ಲಕ್ನೋ: ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇ ಉದ್ದಕ್ಕೂ 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಫಿಲ್ಮ್ ಸಿಟಿಯನ್ನು ಅಭಿವೃದ್ಧಿಪಡಿಸಲು ಯುಪಿ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬಿಡ್ ತೆರೆಯಲಾಗಿದೆ ಮತ್ತು ಪೂರ್ವ ಬಿಡ್ ಸಮಾವೇಶ ಡಿಸೆಂಬರ್ 8 ರಂದು ನಿಗದಿಪಡಿಸಲಾಗಿದೆ.
10,000 ಕೋಟಿ ರೂಪಾಯಿ ವೆಚ್ಚದ ಫಿಲ್ಮ್ ಸಿಟಿ ಅಭಿವೃದ್ಧಿಗೆ ನವೆಂಬರ್ 23 ರಂದು ಬಿಡ್ ತೆರೆಯಲಾಗುವುದು, ಡಿಸೆಂಬರ್ 8 ರಂದು ಪೂರ್ವಭಾವಿ ಬಿಡ್ ಮಾಡಲಾಗುತ್ತದೆ. ಇದನ್ನು 1,000 ಎಕರೆ ಭೂಮಿಯಲ್ಲಿ ನಿರ್ಮಿಸಲಾಗುವುದು, ಈ ಪೈಕಿ 740 ಎಕರೆ ಪ್ರದೇಶದಲ್ಲಿ ಚಿತ್ರೀಕರಣ ಚಟುವಟಿಕೆಗಳು ಮತ್ತು 40 ಎಕರೆಗಳಲ್ಲಿ ಸಿನಿಮಾ ಸಂಸ್ಥೆ ತಲೆ ಎತ್ತಲಿದೆ” ಎಂದು ಯಮುನಾ ಎಕ್ಸ್ಪ್ರೆಸ್ವೇ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಅಥಾರಿಟಿ (YEIDA) ಸಿಇಒ ಅರುಣ್ ವೀರ್ ಸಿಂಗ್ ಅವರು ತಿಳಿಸಿದ್ದಾರೆ.
ಯೋಜನಾ ವರದಿ ಪ್ರಕಾರ, ಇಲ್ಲಿ 2024 ರಲ್ಲಿ ಚಲನಚಿತ್ರಗಳ ನಿರ್ಮಾಣ ಪ್ರಾರಂಭವಾಗಲಿದೆ. 120 ಎಕರೆಗಳಲ್ಲಿ ಅಮ್ಯೂಸ್ಮೆಂಟ್ ಪಾರ್ಕ್, 40 ಎಕರೆಗಳಲ್ಲಿ ವಾಣಿಜ್ಯ ಅಭಿವೃದ್ಧಿ, ಚಿಲ್ಲರೆ ವ್ಯಾಪಾರಕ್ಕಾಗಿ 34 ಎಕರೆ, ಪಂಚತಾರಾ ಹೋಟೆಲ್ಗಳಿಗೆ 21 ಎಕರೆ ಮತ್ತು ವಸತಿ ಉದ್ದೇಶಗಳಿಗಾಗಿ ಮತ್ತು ವಿಶ್ವ ದರ್ಜೆಯ ಚಲನಚಿತ್ರ ಸಂಸ್ಥೆಗಳಿಗೆ ತಲಾ 40 ಎಕರೆಗಳನ್ನು ಮೀಸಲಿಡಲಾಗುತ್ತದೆ.
ಸೆಪ್ಟೆಂಬರ್ 2020 ರಲ್ಲಿ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಗೌತಮ್ ಬುದ್ಧ ನಗರದಲ್ಲಿ ರಾಷ್ಟ್ರದ ಅತಿದೊಡ್ಡ ಚಲನಚಿತ್ರ ನಗರವನ್ನು ಸ್ಥಾಪಿಸುವುದಾಗಿ ಘೋಷಿಸಿದರು. ನಂತರ ಒಂದು ವಾರದೊಳಗೆ, ಜೆವಾರ್ನಲ್ಲಿ ಮುಂಬರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ ಆರು ಕಿಮೀ ದೂರದಲ್ಲಿರುವ ಸೆಕ್ಟರ್ -21 ರಲ್ಲಿ ಉದ್ದೇಶಿತ ಚಲನಚಿತ್ರ ನಗರಕ್ಕಾಗಿ 1,000-ಎಕರೆ ಭೂಮಿಯನ್ನು YEIDA ಅಂತಿಮಗೊಳಿಸಿತು. ಅಲ್ಲದೆ, ಈ ತಾಣವು ಯಮುನಾ ಎಕ್ಸ್ಪ್ರೆಸ್ವೇಯ ಉದ್ದಕ್ಕೂ ಇದೆ ಮತ್ತು ಈಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇಯಿಂದ ಕೇವಲ 12 ಕಿಮೀ ದೂರದಲ್ಲಿದೆ, ದೆಹಲಿಯಿಂದ 70 ಕಿಮೀ ಮತ್ತು ಆಗ್ರಾದಿಂದ 150 ಕಿಮೀ ದೂರದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.