ನವದೆಹಲಿ: ಸಾಹಿತ್ಯ ಅಕಾಡೆಮಿ 20 ಭಾಷೆಗಳಲ್ಲಿ ತನ್ನ ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಏಳು ಕವನಗಳು, ಎರಡು ಕಾದಂಬರಿಗಳು, ಐದು ಸಣ್ಣ ಕಥೆಗಳು, ಎರಡು ನಾಟಕಗಳು, ಒಂದು ಜೀವನಚರಿತ್ರೆ, ಒಂದು ಆತ್ಮಚರಿತ್ರೆ, ಒಂದು ವಿಮರ್ಶೆ ಮತ್ತು ಒಂದು ಮಹಾಕಾವ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2021 ಗೆದ್ದಿವೆ.
ಸಾಹಿತ್ಯ ಅಕಾಡೆಮಿ ಪ್ರಶಸ್ತಿ 2021 ಅನ್ನು 20 ಭಾರತೀಯ ಭಾಷೆಗಳಲ್ಲಿ ನೀಡಲಾಗಿದೆ. ಅನುರಾಧಾ ಶರ್ಮಾ ಪೂಜಾರಿ (ಅಸ್ಸಾಮಿ), ಬ್ರಾತ್ಯ ಬಸು (ಬಂಗಾಳಿ), ಮೌದೈ ಗಹೈ (ಬೋಡೋ), ರಾಜ್ ರಾಹಿ (ಡೋಗ್ರಿ), ದಯಾ ಪ್ರಕಾಶ್ ಸಿನ್ಹಾ (ಹಿಂದಿ), ಡಿಎಸ್ ನಾಗಭೂಷಣ (ಕನ್ನಡ), ವಾಲಿ ಮೊಹಮ್ಮದ್ ಅಸೀರ್ ಕಷ್ಟವಾರಿ (ಕಾಶ್ಮೀರಿ), ಸಂಜೀವ್ ವೆರೆಂಕರ್ (ಕೊಂಕಣಿ), ಜಾರ್ಜ್ ಒನಕ್ಕೂರ್ (ಮಲಯಾಳಂ), ಕಿರಣ್ ಗುರವ್ (ಮರಾಠಿ), ಛಬಿಲಾಲ್ ಉಪಾಧ್ಯಾಯ (ನೇಪಾಳಿ), ಹೃಷಿಕೇಶ್ ಮಲ್ಲಿಕ್ (ಒಡಿಯಾ), ಖಲೀದ್ ಹುಸೇನ್ (ಪಂಜಾಬಿ), ನಿರ್ಮೋಹಿ (ರಾಜಸ್ಥಾನಿ), ವಿಂದೇಶ್ವರಿಪ್ರಸಾದ್ ಮಿಶ್ರ “ವಿನಯ್” (ಸಂಸ್ಕೃತ), ನಿರಂಜನ್ ಹಂಸದಾ (ಸಂತಲಿ), ಅರ್ಜುನ್ ಚಾವ್ಲಾ (ಸಿಂಧಿ), ಅಂಬೈ (ತಮಿಳು) ಮತ್ತು ಗೋರಟಿ ವೆಂಕಣ್ಣ (ತೆಲುಗು) ಪ್ರಶಸ್ತಿ ಪುರಸ್ಕೃತರು.
ಗುಜರಾತಿ, ಮೈಥಿಲಿ, ಮಣಿಪುರಿ ಮತ್ತು ಉರ್ದು ಭಾಷೆಗಳಲ್ಲಿ ಪ್ರಶಸ್ತಿಗಳನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಅಕಾಡಮಿ ತಿಳಿಸಿದೆ.
ಅಕಾಡೆಮಿ ಯುವ ಪುರಸ್ಕಾರ್ 2021 ಮತ್ತು ಬಾಲ ಸಾಹಿತ್ಯಾ ಪುರಸ್ಕಾರ್ ಅನ್ನು ಕೂಡ ಘೋಷಣೆ ಮಾಡಲಾಗಿದೆ.
20 ಭಾರತೀಯ ಭಾಷೆಗಳಲ್ಲಿ ಪ್ರತಿಷ್ಠಿತ ತೀರ್ಪುಗಾರ ಸದಸ್ಯರು ಶಿಫಾರಸು ಮಾಡಿದ ಪ್ರಶಸ್ತಿಗಳನ್ನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ ಚಂದ್ರಶೇಖರ ಕಂಬಾರ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯು ಅನುಮೋದಿಸಿತು.
Congratulations to all the esteemed writers who have been awarded the prestigious Sahitya Akademi awards for the year 2021
The honor has yet again recognised the most outstanding books of literary merit published in the Indian languages- Recognizing & promoting Indian Literature pic.twitter.com/lIYdfdNJ8q
— G Kishan Reddy (@kishanreddybjp) December 30, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.