ಸ್ವಾತಂತ್ರ್ಯ ವೀರ ಸಾವರ್ಕರ್ ಎಂದರೆ ಅದೊಂದು ಶಕ್ತಿ, ದೇಶಭಕ್ತಿಯ ಬೆಂಕಿ ಚೆಂಡು. ಇಂದಿಗೂ ಕೂಡಾ ಸಾವರ್ಕರ್ ಅವರ ಹೆಸರು ಕೇಳಿದರೆ ಉರಿದು ಬೀಳುವ ಜನ ನಮ್ಮ ನಿಮ್ಮೆಲ್ಲರ ಮಧ್ಯದಲ್ಲೇ ಇದ್ದಾರೆ. ವೀರ ಸಾವರ್ಕರ್ ಅವರ ಜೀವನ ನಮ್ಮೆಲ್ಲರಿಗೂ ಪ್ರೇರಣೆ, ಅವರ ಜೀವನವೇ ಒಂದು ತಪಸ್ಸಿದ್ದಂತೆ, ಪ್ರತಿ ಕ್ಷಣವೂ ಕೂಡಾ ಸ್ವಾತಂತ್ರ್ಯ ಲಕ್ಷ್ಮಿ ಬಗ್ಗೆಯೇ ಯೋಚಿಸುವ ವ್ಯಕ್ತಿತ್ವ ಅದು.
ಬ್ರಿಟಿಷರು ನಮ್ಮ ನೆಲಕ್ಕೆ ಬಂದು ನಮ್ಮನ್ನು ಆಳುತ್ತಿರುವಂತೆ ನಾವು ಅವರ ದೇಶಕ್ಕೆ ನುಗ್ಗಿ ಅವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಯೋಚಿಸಿ ಸಾವರ್ಕರ್ ಬ್ಯಾರಿಸ್ಟರ್ ಪದವಿಯ ನೆಪವಿಟ್ಟುಕೊಂಡು ಇಂಗ್ಲೇಂಡಿಗೆ ಪ್ರಯಾಣ ಬೆಳೆಸಿ ಪಂ. ಶ್ಯಾಮಕೃಷ್ಣ ವರ್ಮ ಸ್ಥಾಪಿಸಿದ್ದ ಭಾರತ ಭವನವನ್ನು ಪ್ರವೇಶಿಸಿ ಭಾರತದಿಂದ ಇಂಗ್ಲೆಂಡಿಗೆ ವಿಧ್ಯಾಭ್ಯಾಸಕ್ಕಾಗಿ ಬರುತ್ತಿದ್ದ ಅನೇಕ ಶ್ರೀಮಂತ ಕುಟುಂಬದ ಯುವಕರಲ್ಲಿ ದೇಶಪ್ರೇಮದ ಜ್ಯೋತಿ ಬೆಳಗಿಸಿದವರು. ಅವರಲ್ಲಿ ಪ್ರಮುಖರಾದವರೆಂದರೆ ಮದನಲಾಲ ಧಿಂಗ್ರಾ. ಲಾರ್ಡ್ ಕರ್ಜನ್ ವಾಯಿಲಿ ಎಂಬ ಭಾರತದ ಸಚಿವಾಲಯದ ಬ್ರಿಟಿಷ್ ಅಧಿಕಾರಿಯನ್ನು ಅವರದೆ ನೆಲದಲ್ಲಿ ಭಾರತದಲ್ಲಿ ಭಾರತೀಯರ ಮೇಲಿನ ದೌರ್ಜನ್ಯಕ್ಕಾಗಿ ಸಾವರ್ಕರರ ಸೂಚನೆಯ ಮೇರೆಗೆ ಮದನಲಾಲ ಧಿಂಗ್ರಾನಿಂದ ಹತನಾದದ್ದು ಭಾರತೀಯರ ದೃಷ್ಟಿಯಿಂದ ಮಹಾನ್ ಸಾಧನೆ ಅಲ್ಲದೆ ಮತ್ತಿನ್ನೇನು.?
ಕಾಲಾಪಾನಿ ಶಿಕ್ಷೆ ಅನುಭವಿಸುತ್ತಿದ್ದಾಗಲೂ ಕೂಡಾ ಅಂಡಮಾನಿನ ಜೈಲಿನಲ್ಲಿ ಹಿಂದುಗಳ ಮೇಲೆ ನಡೆಯುತ್ತಿದ್ದ ದಮನ ನೀತಿಯನ್ನು ವಿರೋಧಿಸಿ ಅಲ್ಲಿಯೂ ಮುಸ್ಲಿಮರು, ಕ್ರಿಶ್ಚಿಯನ್ನರು ಮಾಡುತ್ತಿದ್ದ ಮೋಸದ ಮತಾಂತರವನ್ನು ತಡೆದರು. ಮತಾಂತರಕ್ಕೆ ಬಲಿಯಾದವರನ್ನು ಶುದ್ಧಿ ಕಾರ್ಯದಡಿ ವಾಪಸ್ಸು ಮಾತೃ ಧರ್ಮಕ್ಕೆ ಕರೆತಂದರು. ಅಂಬೇಡ್ಕರರಿಗಿಂತ ಮುಂಚೆಯೇ ಪತಿತ ಪಾವನ ಮಂದಿರವನ್ನು ಕಟ್ಟಿ ಅದರಲ್ಲಿ ಜಾತಿ ಭೇದವಿಲ್ಲದೆ ಎಲ್ಲ ಮತದವರಿಗೂ ಮುಕ್ತ ಅವಕಾಶ ಕಲ್ಪಿಸಿಕೊಟ್ಟರು. ಸುಭಾಷ್ ಚಂದ್ರ ಬೋಸರು ಭಾರತದಿಂದ ಜರ್ಮನಿಗೆ ಪ್ರಯಾಣ ಬೆಳೆಸಿ ಅಲ್ಲಿ ದಾಸ್ ಬಿಹಾರಿ ಬೋಸರು ಸಂಘಟಿಸಿದ್ದ ಭಾರತೀಯ ಸೈನಿಕರನ್ನು ಕೂಡಿಕೊಂಡು ಭಾರತೀಯ ರಾಷ್ಟ್ರೀಯ ಸೇನೆಯನ್ನು ತಯಾರಿಸಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವಲ್ಲಿ ಆ ಮೂಲಕ ಅವರಿಗೆ ಮರ್ಮಾಘಾತ ನೀಡಿ ಕೆಂಪುಮೂತಿಗಳ ಎದೆ ನಡುಗಿಸಿದ ಸುಭಾಷ್ ಚಂದ್ರ ಬೋಸರಿಗೆ ಈ ಕಾರ್ಯವನ್ನು ಮಾಡುವಂತೆ ಮಾರ್ಗದರ್ಶನ ಮಾಡಿದವರು ಸಾವರ್ಕರ್!
