ಉಕ್ರೇನ್ ಹಾಗೂ ರಷ್ಯಾ ನಡುವಿನ ಕಾದಾಟದಲ್ಲಿ ನಮ್ಮ ಭಾರತೀಯ ಪ್ರಜೆಗಳು ಉಕ್ರೇನ್ ನಲ್ಲಿ ಸಿಲುಕಿ ಕಷ್ಟ ಅನುಭವಿಸುತ್ತಿರುವುದು ಬೇಸರದ ಸಂಗತಿ. ಭಾರತದಲ್ಲಿ 97% ತೆಗೆದರೂ ಮೆಡಿಕಲ್ ಸೀಟು ಸಿಗದೆ ಉಕ್ರೇನ್ ಗೆ ಅದೆಷ್ಟೋ ಯುವ ಜನತೆ ತೆರಳಿ ಮೆಡಿಕಲ್ ಅಭ್ಯಾಸವನ್ನ ಮಾಡುತ್ತಿದ್ದಾರೆ, ವಿದ್ಯಾರ್ಜನೆಯಲ್ಲೂ ಅವೈಜ್ಞಾನಿಕ ಮೀಸಲಾತಿ ಅಡ್ಡ ಬಂದು ಅದೆಷ್ಟೋ ಯುವಜನತೆಯ ಕನಸಿಗೆ ಮಣ್ಣೆರೆಸಿರುವುದು ಬೇಸರದ ಸಂಗತಿ ಮತ್ತು ಇದು ಯೋಚಿಸಬೇಕಾದ ಸಂಗತಿಯೇ.
ಉಕ್ರೇನ್ ರಷ್ಯಾ ನಡುವಿನ ಕಾದಾಟ ಈ ಮಟ್ಟಕ್ಕೆ ಹೋಗುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ ಅನ್ನಿಸುತ್ತದೆ, ಅನಾಯಾಸವಾಗಿ ನಮ್ಮ ಭಾರತೀಯರು ಇಂದು ಅವೆರಡೂ ದೇಶಗಳ ನಡುವೆ ನಡೆಯುತ್ತಿರುವ ಕಾದಾಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ವಿಷಯವನ್ನರಿತ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಹೆಸರಿನಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಒಂದು ಚೂರು ತಡಮಾಡದೆ ಧಾವಿಸಿತು. ಉಕ್ರೇನಿನ ಅಕ್ಕ ಪಕ್ಕದ ದೇಶಗಳಿಗೆ ವಿಮಾನಗಳನ್ನು ಕಳುಹಿಸಿ ರಕ್ಷಣಾ ಕಾರ್ಯ ಮಾಡುತ್ತಿದೆ. ಭಾರತೀಯರ ರಕ್ಷಣೆಯ ಮೇಲ್ವಿಚಾರಣೆಗೆಂದೇ ನಾಲ್ಕು ಜನ ಸಚಿವರನ್ನೂ ಕೂಡಾ ಕಳುಹಿಸಿಕೊಟ್ಟಿದೆ.
ಇದರ ಮಧ್ಯದಲ್ಲಿ ಎಂದಿನಂತೆ ದೇಶದ ವಿಪಕ್ಷಗಳು ಹಾಗೂ ಕೆಲವು ಮರಳಿ ಬಂದ ಯುವ ಜನತೆ ಬಾಯಿಗೆ ಬಂದಂತೆ ಮಾತಾನಡುತ್ತಿರುವುದನ್ನು ದೇಶದ ಜನತೆ ನೋಡಿ ಅವರ ಮುಖಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ.! ಓರ್ವ ವಿದ್ಯಾರ್ಥಿ ಭಾರತದಲ್ಲಿ ವಿಮಾನ ಇಳಿದು ಹೇಳುತ್ತಾನೆ ನಮಗೆ ನಮ್ಮ ದೇಶದ ಸರ್ಕಾರ ಸಹಾಯ ಮಾಡಿಯೇ ಇಲ್ಲ ನಾವೇ ಬಂದೆವು ಎಂದು, ಇವರ ಮಾತನ್ನು ಕೇಳಿದಾಗ ನಮ್ಮ ತೆರಿಗೆ ಹಣದಲ್ಲಿ ವಾಪಾಸು ಕರೆದುಕೊಂಡು ಬರುವ ಅವಶ್ಯಕತೆ ಆದರೂ ಏನಿದೆ ಎಂದೆನಿಸುತ್ತದೆ.! ಇನ್ನು ರಾಹುಲ್ ಗಾಂಧಿಯಂತೂ ಕೈಲಾಗದವರು ಮೈ ಪರಚಿಕೊಂಡಂತೆ ಗಂಟೆಗೊಂದು ಹೇಳಿಕೆಗಳನ್ನು ಕೊಡುತ್ತಾ ಇಂತಹ ಸಮಯದಲ್ಲೂ ಕೂಡಾ ತಮ್ಮ ದ್ವೇಷದ ರಾಜಕಾರಣವನ್ನು ಮುಂದುವರೆಸಿದೆ.
