ಪ್ರಧಾನಿ ನರೇಂದ್ರ ಮೋದಿಜಿ ಅವರು ಪ್ರಧಾನಮಂತ್ರಿ ಆಗುವುದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ಅನ್ನು ದೇಶದಲ್ಲೇ ನಂ.1 ರಾಜ್ಯವನ್ನಾಗಿಸಿದರು, ಎಲ್ಲಾ ವಿಷಯದಲ್ಲೂ ಮಾದರಿಯಾಗಿಸಿದರು ಅದು ಶಿಕ್ಷಣ, ವೈದ್ಯಕೀಯ, ಪೊಲೀಸ್…..
ಅಭೂತಪೂರ್ವವಾದ ಅಭಿವೃದ್ಧಿಯನ್ನು ನೋಡಿ ಈ ಮನುಷ್ಯ ದೇಶದ ಪ್ರಧಾನಿಯಾದರೆ ಏನೆಲ್ಲ ಮಾಡಬಹುದೆಂದು 2014 ರಲ್ಲಿ ಜನರು ಬಹುಮತದಿಂದ ಬಿಜೆಪಿಯನ್ನು ಆರಿಸಿದರು. ಆಗಲೇ ಗೊತ್ತಾಗಿದ್ದು ಓರ್ವ ಪ್ರಧಾನಿ ಇಷ್ಟು ಕೆಲಸಗಳನ್ನು, ಅಭಿವೃದ್ಧಿಯನ್ನು ಮಾಡಬಹುದೆಂದು! ಪ್ರಪಂಚವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡುತ್ತಿರುವುದು ಸುಳ್ಳಲ್ಲ.!
ಮಾದರಿಗೆ ಇನ್ನೊಂದು ಹೆಸರೇ ಪ್ರಧಾನಿ ಮೋದಿಜಿ, ತಾನು ಬೇರೆಯವರಿಗೆ ಹೇಳುವ ಮೊದಲು ತಾವು ಅದನ್ನು ಅಳವಡಿಸಿಕೊಂಡು ಹೇಳುವ ಅಭ್ಯಾಸ ಪ್ರಧಾನಿ ಮೋದಿಯದ್ದು.
ಪ್ರಧಾನಿಯಾದಾಗಿನಿಂದ ಇಲ್ಲಿಯವರೆಗೂ ಮೋದಿಜಿ ಮಾದರಿ ನಡೆ….
🔷 20 ಮೇ 2014 : ಮೊದಲ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿ ಪಾರ್ಲಿಮೆಂಟ್ ಗೆ ಆಗಮಿಸುವಾಗ ನಮಸ್ಕಾರ ಮಾಡಿ ಆಗಮಿಸಿದ್ದರು, ಇದು ದೇಶದ ಇತಿಹಾಸದಲ್ಲೇ ಪ್ರಥಮವಾಗಿದೆ. ಇದರಿಂದ ಕಲಿಯುವ ಅಂಶವೇನೆಂದರೆ ಪಾರ್ಲಿಮೆಂಟ್ ಎನ್ನುವುದು ದೇಗುಲದ ರೀತಿಯಲ್ಲಿ, ನಾವೆಲ್ಲರೂ ಅದಕ್ಕೆ ತಲೆಬಾಗಬೇಕು.
🔷 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಸೈನಿಕರೊಂದಿಗೆ ಪ್ರತಿವರ್ಷ ದೀಪಾವಳಿ ಆಚರಿಸಿಕೊಂಡು ಬಂದಿದ್ದಾರೆ. ನಿಯಂತ್ರಣ ರೇಖೆಯಲ್ಲಿ ದೇಶ ಕಾಯುತ್ತಿರುವ ಸೈನಿಕರೊಂದಿಗೆ ದೀಪಾವಳಿ ಆಚರಿಸಲು 2019 ರಲ್ಲಿ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರು. 2018ರಲ್ಲಿ ಉತ್ತರಾಖಂಡ್ಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, 2017ರಲ್ಲಿ ಉತ್ತರ ಕಾಶ್ಮೀರದ ಗುರೆಜ್ ವಲಯದಲ್ಲಿನ ಸೈನಿಕರೊಂದಿಗೆ ದೀಪಾವಳಿ ಆಚರಿಸಿದ್ದರು. ಮೋದಿ ಪ್ರಧಾನಿಯಾದ ನಂತರ ಮೊದಲ ದೀಪಾವಳಿಯನ್ನು ವಿಶ್ವದ ಅತ್ಯುನ್ನತ ಯುದ್ಧಭೂಮಿ ಸಿಯಾಚಿನ್ನಲ್ಲಿ ಸೈನಿಕರೊಂದಿಗೆ ಕಳೆದಿದ್ದರು.
🔷 2014 ರ ನಂತರ VIP ಸಂಸ್ಕೃತಿಗೆ ಫುಲ್ ಸ್ಟಾಪ್ ಇಟ್ಟಿದೆ.
• ಕಾರಿನ ಮೇಲೆ ಕೆಂಪು ದೀಪ ಬಳಕೆ ಇಲ್ಲ.
• ಮಾಜಿ ಪ್ರಧಾನಿ, ಹಾಗೂ ಮಂತ್ರಿಗಳಿಗೆ ಹೆಚ್ಚು ಭದ್ರತಾ ಪಡೆಗಳ ನಿಯೋಜನೆ ಕಟ್.
