
ಇಂದೋರ್: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (IRCTC) ಡಿಸೆಂಬರ್ 25 ರಂದು ಗುಜರಾತ್ನಿಂದ ಸಂಚರಿಸಿ ಮಧ್ಯಪ್ರದೇಶ ಮೂಲಕ ಅಯೋಧ್ಯೆಯನ್ನು ತಲುಪುವ ‘ರಾಮ್ಪಥ್ ಯಾತ್ರಾ’ ರೈಲನ್ನು ಪ್ರಾರಂಭಿಸಲಿದೆ ಎಂದು IRCTC ಯ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.
ಮಂಗಳವಾರ ಇಂದೋರ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, 640 ಆಸನಗಳ ರೈಲು ಗುಜರಾತ್ನ ಸಬರಮತಿ ನಿಲ್ದಾಣದಿಂದ ಹೊರಟು ಮರುದಿನ ರತ್ಲಂ, ಉಜ್ಜಯಿನಿ ಮೂಲಕ ಅಯೋಧ್ಯೆಗೆ ತಲುಪಲಿದೆ ಎಂದಿದ್ದಾರೆ.
ಅಯೋಧ್ಯೆಗೆ ಪ್ರಯಾಣದ ಬಗ್ಗೆ ವಿವರಿಸಿದ ಅವರು, ಡಿಸೆಂಬರ್ 27 ರಿಂದ ನಂದಿಗ್ರಾಮ್, ವಾರಣಾಸಿ, ಪ್ರಯಾಗರಾಜ್ ಮತ್ತು ಚಿತ್ರಕೂಟಕ್ಕೆ ಭಕ್ತರನ್ನು ರಸ್ತೆ ಮೂಲಕ ಕರೆದೊಯ್ಯಲಾಗುತ್ತದೆ ಎಂದು ಹೇಳಿದರು.
“ಪ್ರಯಾಣವು ಏಳು ರಾತ್ರಿಗಳು ಮತ್ತು ಎಂಟು ಹಗಲುಗಳನ್ನು ಹೊಂದಿದೆ, ಇದರಲ್ಲಿ 320 ಆಸನಗಳು 3AC ಮತ್ತು 320 ಆಸನಗಳು ಸ್ಲೀಪರ್ ಕೋಚ್ ಆಗಿರುತ್ತದೆ. IRCTC ಆಹಾರ, ಭಕ್ತರ ವಸತಿ ಇತ್ಯಾದಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತದೆ. ಇದಕ್ಕಾಗಿ 3AC ಗೆ 12,600 ರೂ. ಮತ್ತು 7,560 ರೂ.ತೆಗೆದುಕೊಳ್ಳಲಾಗುತ್ತದೆ. ಆನ್ಲೈನ್ ಬುಕಿಂಗ್ ಮೂಲಕ ಸ್ಲೀಪರ್ ಕೋಚ್ಗಳಿಗೆ ಶುಲ್ಕ ವಿಧಿಸಲಾಗುತ್ತದೆ” ಎಂದು ಅವರು ಹೇಳಿದ್ದಾರೆ.
ಇದರಲ್ಲಿ ಪ್ರತ್ಯೇಕ ವಾರ್ಡ್ಗಳು ಸೇರಿದಂತೆ ಅಗತ್ಯ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದಿದ್ದಾರೆ.
“ಇದು ಈ ವರ್ಷದ ಮೂರನೇ ‘ರಾಮಪಥ್ ಯಾತ್ರಾ’ ರೈಲು. ಮೊದಲ ರೈಲನ್ನು ಇಂದೋರ್ನಿಂದ ಫೆಬ್ರವರಿ 2021 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಎರಡನೆಯದು ಕೆಲವು ದಿನಗಳ ಹಿಂದೆ ಪುಣೆಯಿಂದ ಸಂಚಾರ ಆರಂಭಿಸಿತ್ತು. ಇದು ಡಿಸೆಂಬರ್ 25 ರಿಂದ ಪ್ರಾರಂಭವಾಗುವ ಮೂರನೇ ರೈಲು. ಹಿಂದಿನ ಎರಡಕ್ಕೆ ಭಕ್ತರಿಂದ ಉತ್ತಮ ಸ್ಪಂದನೆ ದೊರೆತಿದೆ” ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


