ಗುವಾಹಟಿ: ವಿಶ್ವದ ಮೊದಲ ಕುಲಾಂತರಿ (genetically modified) ರಬ್ಬರ್ ಗಿಡವನ್ನು ಮಂಗಳವಾರ ಅಸ್ಸಾಂನ ಗುವಾಹಟಿಯ ಹೊರವಲಯದಲ್ಲಿ ನೆಡಲಾಗಿದೆ.
ಇದನ್ನು ಕೇರಳ ಮೂಲದ ರಬ್ಬರ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (RRII), ರಬ್ಬರ್ ಮಂಡಳಿಯಡಿಯಲ್ಲಿನ ತನ್ನ ಜೈವಿಕ ತಂತ್ರಜ್ಞಾನ ಪ್ರಯೋಗಾಲಯದಲ್ಲಿ ದೀರ್ಘ ವರ್ಷಗಳ ಸಂಶೋಧನೆಯ ಮೂಲಕ ಅಭಿವೃದ್ಧಿಪಡಿಸಿದೆ.
ರಬ್ಬರ್ ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ರಾಘವನ್ ಅವರು ಗುವಾಹಟಿಯ ಸಮೀಪದ ಸಾರುತಾರಿಯಲ್ಲಿರುವ ಮಂಡಳಿಯ ಜಮೀನಿನಲ್ಲಿ ಈ ಸಸಿ ನೆಟ್ಟರು.
ಈ ಕುಲಾಂತರಿ ರಬ್ಬರ್ ಗಿಡ ಈಶಾನ್ಯಕ್ಕೆ ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸಲಾದ ಮೊದಲನೆಯ ಗಿಡವಾಗಿದ್ದು, ಪ್ರದೇಶದ ಹವಾಮಾನ ಪರಿಸ್ಥಿತಿಗಳಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.