ನವದೆಹಲಿ: ರಾಜ್ಯಸಭೆಗೆ ಇತ್ತೀಚಿಗೆ ನಡೆದ ಚುನಾವಣೆಯ ನಂತರ, ಮೇಲ್ಮನೆಯಲ್ಲಿ ಬಿಜೆಪಿಯ ಸ್ಥಾನಗಳು ಮೊದಲ ಬಾರಿಗೆ 100 ದಾಟಿದೆ. ಬಿಜೆಪಿ ಹೊಂದಿರುವ ಒಟ್ಟು ಸ್ಥಾನ ಈಗ 101ಕ್ಕೇರಿದೆ.
ಗುರುವಾರ ನಡೆದ 13 ರಾಜ್ಯಸಭಾ ಸ್ಥಾನಗಳ ಚುನಾವಣೆಯ ಪೈಕಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವು ನಾಲ್ಕರಲ್ಲಿ ಗೆದ್ದಿದೆ.
ಬಿಜೆಪಿ ಅದರ ಮಿತ್ರಪಕ್ಷವಾದ UPPL ಜೊತೆಗೆ ಅಸ್ಸಾಂ, ತ್ರಿಪುರಾ ಮತ್ತು ನಾಗಾಲ್ಯಾಂಡ್ ರಾಜ್ಯಗಳ ನಾಲ್ಕು ರಾಜ್ಯಸಭಾ ಸ್ಥಾನಗಳನ್ನು ಗೆದ್ದಿದೆ. ಅದೆಂದರೆ .
ಅಸ್ಸಾಂನಲ್ಲಿ ಬಿಜೆಪಿಯ ಪಬಿತ್ರಾ ಮಾರ್ಗರಿಟಾ ಮತ್ತು ಯುಪಿಪಿಎಲ್ನ ರುಂಗ್ರಾ ನರ್ಜಾರಿ ಅವರು ಗೆದ್ದಿದ್ದಾರೆ.
ಬಿಜೆಪಿ ಮಿತ್ರಪಕ್ಷವಾದ ಎನ್ಪಿಎಫ್ ನಾಗಾಲ್ಯಾಂಡ್ ಸ್ಥಾನವನ್ನು ಅವಿರೋಧವಾಗಿ ಗೆದ್ದಿದೆ. ತ್ರಿಪುರಾದಲ್ಲಿ ಸಿಪಿಎಂ ವಿರುದ್ಧ ಬಿಜೆಪಿ ವಿಜಯ ಸಾಧಿಸಿದೆ.
ಒಟ್ಟಾರೆಯಾಗಿ, ಗುರುವಾರ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆದ್ದರೆ ಅದರ ಮಿತ್ರಪಕ್ಷ UPPL ಒಂದು ಸ್ಥಾನವನ್ನು ಗೆದ್ದಿದೆ.
ಬಿಜೆಪಿ ಈ ಹಿಂದೆ ರಾಜ್ಯಸಭೆಯಲ್ಲಿ 97 ಸ್ಥಾನಗಳನ್ನು ಹೊಂದಿತ್ತು ಮತ್ತು ಮೂರು ಹೊಸ ಸದಸ್ಯರ ಸೇರ್ಪಡೆಯೊಂದಿಗೆ, ಪಕ್ಷವು ಈಗ ಮೇಲ್ಮನೆಯಲ್ಲಿ 100 ಸ್ಥಾನಗಳನ್ನು ಹೊಂದಲಿದೆ.
1988ರ ನಂತರ ರಾಜ್ಯಸಭೆಯಲ್ಲಿ ಬಿಜೆಪಿ 100 ಸ್ಥಾನಗಳ ಗಡಿ ದಾಟಿದ ಮೊದಲ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.