ನವದೆಹಲಿ: ಡಿಸೆಂಬರ್ 1 ರಂದು ರಾಜಸ್ಥಾನದ ಜೈಸಲ್ಮೇರ್ ಗಡಿ ಪ್ರದೇಶದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ತನ್ನ ಸಂಸ್ಥಾಪನಾ ದಿನವನ್ನು ಆಚರಿಸಲಿದೆ. ಇದೇ ಮೊದಲ ಬಾರಿಗೆ ಅದು ಗಡಿ ಪ್ರದೇಶದಲ್ಲಿ ಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ.
ಬಿಎಸ್ಎಫ್ 57 ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತರ ಹಿರಿಯ ಬಿಎಸ್ಎಫ್ ಅಧಿಕಾರಿಗಳೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಗೃಹ ಸಚಿವಾಲಯದಿಂದ ಅನುಮತಿ ಪಡೆದ ನಂತರ ಮೊದಲ ಬಾರಿಗೆ ಗಡಿ ಪ್ರದೇಶದಲ್ಲಿ ರೈಸಿಂಗ್ ಡೇ ಆಚರಣೆಗಳನ್ನು ನಡೆಸಲಾಗುವುದು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
“ಕಾರ್ಯಕ್ರಮ ಜೈಸಲ್ಮೇರ್ನ ಶಹೀದ್ ಪೂನಂ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಿಎಸ್ಎಫ್ನ ರಾಜಸ್ಥಾನ ಫ್ರಾಂಟಿಯರ್ನ ಹಿರಿಯ ಅಧಿಕಾರಿಗಳಿಗೆ ಈ ನಿರ್ಧಾರದ ಬಗ್ಗೆ ತಿಳಿಸಲಾಗಿದೆ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಿದ್ಧತೆಗಳನ್ನು ನೋಡಿಕೊಳ್ಳಲು ಸೂಚಿಸಲಾಗಿದೆ” ಎಂದು ಅಧಿಕಾರಿ ಹೇಳಿದ್ದಾರೆ.
ಪ್ರತಿ ವರ್ಷ ದೆಹಲಿಯಲ್ಲಿ ರೈಸಿಂಗ್ ಡೇ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ಡಿಸೆಂಬರ್ 1, 1965 ರಂದು ಸ್ಥಾಪಿತವಾದ ಬಿಎಸ್ಎಫ್, ಶಾಂತಿಕಾಲದ ಸಮಯದಲ್ಲಿ ಭಾರತದ ಭೂ ಗಡಿಯನ್ನು ಕಾಪಾಡುವ ಮತ್ತು ಅಂತರಾಷ್ಟ್ರೀಯ ಅಪರಾಧಗಳನ್ನು ತಡೆಗಟ್ಟುವ ಅರೆಸೈನಿಕ ಪಡೆಯಾಗಿದೆ. ಇದು ಗೃಹ ವ್ಯವಹಾರಗಳ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿದೆ. ಇದು ಪ್ರಸ್ತುತ ವಿಶ್ವದ ಅತಿದೊಡ್ಡ ಗಡಿ ಕಾವಲು ಪಡೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.