ಶಾಲಾ ಮಕ್ಕಳ ಮೇಲೆ ಧಾರ್ಮಿಕ ಮತಾಂತರದ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ತಮಿಳುನಾಡಿನಿಂದ ವರದಿಗಳು ಬರುತ್ತಲೇ ಇವೆ. ಕ್ರಿಶ್ಚಿಯನ್ ಶಾಲೆಗಳಿಗೆ ತೆರಳುವ ಮಕ್ಕಳು ಕ್ರೈಸ್ತ ಆಚರಣೆಗಳನ್ನು ಅಳವಡಿಸಿಕೊಳ್ಳುವ ಆಮಿಷಕ್ಕೆ ಗುರಿಯಾಗುತ್ತಿದ್ದಾರೆ ಎಂಬುದು ಇತ್ತೀಚಿಗೆ ಸುದ್ದಿ ಮಾಧ್ಯಮವೊಂದು ನಡೆಸಿದ ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. 12 ನೇ ತರಗತಿಯ ವಿದ್ಯಾರ್ಥಿನಿ ಲಾವಣ್ಯ ತಾನು ಕಲಿಯುತ್ತಿದ್ದ ಮಿಷನರಿ ಶಾಲೆಯ ಸಿಬ್ಬಂದಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದರಿಂದ ಆತ್ಮಹತ್ಯೆ ಮಾಡಿಕೊಂಡ ಮೂರು ತಿಂಗಳ ನಂತರ ಈ ತನಿಖಾ ವರದಿ ಬಂದಿದೆ. ಲಾವಣ್ಯ ಪ್ರಕರಣವು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು, ನಂತರ ಮದ್ರಾಸ್ ಹೈಕೋರ್ಟ್ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ವಹಿಸುವಂತೆ ಸೂಚಿಸಿದೆ.
ಕ್ರೈಸ್ತ ಮಿಷನರಿಗಳು ಮತಾಂತರ ತಂತ್ರಗಳಿಗೆ ತಮಿಳುನಾಡಿನಲ್ಲಿ ವಾಸಿಸುತ್ತಿರುವ ಹಿಂದುಗಳು ಬಲಿಯಾಗುತ್ತಿದ್ದಾರೆ. ಪೊಳ್ಳು ಭರವಸೆಗಳು ಮತ್ತು ಹಣಕಾಸಿನ ನೆರವು ನೀಡುವ ಆಮಿಷಗಳನ್ನೊಡ್ಡಿ ಹಿಂದೂಗಳನ್ನು ಮತಾಂತರ ಮಾಡುವ ಪ್ರಯತ್ನ ಅಲ್ಲಿ ನಿರಂತರವಾಗಿ ಸಾಗುತ್ತಿದೆ. ನ್ಯೂಸ್ 18 ಸುದ್ದಿ ಮಾಧ್ಯಮದ ವರದಿಯಿಂದ ಸರ್ಕಾರಿ ಅನುದಾನಿತ ಶಾಲೆಗಳು ಮತ್ತು ಖಾಸಗಿ ಶಾಲೆಗಳು ಮತ್ತು ಟ್ಯೂಷನ್ ತರಗತಿಗಳಲ್ಲಿ ನಡೆಸಿದ ಸ್ವತಂತ್ರ ತನಿಖೆಯಲ್ಲಿ ಮಿಷನರಿಗಳು ತಮ್ಮ ಧರ್ಮ ಪ್ರಚಾರದ ವ್ಯವಹಾರದಿಂದ ಮಕ್ಕಳನ್ನೂ ಸಹ ಹೊರಗಿಡುತ್ತಿಲ್ಲ ಎಂಬುದು ತಿಳಿದು ಬಂದಿದೆ.
