
ವಾರಣಾಸಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 13 ರಂದು ವಾರಣಾಸಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನದ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದಾರೆ.
ಮಹಾತ್ಮ ಗಾಂಧೀಜಿಯವರ ಕನಸಿನ ಮತ್ತು ಪ್ರಧಾನಿ ಮೋದಿಯ ದೂರದೃಷ್ಟಿಯ ಈ ಕಾರಿಡಾರ್ ಪವಿತ್ರ ಗಂಗಾ ನದಿ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನವನ್ನು ಸಂಪರ್ಕಿಸುತ್ತದೆ.
ಭಕ್ತರು, ಪ್ರವಾಸಿಗರು ಮತ್ತು ಸಂದರ್ಶಕರು ಇನ್ನು ಮುಂದೆ ನದಿಯ ಮುಂಭಾಗದಿಂದ ಭವ್ಯವಾದ ದೇವಾಲಯದ ಸಂಕೀರ್ಣವನ್ನು ದೋಣಿ ಮೂಲಕ ತಲುಪಬಹುದು, ದೇಗುಲಕ್ಕೆ ಘಾಟ್ಗಳಿಂದ ಕಾರಿಡಾರ್ ಮೂಲಕ ಪ್ರವೇಶಿಸಬಹುದು. ಈ ಯೋಜನೆಯು ದೇವಸ್ಥಾನವನ್ನು ಗಂಗಾನದಿಯ ಘಾಟ್ಗಳೊಂದಿಗೆ ಸಂಪರ್ಕಿಸುತ್ತದೆ, ಸುಮಾರು 320 ಮೀಟರ್ ಉದ್ದ ಮತ್ತು 20 ಮೀಟರ್ ಅಗಲದ ಸುಸಜ್ಜಿತ ಕಾಲುದಾರಿಯನ್ನು ಇದು ಹೊಂದಿದೆ.
ಇದಲ್ಲದೆ, ಕಾರಿಡಾರ್ ಉದ್ದಕ್ಕೂ ಕಟ್ಟಡಗಳ ಗೋಡೆಗಳ ಮೇಲೆ ಶ್ಲೋಕಗಳು ಮತ್ತು ವೈದಿಕ ಸ್ತೋತ್ರಗಳನ್ನು ಕೆತ್ತಲಾಗಿದೆ.
ಕಾಶಿ ವಿಶ್ವನಾಥ್ ಕಾರಿಡಾರ್ಗೆ ಮಾರ್ಚ್ 2019 ರಲ್ಲಿ ಪಿಎಂ ಮೋದಿ ಅವರು ಶಂಕುಸ್ಥಾಪನೆ ಮಾಡಿದ್ದರು, ಇದು ಸುಮಾರು 1,000 ಕೋಟಿ ರೂಪಾಯಿ ಯೋಜನೆ ಎಂದು ಅಂದಾಜಿಸಲಾಗಿದೆ.
5.5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಕಾರಿಡಾರ್, ವಸ್ತುಸಂಗ್ರಹಾಲಯ, ಗ್ರಂಥಾಲಯ, ಯಾತ್ರಾರ್ಥಿಗಳಿಗೆ ವಸತಿ ಕೇಂದ್ರ ಮತ್ತು ಮೋಕ್ಷ ಗೃಹ ಸೌಲಭ್ಯಗಳನ್ನು ಸಹ ಹೊಂದಿದೆ.
ಕಾರಿಡಾರ್ ಉದ್ದಕ್ಕೂ ವಿಶೇಷ ಸ್ಕೈ ಬೀಮ್ ಲೈಟ್ ವ್ಯವಸ್ಥೆಯನ್ನು ಸಹ ಅಳವಡಿಸಲಾಗಿದೆ.
ವರದಿಯ ಪ್ರಕಾರ, ಯೋಜನೆಗಾಗಿ ಜಾಗವನ್ನು ಸೃಷಿಸಲು 300 ಕ್ಕೂ ಹೆಚ್ಚು ಕಟ್ಟಡಗಳನ್ನು ಖರೀದಿಸಿ ಕೆಡವಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


