ಅಹಮದಾಬಾದ್: ಗುಜರಾತ್ ಸರ್ಕಾರ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ) ಮಸೂದೆ 2021 ಅನ್ನು ಜೂನ್ 15 ರಿಂದ ತೊಡಗಿದಂತೆ ಜಾರಿಗೆ ತರಲು ನಿರ್ಧರಿಸಿದೆ.
ಇದರನ್ವಯ ಮತಾಂತರ ಉದ್ದೇಶದಿಂದ ಬಲವಂತವಾಗಿ ಮದುವೆಯಾದ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ 10 ವರ್ಷಗಳ ಸಜೆ ವಿಧಿಸಲು ಅವಕಾಶ ಇದೆ.
ಈ ಮಸೂದೆಯನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದ ಗುಜರಾತ್ ಸರ್ಕಾರ ಜಾರಿಗೆ ತರಲಿದ್ದು, ಜೂನ್ 15 ರ ಬಳಿಕ ಇದು ಮಸೂದೆಯಾಗಿ ಅಧಿಕೃತವಾಗಿ ಜಾರಿಯಲ್ಲಿರಲಿದೆ ಎಂದು ಮೂಲಗಳು ತಿಳಿಸಿವೆ. ಎ. 1 ರಂದು ಲವ್ ಜಿಹಾದ್ ಅಥವಾ ಮದುವೆಯ ಮೂಲಕ ಮೋಸದ ಮತಾಂತರ ವಿರುದ್ಧ ಮಸೂದೆಗೆ ಗುಜರಾತ್ ವಿಧಾನಸಭೆ ಬಹುಮತದೊಂದಿಗೆ ಅಂಗೀಕಾರ ನೀಡಿತ್ತು.
ಇದೀಗ ಈ ಮಸೂದೆಯನ್ನು ಮತಾಂತರದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಮದುವೆಯಾಗುವ ಪ್ರವೃತ್ತಿ ತಡೆಗಟ್ಟಲು 2003 ನೇ ಇಸವಿಯ ಈ ಕಾನೂನಿಗೆ ತಿದ್ದುಪಡಿ ಮಾಡಲಾಗಿದೆ. ಇದರನ್ವಯ ಮತಾಂತರ ಉದ್ದೇಶದಿಂದ ಮದುವೆ ಪ್ರಕರಣಗಳಲ್ಲಿ ಕನಿಷ್ಟ 3 ರಿಂದ 5 ವರ್ಷ ಸಜೆ, 2 ಲಕ್ಷ ದಂಡ ವಿಧಿಸಲು ಅವಕಾಶವಿದೆ. ದಲಿತ ಮಹಿಳೆಯಾಗಿದ್ದಲ್ಲಿ ತಪ್ಪಿತಸ್ಥರಿಗೆ 4 -7 ವರ್ಷ ಸಜೆ, 3 ಲಕ್ಷ ದಂಡ ವಿಧಿಸುವ ಅವಕಾಶ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.