ನವದೆಹಲಿ: CoWin ಪೋರ್ಟಲ್ನಲ್ಲಿ ಡೇಟಾ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಬಂದ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಳ್ಳಿ ಹಾಕಿದ್ದು, ಕೋವಿನ್ ಎಲ್ಲಾ ವ್ಯಾಕ್ಸಿನೇಷನ್ ಡೇಟಾವನ್ನು ಸುರಕ್ಷಿತ ಡಿಜಿಟಲ್ ಪರಿಸರದಲ್ಲಿ ಸಂಗ್ರಹಿಸಿಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಕೋವಿನ್ ಡೇಟಾ ಉಲ್ಲಂಘನೆಯ ವರದಿಗಳನ್ನು ನಕಲಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
ಆರೋಗ್ಯ ಸಚಿವಾಲಯದ ಕೋವಿನ್ ವ್ಯವಸ್ಥೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳತ್ತ ಗಮನ ಹರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
“ಕೋವಿನ್ ಪ್ಲಾಟ್ಫಾರ್ಮ್ ಅನ್ನು ಹ್ಯಾಕ್ ಮಾಡಲಾಗಿದೆಯೆಂದು ಕೆಲವು ಆಧಾರರಹಿತ ಮಾಧ್ಯಮ ವರದಿಗಳು ಬಂದಿವೆ. ಈ ವರದಿಗಳು ನಕಲಿಯಾಗಿದೆ. ಆದರೂ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಇಜಿವಿಎಸಿ ಈ ವಿಷಯವನ್ನು ಕಂಪ್ಯೂಟರ್ ತುರ್ತು ಪರಿಸ್ಥಿತಿಯಡಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿಕ್ರಿಯೆ ತಂಡ (ಮಿಲ್ವೈ)ದ ಮೂಲಕ ತನಿಖೆ ನಡೆಸುತ್ತಿದೆ ”ಎಂದು ಆರೋಗ್ಯ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
Reports of #CoWIN platform being hacked, prima facie appear to be fake.
Out of abundant precaution, emergency response team of @GoI_MeitY is investigating the matter.
Data speculated to have been leaked such as geo-location of beneficiaries, is not even collected on Co-WIN.
— Dr Harsh Vardhan (@drharshvardhan) June 10, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.