ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಗಾರ್ಡನ್ಸ್ ಇಂದಿನಿಂದ ಸಾರ್ವಜನಿಕರ ಭೇಟಿಗೆ ತೆರೆದಿರುತ್ತದೆ. ಜನರು ಸೋಮವಾರ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಉದ್ಯಾನಕ್ಕೆ ಭೇಟಿ ನೀಡಬಹುದು ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.
ಮೊಘಲ್ ಗಾರ್ಡನ್ಸ್ ಮಾರ್ಚ್ 16 ರವರೆಗೆ ತೆರೆದಿರುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗುರುವಾರ ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವಕ್ಕೆ ಚಾಲನೆ ನೀಡಿದರು.
ಮುಂಗಡ ಆನ್ಲೈನ್ ಬುಕಿಂಗ್ ಮೂಲಕ ಮಾತ್ರ ಸಂದರ್ಶಕರಿಗೆ ಉದ್ಯಾನವನ್ನು ನೋಡಲು ಅನುಮತಿಸಲಾಗುತ್ತದೆ. www.rashtrapatisachivalaya.gov.in ನಲ್ಲಿ ಬುಕ್ಕಿಂಗ್ ಮಾಡಬಹುದಾಗಿದೆ. ಪ್ರತಿ ಸ್ಲಾಟ್ನಲ್ಲಿ ಗರಿಷ್ಠ ನೂರು ಜನರಿಗೆ ಅವಕಾಶವಿದೆ. ಪ್ರವಾಸದ ಸಮಯದಲ್ಲಿ, ಸಂದರ್ಶಕರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮುಂತಾದ ಕೋವಿಡ್ ಪ್ರೋಟೋಕಾಲ್ಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಇಲ್ಲಿ ಸ್ಪಿರಿಚುವಲ್ ಗಾರ್ಡನ್, ಹರ್ಬಲ್ ಗಾರ್ಡನ್, ಬೋನ್ಸಾಯ್ ಗಾರ್ಡನ್, ಮ್ಯೂಸಿಕಲ್ ಗಾರ್ಡನ್ ಗಳನ್ನು ಕೂಡ ವೀಕ್ಷಿಸಬಹುದಾಗಿದೆ. ಎಂಟ್ರಿ ಹಾಗೂ ಎಕ್ಸಿಟ್ ಎರಡೂ 35ನೇ ನಂಬರ್ನ ಪ್ರವೇಶದ್ವಾರದಲ್ಲಿ ಇರಲಿದೆ, ಬರುವವರು ಮೊಬೈಲ್ ತರಬಹುದಾಗಿದೆ. ನೀರಿನ ಬಾಟಲಿ, ಬ್ರೀಫ್ಕೇಸ್, ಬಾಕ್ಸ್ಗಳು, ಛತ್ರಿ, ಕ್ಯಾಮರಾಗಳು, ರೇಡಿಯೋಗಳು, ಕೈಚೀಲಗಳನ್ನು ತರುವಂತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.