ಕೇಳಿ ಒಪ್ಪಿಕೊಳ್ಳಲು ಮೂರು ದಶಕಗಳು ಬೇಕಾಯಿತು. ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಕತ್ತಿನ, ದೇಶಾಭಿಮಾನದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಆರ್ಟಿಕಲ್ 370 ಅನ್ನು ರದ್ದು ಮಾಡುವ ಮೂಲಕ ನಮಗೂ ಈಗ ಅಸ್ತಿತ್ವವನ್ನು ದೊರಕಿಸಿಕೊಡುತ್ತಿದ್ದಾರೆ. ಹಾಗೆಯೇ ಈಗ ವಿವೇಕ್ ರಂಜನ್ ಅಗ್ನಿಹೋತ್ರಿ ಅವರಂತಹ ಧೈರ್ಯಶಾಲಿ ನಿರ್ದೇಶಕರ ಮೂಲಕ ಈ ದುರಂತ ಸತ್ಯಕಥೆಯು ಚಿತ್ರವಾಗಿ ನಿರ್ಮಾಣಗೊಂಡು ಗರಿಷ್ಠ ಪ್ರಮಾಣದಲ್ಲಿ ಜನರನ್ನು ತಲುಪುತ್ತಿದೆ.
ತಮ್ಮದೇ ಆದ ಕಾಶ್ಮೀರದ ನೆಲದಿಂದ ಬಲವಂತವಾಗಿ ವಿವಶತೆಯಿಂದ ಹೊರದೂಡಲ್ಪಟ್ಟ ಪಂಡಿತರು ಸೆಕ್ಯುಲರಿಸಂ ನ ಇಟ್ಟಿಗೆಗಳಿಂದ ಮಾಡಲ್ಪಟ್ಟ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುವಂತಾಯಿತು. ಇದರಿಂದ ನಾನಾಬಗೆಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಕಾಯಿಲೆಗಳು ಒಂದಾದ ಮೇಲೆ ಒಂದರಂತೆ ಅತಿಕ್ರಮಣ ಮಾಡಿದವು. ಒಂದೇ ಮನೆಯಲ್ಲಿ ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಸೋದರ-ಸೋದರಿಯರು ಎಲ್ಲಾ ಸೇರಿ 8-10 ಜನರು ಒಂದೇ ಪುಟ್ಟ ಶಿಬಿರದಲ್ಲಿ ವಾಸಿಸಬೇಕಾದ ಘೋರ ವಿವಶತೆ ಕಾಶ್ಮೀರಿ ಹಿಂದೂ ಪಂಡಿತರದ್ದಾಯಿತು. ಇಂತಹ ಸಂದರ್ಭದ ಬದುಕು ಸಾಮಾಜಿಕ ಸಂಘರ್ಷಕ್ಕೆ ಮಾತ್ರ ಸೀಮಿತವಾಗದೆ ವೈಯಕ್ತಿಕವಾದ ದಾಂಪತ್ಯ ಜೀವನ, ಮುಂದಿನ ಪೀಳಿಗೆಯ ಸೃಜನ ಮುಂತಾದ ಬಗೆಯ ಸಮಸ್ಯೆಗಳಿಗೂ ನಾಂದಿ ಹಾಡುವ ಮೂಲಕ ಕಾಶ್ಮೀರಿ ಹಿಂದೂಗಳ ಭವಿಷ್ಯವನ್ನು ಆತಂಕಕ್ಕೀಡು ಮಾಡಿತು. ಮೈನಾರಿಟಿ ಅಲ್ಲದವರಿಗೆ ಮೈನಾರಿಟಿ ಸ್ಟೇಟಸ್ ನೀಡಿ ಸರ್ಕಾರಿ ಸವಲತ್ತುಗಳನ್ನು ದುರುಪಯೋಗ ಪಡಿಸುವ ಬದಲು ವಾಸ್ತವದಲ್ಲಿ ಮೈನಾರಿಟಿ ಆಗಿ ಹೋಗಿರುವ ಪಂಡಿತರಿಗೆ ಕಾಶ್ಮೀರದಲ್ಲಿ ಮೈನಾರಿಟಿ ಸ್ಟೇಟಸ್ ನೀಡಿ ಸರ್ಕಾರದ ಸವಲತ್ತುಗಳನ್ನು ನೀಡಬೇಕಾಗಿದೆ. ಮನುಷ್ಯರ ಸ್ವಾಭಾವಿಕ ಪ್ರವೃತ್ತಿಯಾದ ಮಹತ್ತರ ಗುರಿ ಹೊಂದುವಿಕೆ ಹಾಗೂ ತಲುಪುವಿಕೆಯಂತಹ ವಿಕಾಸಪಥವೂ ನಮಗೆ ಮುಳ್ಳಿನ ಪಥವಾಯಿತು.