ವೀರ ಸಾವರ್ಕರ್ ಅವರ ಜೀವನದ ಬಗ್ಗೆ ಅವರ ಕಾಲಾಪಾನಿ ಶಿಕ್ಷೆಯ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸಾವರ್ಕರ್ ಅವರು ಪಟ್ಟ ನೋವನ್ನು ನಾವು ಕೇಳಿದ್ದೇವೆಯೇ.?
ಗಾಂಧಿ ಹತ್ಯೆಯಾದ ದಿನ ಸಾವರ್ಕರ್ ಮನೆಯಲ್ಲಿಯೇ ಇದ್ದರು , ಕ್ರೋಧಿತ , ಕುಡುಕರ ಗುಂಪುಗಳು ಸಾವರ್ಕರ್ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದವು ಅದರ ಪರಿಣಾಮ ಒಂದು ಕಲ್ಲು ಸಾವರ್ಕರ್ ಹಣೆಯ ಮೇಲೆ ಬಿದ್ದು ರಕ್ತ ಚಿಮ್ಮಲಾರಂಭಿಸಿತು . ! ಸ್ವಾತಂತ್ರ್ಯ ನಂತರ ಯಾರದರೊಬ್ಬ ಹೋರಾಟಗಾರ ಮತ್ತೆ ಬಂಧನಕ್ಕೊಳಗಾಗಿದ್ದರೆ ಅದು ವೀರ ಸಾವರ್ಕರ್ ಮಾತ್ರ . ! ಇದು ನಾವು ಅವರಿಗೆ ಕೊಟ್ಟ ಉಡುಗೊರೆ . ! ಸ್ವಾತಂತ್ರ್ಯಕ್ಕೋಸ್ಕರ 27 ವರ್ಷಗಳ ಕಾಲ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ ಸಾವರ್ಕರ್ ಅವರಿಗೆ ನೀಡಿದ್ದು ದೇಶದ್ರೋಹಿ ಪಟ್ಟ . ! ಇದಲ್ಲದೇ ಪಾಕಿಸ್ತಾನದಿಂದ ಒಬ್ಬ ಲಿಯಾಖತ್ ಅಲಿಖಾನ್ ಬರುತ್ತಾನೆ ಆದ್ದರಿಂದ ಕಾನೂನು ಸುವ್ಯವಸ್ಥೆ , ಕೋಮು ಘರ್ಷಣೆ ಆಗಬರದೆಂದು ನೆಹರೂ ಸರ್ಕಾರ 1950 ಏಪ್ರಿಲ್ 4 ರಂದು ಅವರನ್ನು ಬಂಧಿಸಿತು , ನಾವೆಲ್ಲರೂ ಒಂದೇ ಎಂದು ಪತಿತ ಪಾವನ ಮಂದಿರದಲ್ಲಿ ಹೇಳಿಕೊಟ್ಟ ಸಾವರ್ಕರ್ ಕೋಮುವಾದಿ , ಅಂದೂ ನಮ್ಮ ಸಮಾಜ ಮಾತನಾಡಲಿಲ್ಲ . ಕೊನೆಯಲ್ಲಿ 21 ದಿನಗಳ ಕಾಲ ಉಪವಾಸವನ್ನು ಕೈಗೊಂಡು 1966 , ಫೆ 26 ರಂದು ಸಾವರ್ಕರ್ ಅವರ ಕೆಲಸಗಳನ್ನು ಮುಗಿಸಿ ಭಾರತಾಂಬೆಯ ಮಡಿಲಲ್ಲಿ ಮಲಗಿದರು , ಪರಿಣಾಮ ಸಂಸತ್ತಿನಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿಲ್ಲ , ಮಹಾರಾಷ್ಟ್ರ ಸರ್ಕಾರದ ಒಬ್ಬನೇ ಒಬ್ಬ ಸಚಿವನೂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ . ! ಸಾವರ್ಕರ್ ಜೀವನವನ್ನು ನೆನಸಿಕೊಂಡರೆ , ಅವರ ಬಗ್ಗೆ ಓದಿದರೆ ಕಣ್ಣಂಚಿನಲ್ಲಿ ನೀರು ಬರುವುದಂತೂ ಸತ್ಯ !
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.