ಬಂಟ್ವಾಳ : ಭಾವೈಕ್ಯತೆ,ಸಾಮರಸ್ಯಗಳನ್ನು ಉಳಿಸಿಕೊಂಡಾಗ ಮಾತ್ರ ದೇಶ ಬಲಿಷ್ಟವಾದೀತು.ಯುವಕರು ಶುದ್ಧ ಮನಸ್ಸಿನಿಂದ ಸೇವಾಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ ಇದು ಸಾಧ್ಯ ಎಂದು ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿ ಅಂತಾರಾಷ್ಟ್ರೀಯ ಸೇವಾಸಂಸ್ಥೆ ಲಯನ್ಸ್ ಕ್ಲಬ್ ಜಲ್ಲೆ ೩೧೭ರ ಪ್ರಾಂತ್ಯ ೬ರ ವತಿಯಿಂದ ಕಾವಳಮೂಡೂರು ಗ್ರಾಮದ ದತ್ತು ಸ್ವೀಕಾರ ಪ್ರಯುಕ್ತ ವಿವಿಧ ಸೌಲಭ್ಯಗಳ ಉದ್ಘಾಟನೆ ಮತ್ತು ಬೃಹತ್ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಾವಳಮೂಡೂರು ಗ್ರಾಮದ ಅಭಿವೃದ್ಧಿಯಲ್ಲಿ ಇಲ್ಲಿನ ಪಂಚಾಯತ್ ಆಡಳಿತ ಹಾಗೂ ಯುವನೇತಾರ ಬಿ.ಪದ್ಮಶೇಖರ ಜೈನ್ ಅವರ ಪರಿಶ್ರಮವನ್ನು ಅಭಿನಂದಿಸಿದ ಸಚಿರ ರೈ ಅವರು ಲಯನ್ಸ್ ಸೇವಾ ಸಂಸ್ಥೆಯಿಂದ ಗ್ರಾಮ ದತ್ತು ಸ್ವೀಕರಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡಿರುವುದು ಶ್ಲಾಘನೀಯವಾಗಿದೆ ಎಂದರು. ಲಯನ್ ಪ್ರಾಂತೀಯ ಅಧ್ಯಕ್ಷ ಗೋವರ್ಧನ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ತನಗೆ ಕಾವಳಮೂಡೂರು ಗ್ರಾಮದ ನಂಟಿರುವ ಕಾರಣ ಲಯನ್ಸ್ ಸೇವಾ ಚಟುವಟಿಕೆಗಳ ಪ್ರಯುಕ್ತ ಈ ಗ್ರಾಮವನ್ನು ವಿವಿಧ ಜನಪರ ಯೋಜನೆಗಳ ಮೂಲಕ ಸಮಗ್ರ ಅಭಿವೃದ್ಧಿಗೊಳಿಸಲು ಆಯ್ಕೆ ಮಾಡಲಾಗಿದೆ ಎಂದರು.
ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್,ಲಯನ್ ಜಿಲ್ಲಾ ಉಪಗವರ್ನರ್ ಅರುಣ್ ಶೆಟ್ಟಿ , ರಾಜ್ಯಪಾಲರ ಕೇಂದ್ರ ಪ್ರತಿನಿಧಿ ವಿನೋದ್ ರಾವ್,ಲಯನ್ಸ್ ಪದಾಧಿಕಾರಿಗಳಾದ ಕುಡ್ಪಿ ಆರವಿಂದ ಶೆಣೈ,ಕಿಶೋರ್ ರಾವ್,ಉಮೇಶ್ ಪ್ರಭು,ಗ್ರಾ.ಪಂ.ಅ.ಅಧಿಕಾರಿ ವಿವೇಕಾನಂದ,ನಿವೃತ್ತ ಪಂ.ಅ.ಅಧಿಕಾರಿ ಗಣಪತಿ ಮುಚ್ಚಿನ್ನಾಯ, ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಕಾವಳಮೂಡೂರು ಸ.ಪ್ರೌ.ಶಾಲಾ ಮುಖ್ಯ ಶಿಕ್ಷಕಿ ಭಾಗೀರಥಿ ಭಟ್,ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಪ್ರೇಮಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗ್ರಾಮದತ್ತು ಸ್ವೀಕಾರಕ್ಕೆ ಸಹಕರಿಸಿದ ಬಿ.ಪದ್ಮಶೇಖರ ಜೈನ್ ಮತ್ತು ಗಣಪತಿಮುಚ್ಚಿನ್ನಾಯ ಅವರನ್ನು ಲಯನ್ಸ್ ವತಿಯಿಂದ ಹಾಗೂ ಗ್ರಾಮದತ್ತು ಸ್ವೀಕರಿಸಿದ ಲಯನ್ಸ್ ಕ್ಲಬ್ನ ಗೋವರ್ಧನ ಶೆಟ್ಟಿ ಅವರನ್ನು ಕಾವಳಮೂಡೂರು ಗ್ರಾಮದ ವತಿಯಿಂದ ಸಮ್ಮಾನಿಸಲಾಯಿತು.ಇದಕ್ಕೂ ಮೊದಲು ಲಯನ್ಸ್ ಕ್ಲಬ್ನ ಕೊಡುಗೆಗಳಾದ ಕಾವಳಕಟ್ಟೆ ಪಂಚಾಯತ್ ಕಚೇರಿ ಮುಂಭಾಗದ ಬಸ್ ತಂಗುದಾಣ, ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ೪ ಶೌಚಾಲಯಗಳು ಹಾಗೂ ಶಾಲಾ ಮಕ್ಕಳಿಗೆ ಸಂಪರ್ಕ ಕಲ್ಪಿಸುವ ಮೋರಿಗೆ ಸ್ಲಾಬ್ ನಿರ್ಮಾಣಗಳನ್ನು ಸಚಿವರು ಉದ್ಘಾಟಿಸಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೆದ್ದಳಿಕೆ ಶಾಲಾ ಮುಖ್ಯ ಶಿಕ್ಷಕ ಕೆ.ರಮೇಶ್ ನಾಯಕ್ ರಾಯಿ ಅವರು ಸ್ವಾಗತಿಸಿದರು.ಲಯನ್ಸ್ ವಲಯಾಧ್ಯಕ್ಷ ಎ.ಜಿ.ಶರ್ಮಾ ವಂದಿಸಿದರು.ದೈಹಿಕ ಶಿಕ್ಷಕ ಜಯರಾಮ್ ಕಾರ್ಯಕ್ರಮ ನಿರೂಪಿಸಿದರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಹಯೋಗದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ವೈದ್ಯರುಗಳಾದ ಡಾ|ಜಯರಾಮಶೆಟ್ಟಿ,ಡಾ|ಹೃಷಿಕೇಶ್ ಅಮಿನ್,ಡಾ|ಮುರಳಿ ಮೋಹನ್,ಡಾ|ವಿನಾಯಕ ಕಾಮತ್ ಮತ್ತಿತರರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.