ನವದೆಹಲಿ: ಭಾರತೀಯ ನೌಕಾಪಡೆಯು P15B ವರ್ಗದ ಎರಡನೇ ಸ್ವದೇಶಿ ಸ್ಟೆಲ್ತ್ ಡೆಸ್ಟ್ರಾಯರ್ ಮೊರ್ಮುಗೋವನ್ನು ನಿನ್ನೆ ಮೊದಲ ಬಾರಿಗೆ ಸಮುದ್ರ ಪ್ರಯೋಗಗಳಿಗೆ ಒಳಪಡಿಸಿದೆ.
ಮಝಗಾಂವ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ (MDSL) ನಿರ್ಮಿಸಿದ ಈ ಹಡಗಿಗೆ ಗೋವಾದ ಬಂದರು ಪಟ್ಟಣದ ಹೆಸರನ್ನು ಇಡಲಾಗಿದೆ. ದಿವಂಗತ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿದ್ದಾಗ 2016ರ ಸೆಪ್ಟೆಂಬರ್ನಲ್ಲಿ ಮೊರ್ಮುಗೋವನ್ನು ಅನಾವರಣಗೊಳಿಸಲಾಯಿತು.
ಭಾರತೀಯ ನೌಕಾಪಡೆಯು 2022 ರ ಮಧ್ಯದಲ್ಲಿ ಈ ಸ್ಟೆಲ್ತ್ ಡೆಸ್ಟ್ರಾಯರ್ಯನ್ನು ನಿಯೋಜಿಸಲು ಯೋಜಿಸಿದೆ, ಅದನ್ನು INS ಮೊರ್ಮುಗೋ ಎಂದು ಕರೆಯಲಾಗುತ್ತದೆ. ಮೊರ್ಮುಗೋ ಭಾರತೀಯ ನೌಕಾಪಡೆಯ ಯುದ್ಧ ಸಾಮರ್ಥ್ಯಗಳಿಗೆ ಗಮನಾರ್ಹವಾದ ಬಲ ತುಂಬಲಿದೆ.
P15B ಒಪ್ಪಂದದ ಮೊದಲನೆಯ INS ವಿಶಾಖಪಟ್ಟಣಂ ಅನ್ನು ಇತ್ತೀಚೆಗೆ ನಿಯೋಜಿಸಿದ ಒಂದು ತಿಂಗಳ ನಂತರ ಸಮುದ್ರ ಮೊರ್ಮುಗೋ ಪ್ರಯೋಗಗಳು ನಡೆದಿವೆ.
ನಾಲ್ಕನೇ P75 ಜಲಾಂತರ್ಗಾಮಿ INS ವೇಲಾವನ್ನು ನವೆಂಬರ್ನಲ್ಲಿ ನಿಯೋಜಿಸಲಾಗಿದೆ ಮತ್ತು ಮೊರ್ಮುಗೋದ ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸುವುದು MDSL ನ ಅತ್ಯಾಧುನಿಕ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.