ನೀವು ಏಸುವನ್ನು ಹೊರತುಪಡಿಸಿ ಬೇರೆ ದೇವರನ್ನು ಪ್ರಾರ್ಥಿಸಬಾರದು, ಉತ್ತಮ ಅಂಕ ಬೇಕಾದರೆ ಏಸುವನ್ನು ಪ್ರಾರ್ಥಿಸಿ ಎಂದು ಎಂಟನೇ ತರಗತಿಯ ವಿದ್ಯಾರ್ಥಿಗೆ ಸೂಚನೆ ನೀಡಿದ್ದನ್ನು ವರದಿ ಉಲ್ಲೇಕಿಸಿದೆ. ಮಾತ್ರವಲ್ಲದೆ ಏಸುವನ್ನು ಆತ ಪ್ರಾರ್ಥಿಸಲು ವಿಫಲನಾದರೆ ಜೀವನದಲ್ಲಿ ಆತನಿಗೆ ಎಂದಿಗೂ ಯಶಸ್ಸು ಸಿಗುವುದಿಲ್ಲ, ಆತನ ದೇಹ ವಿರೂಪವಾಗುತ್ತದೆ ಎಂಬ ಭಯವನ್ನು ಕೂಡ ಆ ವಿದ್ಯಾರ್ಥಿಗೆ ಮನಸ್ಸಿನಲ್ಲಿ ತುಂಬಿಸಲಾಗಿತ್ತು. ವಿಷಯ ತಿಳಿದ ಬಳಿಕ ಆ ಬಾಲಕನನ್ನು ಆತನ ಹೆತ್ತವರು ಬೇರೆ ಶಾಲೆಗೆ ಸೇರಿಸಿದ್ದಾರೆ. “ಒಂದು ಧರ್ಮ ಇನ್ನೊಂದು ಧರ್ಮದಿಂದ ಹೇಗೆ ಶ್ರೇಷ್ಠವಾಗಿದೆ ಎಂದು ತಿಳಿಯಲು ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಇದು ದ್ವೇಷವನ್ನು ಸೃಷ್ಟಿಸುತ್ತದೆ” ಇದು ಬಾಲಕನ ತಂದೆ ಹೇಳಿದ್ದಾರೆ.
ಇನ್ನೊಂದು ಘಟನೆಯಲ್ಲಿ 14 ವರ್ಷದ ಬಾಲಕಿಯೊಬ್ಬಳಿಗೆ ತರಗತಿಯಲ್ಲಿ, “ಹಿಂದೂಗಳು ಸೈತಾನರು. ಏಸುವನ್ನು ಪ್ರಾರ್ಥಿಸದಿದ್ದರೆ ಜೀವನದಲ್ಲಿ ದುಃಖ ಸಿಗುತ್ತದೆ. ಜೀವನದಲ್ಲಿ ಯಶಸ್ವಿಯಾಗಲು ಬಯಸುವುದಾದರೆ ಬೈಬಲ್ ಓದಬೇಕು” ಎಂದು ಹೇಳಲಾಗಿತ್ತು. ಇದನ್ನು ತಿಳಿದ ಆಕೆಯ ತಂದೆ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ದೂರು ನೀಡಿದಾಗ ಇಂತಹ ಘಟನೆ ಮತ್ತೊಮ್ಮೆ ಪುನರಾವರ್ತನೆ ಆಗುವುದಿಲ್ಲ ಎಂದು ಭರವಸೆ ನೀಡಲಾಯಿತು. ಆದರೆ ಆ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ಶಾಲಾ ಮಂಡಳಿ ಗಂಭೀರತೆ ತೋರಿಸಲಿಲ್ಲ ಎಂಬ ಆರೋಪವಿದೆ.
ಶಾಲೆಗಳಲ್ಲಿ ಮಾತ್ರವಲ್ಲದೆ ಟ್ಯೂಷನ್ ತರಗತಿಗಳಲ್ಲಿಯೂ ಮಕ್ಕಳಿಗೆ ಧಾರ್ಮಿಕ ಉಪದೇಶ ನೀಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. 3 ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಅವಳ ಟ್ಯೂಷನ್ ಶಿಕ್ಷಕರು ಪ್ರಾರ್ಥನೆಯಲ್ಲಿ ಸೇರುವಂತೆ ಒತ್ತಾಯಿಸಿದ್ದರು. ಆಕೆಯ ಪೋಷಕರು ವಿರೋಧಿಸಿದ ನಂತರವೂ ಅವಳನ್ನು ಪ್ರಾರ್ಥನೆಗೆ ಸೇರುವಂತೆ ಒತ್ತಾಯಿಸಲಾಯಿತು. “ನನ್ನ ಟ್ಯೂಷನ್ನಲ್ಲಿರುವ ಒಬ್ಬ ಹುಡುಗನಿಗೆ ಒಳ್ಳೆಯ ಅಂಕಗಳು ಬೇಕಾದರೆ ಅವನು ಪ್ರಾರ್ಥನೆಗೆ ಬರಬೇಕು ಎಂದು ಹೇಳಲಾಗಿತ್ತು” ಎಂದು ಬಾಲಕಿ ವರದಿಗಾರರ ಬಳಿ ಹೇಳಿದ್ದಾಳೆ.
