News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಆಯುಷ್ಮಾನ್ ಸಿಎಪಿಎಫ್’  ಆರೋಗ್ಯ ಕಾರ್ಡ್‌ ಬಿಡುಗಡೆ ಮಾಡಿದ ಅಮಿತ್‌ ಶಾ

ನವದೆಹಲಿ: ಗೃಹ ಸಚಿವ ಅಮಿತ್ ಶಾ ನಿನ್ನೆ ನವದೆಹಲಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ‘ಆಯುಷ್ಮಾನ್ ಸಿಎಪಿಎಫ್’  ಆರೋಗ್ಯ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು. ಆಯುಷ್ಮಾನ್ ಕಾರ್ಡ್ ಅನ್ನು ಸಿಎಪಿಎಫ್ ಸಿಬ್ಬಂದಿಗೆ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಎನ್‌ಎಸ್‌ಜಿ ಸಿಬ್ಬಂದಿಗೆ ವಿತರಿಸುವ ಸಲುವಾಗಿ ‘ಆಯುಷ್ಮಾನ್ ಸಿಎಪಿಎಫ್’ ಸ್ಕೀಮ್ ಹೆಲ್ತ್ ಕಾರ್ಡ್‌ಗಳನ್ನು ಎನ್‌ಎಸ್‌ಜಿಯ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ಡೈರೆಕ್ಟರ್ ಜನರಲ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್‌ ಶಾ, ಸಿಎಪಿಎಫ್‌ಗಳು ಯಾವುದೇ ಆತಂಕವಿಲ್ಲದಂತೆ ದೇಶದ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ ಮತ್ತು ನರೇಂದ್ರ ಮೋದಿ ಸರ್ಕಾರ ಅವರ ಕುಟುಂಬಗಳನ್ನು ನೋಡಿಕೊಳ್ಳುತ್ತಿದೆ. ಏಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಸಿಬ್ಬಂದಿ ಮತ್ತು ಅವರ ಅವಲಂಬಿತರನ್ನು ಒಳಗೊಳ್ಳಲು ‘ಆಯುಷ್ಮಾನ್ ಸಿಎಪಿಎಫ್’ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಿಎಪಿಎಫ್‌ಗಳಾದ್ಯಂತ ಆರೋಗ್ಯ ಕಾರ್ಡ್‌ಗಳ ವಿತರಣೆ ಪ್ರಕ್ರಿಯೆಯು ಧನ್ವಂತ್ರಿ ಪೂಜೆಯ ಶುಭ ಸಂದರ್ಭದಲ್ಲಿ ಪ್ರಾರಂಭವಾಗಿದೆ. ಆರೋಗ್ಯ ಕಾರ್ಡ್ ವಿತರಣೆಯನ್ನು ಎಲ್ಲಾ ಸಿಎಪಿಎಫ್­ಗಳಲ್ಲಿ ಕೈಗೊಳ್ಳಲಾಗುತ್ತದೆ ಮತ್ತು ವಿತರಿಸಲಾದ ಕಾರ್ಡ್‌ಗಳ ಸಂಖ್ಯೆಯನ್ನು ಪ್ರತಿದಿನವೂ ಗೃಹ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ವರ್ಷದ ಡಿಸೆಂಬರ್ ವೇಳೆಗೆ ಸುಮಾರು 35 ಲಕ್ಷ ಕಾರ್ಡ್‌ಗಳ ವಿತರಣೆ ಪೂರ್ಣಗೊಳ್ಳಲಿದೆ.

ಎಲ್ಲಾ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ ಮತ್ತು ಅವರ ಅವಲಂಬಿತರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲು ಗೃಹ ಸಚಿವರು ಈ ವರ್ಷದ ಜನವರಿ 23 ರಂದು ಅಸ್ಸಾಂ ರಾಜ್ಯದಲ್ಲಿ ಪ್ರಾಯೋಗಿಕ ಆಧಾರದ ಮೇಲೆ ‘ಆಯುಷ್ಮಾನ್ CAPF’ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯು ಗೃಹ ಸಚಿವಾಲಯ, ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ  ಜಂಟಿ ಉಪಕ್ರಮವಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top