ನಮ್ಮ ಮಿತ್ರರು, ಬಂಧುಗಳು ಎಂದೇ ಭಾವಿಸಿದ್ದ ಮುಸಲ್ಮಾನರು ಬೆನ್ನಿಗೆ ಚೂರಿ ಹಾಕಿದರು, ಮತಾಂಧತೆಯ ಅಲೆಯಲ್ಲಿ ತೇಲಿ ಮತಾಂಧ ರಾಕ್ಷಸರಿಗೆ ಇಸ್ಲಾಮಿಕ್ ಕಟ್ಟರ್ ವಾದಿಗಳಿಗೆ ಬೆಂಬಲವಾಗಿ ನಿಂತರು. ರಲೀವ್, ಗಲೀವ್, ಚಲೀವ್ (ಮತಾಂತರವಾಗು/ ಸತ್ತು ಹೋಗು/ ಓಡಿ ಹೋಗು) ಎಂಬ ಘೋಷವಾಕ್ಯಗಳನ್ನು ಹೇಳುತ್ತಾ ಬೆದರಿಸಿದರು. ಮಸೀದಿಗಳ ಗೋಡೆಗಳಲ್ಲಿ ಮುಂದಿನ ಟಾರ್ಗೆಟ್ ಆಗಿರುವ ಕಾಶ್ಮೀರಿ ಪಂಡಿತರು ಯಾರೆಂದು ತಿಳಿಸುವ ಹಿಟ್ ಲಿಸ್ಟ್ ಅನ್ನು ಹಾಕುತ್ತಾ ಪ್ರತೀಕ್ಷಣ ಹಿಂಸಿಸಿದರು. ಕಾಶ್ಮೀರಿ ಪಂಡಿತರ ನರಮೇಧದ ಸಂದರ್ಭದಲ್ಲಿ ಕೂಗಲಾದ ಭಯಾನಕ ಸ್ಲೋಗನ್ ಗಳು ಈ ಕೆಳಕಂಡಂತಿವೆ. ಇದನ್ನು ಪ್ರತಿಯೊಬ್ಬ ಹಿಂದುವೂ ಒಂದು ಕಡೆ ಬರೆದುಕೊಂಡು ಪ್ರತಿನಿತ್ಯ ಅವುಗಳನ್ನು ಓದಿದರೆ ನಾವೆಲ್ಲಾ ಮತ್ತೊಂದು ಕಾಶ್ಮೀರಿ ಫೈಲ್ಸ್ ಆಗುವುದನ್ನು ತಡೆಗಟ್ಟಬಹುದು.
