
ಸಹರಾನ್ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರಾವಧಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಆದಿತ್ಯನಾಥ್ ಅವರು ಉತ್ತರ ಪ್ರದೇಶವನ್ನು ಭ್ರಷ್ಟಾಚಾರದ ಹಾದಿಯಿಂದ ಅಭಿವೃದ್ಧಿಯ ಪಥಕ್ಕೆ ತಂದಿದ್ದಾರೆ ಎಂದು ಹೇಳಿದರು.
ಸಹರಾನ್ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾ, “ಈ ಪವಿತ್ರ ಮತ್ತು ಐತಿಹಾಸಿಕ ಭೂಮಿಯಲ್ಲಿ ಮಾತೆ ಶಕುಂಭಾರಿ ದೇವಿ ಹೆಸರಿನಲ್ಲಿ ವಿಶ್ವವಿದ್ಯಾನಿಲಯಕ್ಕೆ ಶಂಕುಸ್ಥಾಪನೆ ಮಾಡಲು ಯೋಗಿ ನನ್ನನ್ನು ಆಹ್ವಾನಿಸಿದ್ದು ನನಗೆ ಗೌರವ ತಂದಿದೆ. ನಾನು 2017 ರಲ್ಲಿ ಸಹರಾನ್ಪುರಕ್ಕೆ ಬಂದಾಗ ಇಲ್ಲಿನ ಜನರು ಒಳ್ಳೆಯ ಬದಲಾವಣೆ ತರುತ್ತೇವೆ ಎಂದು ಹೇಳುತ್ತಿದ್ದರು. ಪಶ್ಚಿಮ ಉತ್ತರ ಪ್ರದೇಶವನ್ನು ಗೂಂಡಾಗಳು ಮತ್ತು ಮಾಫಿಯಾಗಳ ಆಳ್ವಿಕೆಯಿಂದ ಮುಕ್ತಗೊಳಿಸಿ ಆ ಪ್ರದೇಶದ ಗೌರವವನ್ನು ಮರುಸ್ಥಾಪಿಸಿದಕ್ಕಾಗಿ ನಾನು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
ಈ ಹಿಂದೆ ದೆಹಲಿಯಿಂದ ಸಹರನ್ಪುರಕ್ಕೆ ಬರಲು 8 ಗಂಟೆ ತೆಗೆದುಕೊಳ್ಳುತ್ತಿತ್ತು, ಈಗ ಕೇವಲ 3 ಗಂಟೆ ತೆಗೆದುಕೊಳ್ಳುತ್ತದೆ, ಉತ್ತಮ ರಸ್ತೆಗಳಿಂದ ದೂರ ಕಡಿಮೆಯಾಗಿದೆ, ರಸ್ತೆಯಿಂದ ಅಂತರ ಕಡಿಮೆಯಾಗಿದೆ ಮಾತ್ರವಲ್ಲ, ಪ್ರಧಾನಿ ಮೋದಿಯವರಿಂದಾಗಿ ಹೃದಯದ ಅಂತರವೂ ಕಡಿಮೆಯಾಗಿದೆ ಎಂದಿದ್ದಾರೆ.
“ಹಿಂದೆ, ಉತ್ತರ ಪ್ರದೇಶದಲ್ಲಿ, ಸಕ್ಕರೆ ಕಾರ್ಖಾನೆಗಳನ್ನು ಮುಚ್ಚಿ ಅವುಗಳನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ದೊಡ್ಡ ಪಿತೂರಿ ನಡೆದಿತ್ತು, ಈಗ ಅದು ಪಶ್ಚಿಮ ಯುಪಿ ಆಗಿರಲಿ ಅಥವಾ ಪೂರ್ವ ಯುಪಿಯಲ್ಲಿ ಬಿಜೆಪಿಯ ಯೋಗಿ ಸರ್ಕಾರ ರಚನೆಯಾದ ನಂತರ ಒಂದೇ ಒಂದು ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲಾಗಿಲ್ಲ, ಮುಚ್ಚಲಾಗಿಲ್ಲ” ಎಂದಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿ ಅವರು ಪ್ರಪಂಚದಾದ್ಯಂತ ಭಾರತಕ್ಕೆ ಗೌರವವನ್ನು ತರುವ ಕೆಲಸವನ್ನು ಮಾಡಿದ್ದಾರೆ, ಯೋಗಿ ಅವರು ಉತ್ತರ ಪ್ರದೇಶವನ್ನು ಭ್ರಷ್ಟಾಚಾರದ ಹಾದಿಯಿಂದ ಹೊರತರುವ ಮತ್ತು ಅಭಿವೃದ್ಧಿಯ ಪಥದತ್ತ ತರುವ ಕೆಲಸವನ್ನು ಮಾಡಿದ್ದಾರೆ” ಎಂದು ಶಾ ಹೇಳಿದ್ದಾರೆ.
“ಒಂದು ಕಾಲದಲ್ಲಿ ಯುಪಿಯಲ್ಲಿ ಗಲಭೆಗಳು ನಡೆಯುತ್ತಿದ್ದವು, ಇಲ್ಲಿ ಭದ್ರತೆ ಇಲ್ಲದ ಕಾರಣ ನಮ್ಮ ಹೆಣ್ಣುಮಕ್ಕಳನ್ನೂ ಓದಲು ಬೇರೆ ರಾಜ್ಯಗಳಿಗೆ ಕಳುಹಿಸಬೇಕಾಗುತ್ತಿತ್ತು. ಇಂದು ಪಶ್ಚಿಮ ಯುಪಿಯಲ್ಲಿ ಯಾವುದೇ ಮಗಳು ಅಧ್ಯಯನಕ್ಕಾಗಿ ಹೊರಗೆ ಹೋಗಬೇಕಾಗಿಲ್ಲ. ಯಾರೂ ಅವರೊಂದಿಗೆ ಅನುಚಿತವಾಗಿ ವರ್ತಿಸಲು ಧೈರ್ಯ ಮಾಡುತ್ತಿಲ್ಲ” ಎಂದು ಶಾ ಹೇಳಿದರು.
ಶಾ ಗುರುವಾರ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಮಾತೆ ಶಕುಂಭರಿ ವಿಶ್ವವಿದ್ಯಾಲಯದ ಶಂಕುಸ್ಥಾಪನೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