• VIP ಗಳಿಗೆ ಮೊದಲ ಕೊರೊನಾ ವ್ಯಾಕ್ಸಿನ್ ಇಲ್ಲ
• ಸಂಸತ್ತಿನ ಕ್ಯಾಂಟೀನ್ ಅಲ್ಲಿ ಆಹಾರಕ್ಕೆ ಸಬ್ಸಿಡಿ ತೆರವು..
🔷 ಏಪ್ರಿಲ್ 11 2017 : ವೇಸ್ಟ್ ಪ್ಲಾಸ್ಟಿಕ್ ಅನ್ನು ಜೇಬಿಗೆ ಹಾಕಿಕೊಂಡ ಮೋದಿಜಿ.
ಲೋಕಸಭಾ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತೆರಳಿದ ಮೋದಿಜಿ, ಬುಕ್ ಅನ್ನು ಬಿಡುಗಡೆಗೊಳಿಸಿ ವೇಸ್ಟ್ ಪ್ಲಾಸ್ಟಿಕ್ ಅನ್ನು ಬಿಸಾಕದೆ ತನ್ನ ಜೇಬಿನ ಒಳಗೆ ಹಾಕಿಕೊಂಡು, ನಂತರ ಹತ್ತಿರದಲ್ಲಿದ್ದ ಡಸ್ಟ್ ಬಿನ್ಗೆ ಹಾಕಿದರು.
🔷 24 ಫೆಬ್ರವರಿ 2019 : ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ 2019ನರಲ್ಲಿ ನಡೆಸ ಕುಂಭಮೇಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರಲ್ಲದೆ, ಪೌರ ಕಾರ್ಮಿಕರ ಪಾದ ತೊಳೆದು ಪೂಜೆ ನೆರವೇರಿಸಿದರು. ಈ ಮೂಲಕ ಸ್ವಚ್ಛತೆಯಲ್ಲಿ ಮುಖ್ಯ ಪಾತ್ರ ವಹಿಸುವ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಿದರು.
🔷 ಅಕ್ಟೊಬರ್ 14 2019 : ಸಮುದ್ರ ತೀರದಲ್ಲಿ ಮೋದಿ ಪ್ಲಾಗಿಂಗ್
ಬೀಚ್ ಬಳಿ ಕಸ ಕ್ಲೀನ್ ಮಾಡಿದ ಪ್ರಧಾನಿ ಮೋದಿ| ತಮಿಳುನಾಡಿನ ಮಹಾಬಲಿಪುರಂ ಬೀಚ್ ಬಳಿ ಮೋದಿ ವಾಕಿಂಗ್, ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಮೋದಿ ಮಹತ್ವದ ಹೆಜ್ಜೆ ಸಾರಿದ್ದಾರೆ.
ಸುಮಾರು ಅರ್ಧ ಗಂಟೆ ಸಮುದ್ರ ತೀರದಲ್ಲಿ ವಾಕಿಂಗ್ ಮಾಡುತ್ತಿದ್ದ ಮೋದಿ, ಸಮುದ್ರದ ಬದಿಯಲ್ಲಿ ಬಿದ್ದಿದ್ದ ಕಸವನ್ನ ಆಯ್ದು ಬ್ಯಾಗ್ನಲ್ಲಿ ತುಂಬಿಸಿದ್ದಾರೆ. ಕಸ ಕ್ಲೀನ್ ಮಾಡೋ ಮೂಲಕ ಪ್ಲಾಸ್ಟಿಕ್ ಮುಕ್ತ ಬಗ್ಗೆ ಸಂದೇಶ ಸಾರಿದ್ದಾರೆ.
🔷 ಜುಲೈ 19 2020 : ಮುಂಗಾರು ಅಧಿವೇಶನದ ಕುರಿತು ಮುಂಗಾರು ಮಳೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಿಂತ ಪ್ರಧಾನಿ ಮೋದಿಜಿಯವರು ಸ್ವತಃ ತಾವೇ ತಮ್ಮ ಕೊಡೆ ಹಿಡಿದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮೋದಿಜಿ ಇಷ್ಟೆಲ್ಲಾ ಮಾಡಿದ್ದು ಇತರ ಬಿಜೆಪಿ ಜನಪ್ರತಿನಿಧಿಗಳು ನೋಡಿಕೊಂಡು ಸುಮ್ಮನೆ ಇರಲಿ ಎಂದಲ್ಲ. ತಾವೂ ಅನುಸರಿಸಿ ಇದರ ಮೂಲಕ ತಮ್ಮ ಬೆಂಬಲಿಗರೂ ಅನುಸರಿಸುತ್ತಾರೆ ಎಂದು. ಇದನ್ನು ತಿಳಿದುಕೊಂಡು ಎಲ್ಲಾ ಪ್ರತಿನಿಧಿಗಳು ಕಾರ್ಯನಿರ್ವಹಿಸಿದರೆ ಭಾರತ ಆದಷ್ಟು ಬೇಗ ವಿಶ್ವಗುರುವಾಗುತ್ತದೆ.
✍️ ಕಲಾನಾಥ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.