*ಕಾಶ್ಮೀರ್ ಮೇ ರೆಹ್ನಾ ಹೇ, ಅಲ್ಲಾ-ಹು-ಅಕ್ಬರ್ ಕೆಹ್ನಾ ಹೋಗಾ
(ನೀವು ಕಾಶ್ಮೀರದಲ್ಲಿ ಇರಬೇಕೆಂದರೆ ಅಲ್ಲಾ-ಹು-ಅಕ್ಬರ್ ಎಂದು ಹೇಳಬೇಕಾಗುತ್ತದೆ)
*ಅಸೀ ಗಚ್ಚಿ ಪಾಕಿಸ್ತಾನ್, ಬತಾ ರೋಸ್ ತಾ ಬತನೇವ್ ಸಾನ್
(ನಮಗೆ ಹಿಂದೂ ಮಹಿಳೆಯರನ್ನೊಳಗೊಂಡ ಆದರೆ ಅವರ ಗಂಡಂದಿರನ್ನು ಹೊರತುಪಡಿಸಿ ನಿರ್ಮಾಣವಾಗುವ ಪಾಕಿಸ್ತಾನ ಬೇಕು)
*ಅಲ್ಲಾ-ಒ-ಅಕ್ಬರ್, ಮುಸಲ್ಮಾನೊ ಜಾಗೋ ಕಾಫಿರ್ ಭಾಗೋ, ಜಿಹಾದ್ ಆ ರಹಾ ಹೇ
(ಅಲ್ಲಾ-ಒ-ಅಕ್ಬರ್, ಜಾಗೃತರಾಗಿ ಮುಸಲ್ಮಾನರೇ ಕಾಫಿರರೇ ಓಡಿಹೋಗಿ, ಜಿಹಾದ್ ಸಮೀಪಿಸುತ್ತಿದೆ)
*ಕಾಶ್ಮೀರ್ ಕ್ಯಾ ಬನೇಗಾ- ಪಾಕಿಸ್ತಾನ್
(ಕಾಶ್ಮೀರ ಏನಾಗುತ್ತದೆ- ಪಾಕಿಸ್ತಾನ)
*ಜಲಿಮೊ ಒ, ಕಾಫಿರೊ, ಕಾಶ್ಮೀರ್ ಹಮಾರಾ ಛೋಡ್ ದೊ
(ಓ ಕ್ರೂರ ಕಾಫಿರರೇ ಕಾಶ್ಮೀರ ನಮ್ಮದು, ನೀವು ಬಿಟ್ಟು ಹೊರಡಿ)
*ಯಹಾ ಕ್ಯಾ ಚಲೇಗಾ, ನಿಜಾಮ್-ಇ-ಮುಸ್ತಫ
(ಇಲ್ಲಿ ಏನು ನಡೆಯುತ್ತದೆ- ಪ್ರವಾದಿಗಳ ಆಡಳಿತ)
*Arise ye fearless Mommins,
For russia has lost the race,
Now the sword hangs on Indian’s neck
Now it is Kahmir’s turn
(ಎದ್ದೇಳು ನಿರ್ಭೀತ ಮೋಮಿನ್
ಏಕೆಂದರೆ ರಷ್ಯಾ ಸ್ಪರ್ಧೆಯಲ್ಲಿ ಸೋತಿದೆ
ಈಗ ಖಡ್ಗ ಭಾರತದ ಕುತ್ತಿಗೆಯ ಮೇಲೆ ತೂಗುತ್ತಿದೆ
ಈಗ ಕಾಶ್ಮೀರದ ಸರದಿ)
*ಇಸ್ಲಾಂ ಹಮಾರಾ ಮಕ್ಸದ್ ಹೇ
ಕುರಾನ್ ಹಮಾರಾ ದಸ್ತುರ್ ಹೇ
ಜಿಹಾದ್ ಹಮಾರಾ ರಾಸ್ತಾ ಹೇ
(ಇಸ್ಲಾಂ ನಮ್ಮ ಗುರಿ
ಕುರಾನ್ ನಮ್ಮ ಸಂವಿಧಾನ
ಜಿಹಾದ್ ನಮ್ಮ ದಾರಿ)
*ಹಮೇ ಕ್ಯಾ ಚಾಹಿಯೆ- ನಿಜಾಮ ಮುಸ್ತಫಾ