ಸ್ಥಳೀಯರು ಮತ್ತು ಹೋರಾಟಗಾರರ ಪ್ರಕಾರ, ರಾಜ್ಯದಲ್ಲಿ ಇತ್ತೀಚೆಗೆ ಮತಾಂತರದ ಘಟನೆಗಳು ಹೆಚ್ಚಾಗುತ್ತಿವೆ. ನಾಗರಕೋಯಿಲ್ ಜಿಲ್ಲೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿರುವ ಥಿಯವ ಪ್ರಕಾಶ್ ಅವರು ಸಾಮಾನ್ಯವಾಗಿ ಶಿಕ್ಷಣತಜ್ಞರಂತೆ ಬಿಂಬಿಸಿಕೊಳ್ಳುವ ಮಿಷನರಿಗಳ ಕಾರ್ಯ ವಿಧಾನದ ಬಗ್ಗೆ ಮಾತನಾಡಿದ್ದಾರೆ. ಅವರ ಪ್ರಕಾರ, ಮಿಷನರಿಗಳು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ‘ಸೆಲ್ ಫೋನ್ಗಳ ಬಳಕೆ’, ‘ತಂತ್ರಜ್ಞಾನದ ದುರ್ಬಳಕೆ’ ಅಥವಾ ನೈತಿಕ ವಿಜ್ಞಾನದಂತಹ ಹದಿಹರೆಯದ ಸಮಸ್ಯೆಗಳ ಕುರಿತು ಉಪನ್ಯಾಸಗಳನ್ನು ನೀಡುವ ಅವಕಾಶ ಪಡೆಯುತ್ತಾರೆ. ಈ ಉಪನ್ಯಾಸಗಳು ನಿಧಾನವಾಗಿ ಪ್ರಾರ್ಥನೆಗಳು, ಒಂದು ನಿರ್ದಿಷ್ಟ ಧರ್ಮದ ಪ್ರಾಮುಖ್ಯತೆ ಮತ್ತು ದೇವರನ್ನು ಹೇಗೆ ಪ್ರಾರ್ಥಿಸಬೇಕು ಮತ್ತು ಇತರ ಧರ್ಮಗಳು ಹೇಗೆ ಕೆಟ್ಟವು ಎಂಬುದರ ಮೇಲೆ ಸಾಗುತ್ತದೆ. ಇದು 8-9 ವರ್ಷ ವಯಸ್ಸಿನ ಮಕ್ಕಳ ಸಂಪೂರ್ಣ ಬ್ರೈನ್ ವಾಶ್ ತಂತ್ರ ಆಗಿದೆ.