ಕೇಲವು ರಾಜಕಾರಣಿಗಳು ಕೇಳುತ್ತಿದ್ದರು, ರಾಜಕಾರಣಿಗಳ್ಯಾಕೆ ಹಲವಾರು ಜನರೇ ಕೇಳುತ್ತಿದ್ದರು ಮೋದಿಜಿ ಅಷ್ಟೊಂದು ವಿದೇಶ ಪ್ರವಾಸ ಯಾಕೆ ಮಾಡುತ್ತಾರೆ ಎಂದು? ಆದರೆ ಅದರ ಫಲ ಈಗ ಗೊತ್ತಾಗುತ್ತಿದೆ. ಭಾರತದ ಧ್ವಜ ಕಂಡೊಡನೆಯೇ ಉಕ್ರೇನ್ ಗಡಿಗಳಲ್ಲಿ ಯಾವ ದೇಶದವರೂ ಸಹ ತಂಟೆ ತಕರಾರು ಮಾಡದೆ ನಮ್ಮ ವಾಹನವಳಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು ಎಂದು ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಲವಾರು ಭಾರತೀಯರ ಬಾಯಲ್ಲೇ ಕೇಳಿದ್ದೇವೆ. ಯಾವ ದೇಶವೂ ಸಹ ತಮ್ಮ ಪ್ರೇಜೆಗಳ ರಕ್ಷಣೆಗೆ ಮುಂದಾಗುತ್ತಿಲ್ಲ, ಆದರೆ ಭಾರತ ಮಾತ್ರ ಹಗಲು ರಾತ್ರಿ ಎನ್ನದೇ ತನ್ನ ಪ್ರಜೆಗಳ ರಕ್ಷಣೆಗೆ ಧಾವಿಸಿದೆ. ಮೋದಿಜಿ ವಿದೇಶಾಂಗ ನೀತಿ ಬಗ್ಗೆ ತಿಳುವಳಿಕೆ ಪಾಠ ಹೇಳಿಕೊಟ್ಟವರಿಗೆ ಛಾಟಿ ಬೀಸಿದಂತಾಗುತ್ತಿದೆ !
ಹೊರ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ ಭಾರತತೀಯರ ರಕ್ಷಣೆಗೆ ಮೋದಿಜಿ ಸರ್ಕಾರ ಧಾವಿಸಿದ್ದು ಇದೇ ಮೊದಲೇನಲ್ಲ.
2014 ರಲ್ಲಿ ಇರಾಕ್ ನಲ್ಲಿ ಸಿಲುಕಿದ್ದ 46 ನರ್ಸ್ ಗಳ ರಕ್ಷಣೆ , 2015 ರಲ್ಲಿ ಎಮನ್ ನಲ್ಲಿ ಸಿಲುಕಿದ್ದ 5600 ಜನರನ್ನು ಆಪರೇಷನ್ ರಾಹತ್ ಮೂಲಕ ರಕ್ಷಣೆ, 2016 ರಲ್ಲಿ ಸುಡಾನ್ ನಲ್ಲಿ ಸಿಲುಕಿದ್ದ 156 ಜನರನ್ನು ಆಪರೇಷನ್ ಸಂಕಟ್ ಮೋಚನ್ ಮೂಲಕ ರಕ್ಷಣೆ, 2020 ರಲ್ಲಿ ವಂದೇ ಭಾರತ್ ಮೂಲಕ 40 ಲಕ್ಷ ಜನರ ರಕ್ಷಣೆ ಮಾಡಿದೆ.
ಸ್ವತಃ ಪ್ರಧಾನಿಗಳೇ ಇದರ ಮೇಲ್ವಿಚಾರಣೆಯನ್ನು ನಡೆಸಿ ಪ್ರತಿಯೋರ್ವ ಭಾರತೀಯನೂ ಭಾರತಕ್ಕೆ ಮರಳಲು ಬೇಕಾದ ವ್ಯವಸ್ಥೆ ಮಾಡುತ್ತಿದ್ದಾರೆ, ಇಂತಹ ಬಿಕ್ಕಟ್ಟಿನ ಸಮವದಲ್ಲಿ ಅತೀ ಜಾಗರೂಕತೆಯಿಂದ ಮುನ್ನಡೆಯುವುದು ಅತ್ಯಗತ್ಯ , ಅದನ್ನು ಮೋದಿಜಿ ಸರ್ಕಾರ ಮಾಡುತ್ತಿದೆ.
✍️ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.