ಕಾಶ್ಮೀರ್ ಮೇ ಕ್ಯಾ ಚಲೇಗಾ- ನಿಜಾಮ ಮುಸ್ತಫಾ
ಹಿಂದುಸ್ಥಾನ್ ಮೇ ಕ್ಯಾ ಚಲೇಗಾ- ನಿಜಾಮ ಮುಸ್ತಫಾ
(ನಮಗೆ ಏನು ಬೇಕು- ಪ್ರವಾದಿಗಳ ಆಡಳಿತ
ಕಾಶ್ಮೀರದಲ್ಲಿ ಏನು ನಡೆಯುತ್ತದೆ- ಪ್ರವಾದಿಗಳ ಆಡಳಿತ
ಹಿಂದೂಸ್ಥಾನದಲ್ಲಿ ಏನು ನಡೆಯುತ್ತದೆ- ಪ್ರವಾದಿಗಳ ಆಡಳಿತ)
*ಗಂಗಾ-ಜಮುನಾ ಮೇ ಆಗ್ ಲಗಾಯೇಂಗೆ
(ನಾವು ಗಂಗಾ-ಜಮುನಾವನ್ನು ನಾಶ ಮಾಡುತ್ತೇವೆ)
ಇಷ್ಟೆಲ್ಲಾ ಭೀಕರತೆಗಳು ಬಂದೆರಗಿದರೂ ಭವಿಷ್ಯದ ಸುಭದ್ರತೆ, ಸಕ್ಷಮತೆ, ಸಾಕಾರತೆಗಳ ಬಗೆಗೆ ಚಿಂತಿಸದೆ ಕೆಲವು ಮಹಾನ್ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಉದಾಹರಣೆಗೆ ಅರವಿಂದ್ ಕೇಜ್ರಿವಾಲ್ ರಂತಹ ಮನಸ್ಥಿತಿಯುಳ್ಳವರು ಮತ್ತದೇ ಅಲ್ಪಸಂಖ್ಯಾತರ ಓಲೈಸುವ ರಾಜಕಾರಣ ಮಾಡುವ ಮೂಲಕ ಸತ್ಯವನ್ನು ಎದುರಿಸದೆ ಸುಲಭವಾದ ಆದರೆ ಭವಿಷ್ಯದ ದೃಷ್ಟಿಯಲ್ಲಿ ಅತೀ ಭಯಾನಕವಾಗಬಹುದಾದ ವಿಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ. ಇಂತಹ ಮಾನಸಿಕತೆಯ ವ್ಯಕ್ತಿಗಳು ನಮ್ಮ ಕಥೆಯನ್ನು ಓದಿದ್ದರೆ ಅಥವಾ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ವೀಕ್ಷಿಸಿದ್ದರೆ ಜಿಹಾದಿಗಳು ಅವರಿಗೆ ಬೆಂಬಲ ನೀಡಿದ್ದವರನ್ನೂ ಕಾಫಿರ್ ಎಂಬ ಕಾರಣಕ್ಕಾಗಿ ಬರ್ಬರವಾಗಿಯೇ ಹತ್ಯೆಗೈದರು ಎಂಬುದು ಮನವರಿಕೆಯಾಗುತ್ತಿತ್ತು.
ಇವರಿಗೆಲ್ಲಾ ಕಾಶ್ಮೀರಿ ಫೈಲ್ಸ್ ದೇಶವಾಸಿಗಳಿಗೆ ಹತ್ತಿರವಾಗುತ್ತಿರುವುದನ್ನು, ಕಠೋರ ಸತ್ಯ ಸಂಗತಿಯು ದೇಶಭಕ್ತರ ಹೃದಯವನ್ನು ಛೇದಿಸಿ ಹಿಂದೂಗಳಿಗೆ ನ್ಯಾಯ ದೊರಕಿಸಲು ಜೋರಾಗುತ್ತಿರುವ ಕೂಗನ್ನು ಸಹಿಸಲಾಗುತ್ತಿಲ್ಲ.