ಕನ್ಯಾಕುಮಾರಿಯಲ್ಲಿ ಮತಾಂತರದ ವಿಚಾರಗಳ ಬಗ್ಗೆ ಬರೆದಿರುವ ಲಕ್ಷ್ಮಿ ಮಣಿವಣ್ಣನ್, “ಮಕ್ಕಳಿಗೆ ಅಂಕಗಳ ಆಮಿಷ ಒಡ್ಡಿದರೆ, ದೊಡ್ಡವರಿಗೆ ಆರ್ಥಿಕ ಸಹಾಯದ ಬಲೆ ಬೀಸಲಾಗುತ್ತದೆ” ಎಂದು ಹೇಳುತ್ತಾರೆ. ಮಣಿವಣ್ಣನ್ ಅವರು ತಮ್ಮ ಅಧ್ಯಯನಗಳ ಪ್ರಕಾರ, ಕನ್ಯಾಕುಮಾರಿ ಮತ್ತು ಹತ್ತಿರದ ಪ್ರದೇಶಗಳ ನಿವಾಸಿಗಳಲ್ಲಿ 50% ಕ್ರಿಪ್ಟೋ ಕ್ರಿಶ್ಚಿಯನ್ನರು ಇದ್ದಾರೆ. ಅಂದರೆ ಇವರು ನಿಜ ಜೀವನದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಆಚರಿಸುವವರು ಆದರೆ ಸರ್ಕಾರದ ಫಲಾನುಭವಿ ಯೋಜನೆಗಳಿಗಾಗಿನ ದಾಖಲೆಯಲ್ಲಿ ಹಿಂದೂಗಳಂತೆ ಪೋಸ್ ನೀಡುತ್ತಾರೆ. “ಕನ್ಯಾಕುಮಾರಿ ಮತ್ತು ಹತ್ತಿರದ ಹಳ್ಳಿಗಳ ಜನಸಂಖ್ಯೆಯ ಧಾರ್ಮಿಕ ಆಚರಣೆ ಸ್ಪಷ್ಟವಾಗಿ ಬದಲಾಗಿದೆ” ಎಂದು ನಗರದ ಶಿಕ್ಷಣತಜ್ಞ ಮತ್ತು ನಿವೃತ್ತ ಪ್ರಾಧ್ಯಾಪಕ ಉಮಯೋರು ಭಾಗನ್ ಹೇಳುತ್ತಾರೆ. “ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಧರ್ಮವನ್ನು ಅನುಸರಿಸಿದರೆ ಅವರು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಮಕ್ಕಳ ಭವಿಷ್ಯದ ಜೊತೆ ಆಟವಾಡುವುದು ಅಪರಾಧ” ಎಂದು ಭಾಗನ್ ಪ್ರತಿಪಾದಿಸುತ್ತಾರೆ.
ಸ್ಥಳೀಯ ಸಂಸ್ಥೆಗಳ ಗುಂಪುಗಳು ಮತ್ತು ಕಾರ್ಯಕರ್ತರು ಅಧಿಕಾರಿಗಳ ಮುಂದೆ ಇಂತಹ ಸಮಸ್ಯೆಗಳನ್ನು ಎತ್ತಿದರೂ ಪ್ರಯೋಜನ ಸಿಗುತ್ತಿಲ್ಲ. ತಾರತಮ್ಯದ ಮತಾಂತರ ಪದ್ಧತಿಗಳ ವಿರುದ್ಧ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಅನೇಕ ಕಾರ್ಯಕರ್ತರು ಹಿಂದೂ ಸಂಘಟನೆಗಳಿಂದ ಸಹಾಯವನ್ನು ಪಡೆದು ಮತಾಂತರದ ಆಮಿಷಕ್ಕೆ ಒಳಗಾದ ಕುಟುಂಬಗಳಿಗೆ ಬೆಂಬಲ ನೀಡಲು ಸಂಘಟಿತ ಪ್ರಯತ್ನವನ್ನು ಮಾಡಿದ್ದಾರೆ. “ನಾವು ಅಂತಹ ಜನರನ್ನು ಅವರ ಧರ್ಮಕ್ಕೆ ಮರಳಿ ತರಲು ಪ್ರಯತ್ನಿಸುತ್ತೇವೆ ಮತ್ತು ಅವರು ಬಯಸಿದರೆ ಪೊಲೀಸರಿಗೆ ದೂರು ನೀಡಲು ಸಹಾಯ ಮಾಡುತ್ತೇವೆ” ಎಂದು ಕಾರ್ಯಕರ್ತ ಭಾಸ್ಕರ್ ಹೇಳುತ್ತಾರೆ.
ಒಟ್ಟಿನಲ್ಲಿ ಮತಾಂತರ ಪಿಡುಗು ತಮಿಳುನಾಡನ್ನು ವ್ಯಾಪಿಸಿದೆ. ಮಿಷನರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ವಿಫಲವಾದರೆ ಮುಂದೆ ಹಿಂದೂ ಸಮಾಜಕ್ಕೆ ಅನಾಹುತ ಕಟ್ಟಿಟ್ಟ ಬುತ್ತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.