ನವದೆಹಲಿ: ನಿನ್ನೆ ಬಿಜೆಪಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರ ಜನ್ಮ ದಿನ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತನ್ನ ಕುಟುಂಬಕ್ಕೆ ಸುಷ್ಮಾ ಅವರು ಭೇಟಿ ನೀಡಿದ ಮತ್ತು ಸೋದರಳಿಯನ ಹೆಣ್ಣು ಮಗುವಿಗೆ ʼಸುಷ್ಮಾʼ ಎಂದು ನಾಮಕರಣ ಮಾಡಿದ ಸ್ವಾರಸ್ಯಕರ ಘನೆಯನ್ನು ಫೇಸ್ಬುಕ್ ಮೂಲಕ ಹಂಚಿಕೊಂಡಿದ್ದಾರೆ.
“25 ವರ್ಷಗಳ ಹಿಂದೆ ಬಿಜೆಪಿಯ ಸಂಘಟಕನಾಗಿ ನಾನು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸುಷ್ಮಾ ಸ್ವರಾಜ್ ಗುಜರಾತಿಗೆ ಭೇಟಿ ನೀಡಿದ್ದರು. ಆ ವೇಳೆ ನನ್ನ ಊರು ವಡ್ನಾಗರ್ಗೂ ಆಗಮಿಸಿ ನನ್ನ ತಾಯಿಯನ್ನು ಅವರು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನನ್ನ ಸೋದರಳಿಯನಿಗೆ ಹೆಣ್ಣು ಮಗು ಜನಿಸಿತ್ತು. ಮಗುವಿನ ಜಾತಕ ನೋಡಿ ಜ್ಯೋತಿಷಿ ಹೆಸರನ್ನೂ ಸೂಚಿಸಿದ್ದರು. ಕುಟುಂಬದ ಎಲ್ಲರೂ ಆ ಹೆಸರನ್ನು ಒಪ್ಪಿಕೊಂಡಿದ್ದರು. ಆದರೆ ಸುಷ್ಮಾ ಅವರನ್ನು ಭೇಟಿಯಾದ ನಂತರ ನನ್ನ ತಾಯಿ ಮಗುವಿಗೆ ಸುಷ್ಮಾ ಹೆಸರೇ ಇಡಬೇಕೆಂದು ಹೇಳಿದರು. ನನ್ನ ತಾಯಿ ಹೆಚ್ಚು ವಿದ್ಯಾವಂತರಲ್ಲ ಆದರೆ ಅವರು ಆಲೋಚನೆಗಳಿಂದ ತುಂಬಾನೇ ಆಧುನಿಕರು. ಆ ಸಮಯದಲ್ಲಿ ಅವರು ಎಲ್ಲರಿಗೂ ತನ್ನ ನಿರ್ಧಾರವನ್ನು ತಿಳಿಸಿದ ರೀತಿ ನನಗೆ ಇಂದಿಗೂ ನೆನಪಿದೆ” ಎಂದು ಮೋದಿ ತಮ್ಮ ಕುಟುಂಬದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಬಿಜೆಪಿಯ ಅತ್ಯಂತ ಪ್ರೀತಿಪಾತ್ರ ನಾಯಕಿಯರಲ್ಲಿ ಒಬ್ಬರಾಗಿದ್ದ ಸುಷ್ಮಾ ಸ್ವರಾಜ್ ಅವರು 67 ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.