ಉರ್ದುವುಡ್ ಆಗಿ ಮಾರ್ಪಾಡಾಗಿದ್ದ ಬಾಲಿವುಡ್ ನಿಧಾನವಾಗಿ ಪುನಃ ಭಾರತ್ ವುಡ್ ಆಗುವ ಹೊಸ ಸಂವತ್ಸರದ ಹಾದಿಯಲ್ಲಿ ಸಂಚರಿಸುತ್ತಿದೆ. ಭಯೋತ್ಪಾದನೆ, ರೌಡಿಸಂ ಮಾಡುತ್ತಾ ಭ್ರಷ್ಟ ಮಾರ್ಗದಲ್ಲಿ ಹಣ ಗಳಿಸುವ ತಪ್ಪಿತಸ್ಥರು ಆದರೆ ಶ್ರೀಮಂತಿಕೆಯ ಕಾರಣ ಘನವ್ಯಕ್ತಿಗಳೆಂದು ಬಿಂಬಿತವಾಗಿರುವವರ ಬಳಿ ಹಣವನ್ನು ಪಡೆಯುತ್ತಾರೆ ಹಾಗೂ ಇಂತಿಷ್ಟು ಹಣಕ್ಕೆ ಇಂತಿಷ್ಟು ಪ್ರೋಪಗ್ಯಾಂಡಗಳನ್ನು ಪ್ರದರ್ಶಿಸುವುದಾಗಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಆದರೆ ಹಿಂದೆಂದೂ ಈ ತೆರನಾಗಿ ಜಾಗೃತಗೊಂಡಿರದ ಹಿಂದೂ ಸಮಾಜ ಈಗ ಎಚ್ಚೆತ್ತುಕೊಂಡಿದೆ. ಆದ ಕಾರಣ ಇವರ ಎಲ್ಲಾ ಅಶೋಭನೀಯ, ಅಪ್ರಾಮಾಣಿಕ ಮಾರ್ಗಗಳು ಬಂದ್ ಆಗುವ ಎಲ್ಲಾ ಮುನ್ಸೂಚನೆಗಳು ಕಂಡು ಬರುತ್ತಿವೆ. ಕೊನೆಯದಾಗಿ ಆಕ್ರೋಶ ಭರಿತವಾದ, ತೀವ್ರ ದುಗುಡದ, ತೀವ್ರ ಕಾಡುತ್ತಿರುವ ಪ್ರಶ್ನೆಗಳನ್ನು ಇಲ್ಲಿ ಪ್ರಸ್ತಾಪಿಸಲೇಬೇಕಿದೆ. ಪ್ರಪಂಚದ ಯಾವ ದೇಶಗಳಲ್ಲೂ ಆಶ್ರಯ ಸಿಗದೆ ನಿರಾಶ್ರಿತರಾಗಿ ಓಡಿ ಬಂದವರನ್ನೂ ಸಲಹಿ ಅಭಯ ನೀಡಿದ ನಮ್ಮ ದೇಶದಲ್ಲಿ ಆಶ್ರಯಿಸಿದ ಬಹುತೇಕ ಪಂಥದವರು ಏಕರಸವಾದರು. ಆದರೆ ಅಬ್ರಹಾಮಿಕ್ ಪಾಶ್ಚಿಮಾತ್ಯ ಮತಗಳು ತಮ್ಮ ಪ್ರತ್ಯೇಕತಾ ಧೋರಣೆಯನ್ನು ಮುಂದುವರಿಸುತ್ತಾ ಸಾಮರಸ್ಯದ ಸಂಗತಿಯನ್ನು ಹಿಂದೂಗಳ ಒನ್ ವೇ ಗೆ ಮಾತ್ರ ಸೀಮಿತಗೊಳಿಸಿದರು. ಎಷ್ಟು ಜನ ಮುಸಲ್ಮಾನರು ನಮ್ಮ ಪೂರ್ವಜರು/ಅರಸರು ಈ ಪವಿತ್ರ ಭೂಮಿಯ ಹಿಂದೂಗಳ ಮೇಲೆ ಬರ್ಬರ ಆಕ್ರಮಣ ಮಾಡಿ ಮನುಷ್ಯತ್ವವನ್ನು ಹತ್ಯೆಗೈದಿದ್ದರು, ಸಹಸ್ರಾರು-ಸಹಸ್ರಾರು ದೇಗುಲಗಳನ್ನು ಧ್ವಂಸ ಮಾಡಿ ಪಾವಿತ್ರ್ಯತಾ ಮೂರ್ತಿಗಳನ್ನು ಭಂಜಿಸಿ ಆಸ್ಥೆ, ಶ್ರದ್ಧೆ, ಭಕ್ತಿ ಹಾಗೂ ಸಂಸ್ಕೃತಿಗಳಿಗೆ ವಿರುದ್ಧವಾಗಿ ಮಸೀದಿಗಳನ್ನು ನಿರ್ಮಿಸಿದರು!! ಇದು ಇತಿಹಾಸದ ಅತ್ಯಂತ ದುಃಖಕರ ಮನ ಕಲುಕುವ ಘಟನೆ, ಇದೊಂದು ದೊಡ್ಡ ಐತಿಹಾಸಿಕ ಪ್ರಮಾದ, ಇದಕ್ಕಾಗಿ ಹಿಂದೂಗಳಲ್ಲಿ ಕ್ಷಮೆ ಕೇಳುತ್ತೇವೆ ಹಾಗೂ ಪಶ್ಚಾತ್ತಾಪ ಪಡುತ್ತೇವೆ, ಇನ್ನುಮುಂದೆ ನಾವೆಲ್ಲಾ ಸೌಹಾರ್ದಯುತವಾಗಿ ಗೌರವಪೂರ್ಣವಾಗಿ ಬದುಕುತ್ತೇವೆ ಎಂದು ಧೈರ್ಯವಾಗಿ ಹೇಳಲು ಸಿದ್ಧರಿದ್ದಾರೆ? ಇದೇ ಪ್ರಶ್ನೆ ಕ್ರಿಶ್ಚಿಯನ್ನರಿಗೂ ಕೂಡ. ಲಾಭಕ್ಕಾಗಿ, ವ್ಯಾಪಾರ-ವ್ಯವಹಾರಕ್ಕಾಗಿ ನಿಮಗೆ ಹಿಂದೂಗಳ ದೇವಸ್ಥಾನ ಬೇಕು, ಹಿಂದೂಗಳ ದೇವರ ನಾಮ ಬೇಕು, ಹಿಂದೂ ಗ್ರಾಹಕರು ಬೇಕು ಆದರೆ ಇಂತಹ ಉದಾರವಾದಿ ಹಿಂದೂಗಳಿಗೆ ಗೌರವ ಕೊಡುವುದು, ಅವರ ಸಂಸ್ಕೃತಿ-ಪರಂಪರೆಯನ್ನು ಸಮ್ಮಾನಿಸುವುದು ಮಾತ್ರ ಬೇಕಿಲ್ಲವೆ? ಸಹಿಷ್ಣುತೆಗಿಂತಲೂ ಸಾವಿರ ಪಟ್ಟು ಮೇಲಾದ ಸ್ವೀಕಾರತೆಯನ್ನೇ ತಮ್ಮ ಧ್ಯೇಯ ವನ್ನಾಗಿಸಿಕೊಂಡಿರುವ ಹಿಂದೂಗಳು ಸತ್ವಯುತ ಮಾನವಧರ್ಮವನ್ನು ರಕ್ಷಿಸಲು ಕ್ಷಾತ್ರಭರಿತ ಆಪತ್ ಧರ್ಮವನ್ನು ಪಾಲಿಸಿಯೇ ಪಾಲಿಸುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ‘ಅಹಿಂಸಾ ಪರಮೋಧರ್ಮಃ ಧರ್ಮ ಹಿಂಸಾ ತತೈವಚ’ ಅರ್ಥಾತ್ ಅಹಿಂಸೆಯೇ ಶ್ರೇಷ್ಠ ಧರ್ಮ, ಆದರೆ ಧರ್ಮ ರಕ್ಷಣೆಗಾಗಿ ಹಿಂಸೆ ಮಾಡುವುದೂ ಕೂಡ ಅದರಷ್ಟೇ ಶ್ರೇಷ್ಠ ಧರ್ಮ. ಪ್ರತ್ಯೇಕತೆ, ಸ್ವೀಕಾರತೆ-ಔದಾರ್ಯತೆಗಳ ಸಂಘರ್ಷ ಎಂದಿಗೆ ಮುಗಿಯುವುದು? ಈ ಕದನಕ್ಕೆ ಅಂತ್ಯವಿರಾಮ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ಘರ್ ವಾಪಸಿ (ಮರಳಿ ಸ್ವಂತ ಮನೆಗೆ) ಮಾತ್ರಾನಾ? ಸ್ವಾಮಿ ವಿವೇಕಾನಂದ: ‘ಒಬ್ಬ ಹಿಂದೂ ಮತಾಂತರಗೊಂಡರೆ ಹಿಂದೂ ಧರ್ಮಕ್ಕೆ ಒಬ್ಬನ ನಷ್ಟ ಮಾತ್ರವಷ್ಟೆ ಅಲ್ಲ, ಒಬ್ಬನ ವಿರೋಧ ಹೆಚ್ಚಾಯಿತು ಎಂದು!’. ಸೌದಿ ಅರೇಬಿಯಾ, ಜೆರುಸಲೆಮ್ ಗಳಲ್ಲಿನ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಿಗಿಂತ ನಮ್ಮಲ್ಲಿನ ಹಿಂದೆ ಯಾವುದೋ ಬಲವಂತದ ಅಥವಾ ಮೋಸದ ಜಾಲದಲ್ಲಿ ಸಿಲುಕಿ ಮತಾಂತರಗೊಂಡ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರೇ ಹೆಚ್ಚು ಕಟ್ಟರ್ ವಾದಿಗಳಾಗಿ ಬೆಳೆಯುತ್ತಿರುವುದೇ ಸ್ವಾಮೀಜಿಯವರ ಈ ಎಚ್ಚರಿಕೆಯ ಸಂದೇಶಕ್ಕೆ ಸಾಕ್ಷಿ. ಸಮಸ್ತ ಜಗತ್ತಿಗೇ ಜ್ಞಾನದ ಬೆಳಕನ್ನು ನೀಡಬಲ್ಲ ಸಾಮರ್ಥ್ಯವಿರುವ ಹಿಂದೂ ಧರ್ಮದವರಾದ ನಾವು ನಮ್ಮಲ್ಲಿರುವ ಸಾಲು-ಸಾಲು ಆಘಾತಕಾರಿ ಆಕ್ರಮಣಗಳ ದೌರ್ಬಲ್ಯವನ್ನು ಕೊಡಹಿ ಹಿಂದುತ್ವದ ಝೇಂಕಾರದಿಂಧ ನಮ್ಮ ದಿವ್ಯ ಶಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಮೂಲಕ ಸರ್ವರ ಕಲ್ಯಾಣ ಮಾಡೋಣ- ಇಂತಿ ನಿಮ್ಮ ಕಾಶ್ಮೀರಿ ಪಂಡಿತ.
✍️ಸಿಂಚನ.ಎಂ.ಕೆ ಮಂಡ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.