ನವದೆಹಲಿ: ಕೊರೋನಾವೈರಸ್ ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ ಭಾರತ ಸರ್ಕಾರ 300 ಮಿಲಿಯನ್ ಡೋಸ್ ಬಯೋಲಾಜಿಕಲ್-ಇ ಕೋವಿಡ್ ಲಸಿಕೆಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ.
ಮೂಲಗಳ ಪ್ರಕಾರ, ದೇಶೀಯ ಲಸಿಕೆ ತಯಾರಕ ಬಯೋಲಾಜಿಕಲ್-ಇ ಜೊತೆ 300 ಮಿಲಿಯನ್ ಕೋವಿಡ್ -19 ಲಸಿಕೆ ಡೋಸ್ ಅನ್ನು 15 ಬಿಲಿಯನ್ ರೂಪಾಯಿಗಳಿಗೆ (ಯುಎಸ್ಡಿ 205.62 ಮಿಲಿಯನ್) ಖರೀದಿ ಮಾಡಲು ಸರ್ಕಾರ ಸಹಿ ಹಾಕಿದೆ.
ಪ್ರಸ್ತುತ ಹಂತ -3 ಕ್ಲಿನಿಕಲ್ ಪ್ರಯೋಗಗಳಿಗೆ ಒಳಪಟ್ಟಿರುವ ಈ ಲಸಿಕೆ ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ರಾಯಿಟರ್ಸ್ ವರದಿಯ ಪ್ರಕಾರ, ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಲಿಮಿಟೆಡ್ ತನ್ನ ಕೋವಿಡ್-19 ಲಸಿಕೆಗಾಗಿ ಕೆನಡಾದ ಬಯೋಟೆಕ್ನಾಲಜಿ ಕಂಪನಿ ಪ್ರಾವಿಡೆನ್ಸ್ ಥೆರಪೂಟಿಕ್ಸ್ ಹೋಲ್ಡಿಂಗ್ಸ್ ಇಂಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
ಕೆನಡಾದ ಬಯೋಟೆಕ್ನಾಲಜಿ ಕಂಪನಿಯ ಸಹಯೋಗದೊಂದಿಗೆ ಬಯೋಲಾಜಿಕಲ್-ಇ ಅಭಿವೃದ್ಧಿಪಡಿಸಿದ ಲಸಿಕೆ ಆರ್ಬಿಡಿ ಪ್ರೋಟೀನ್ ಸಬ್- ಯುನಿಟ್ ಲಸಿಕೆಯಾಗಿದ್ದು, ಇದು ಮುಂದಿನ ಕೆಲವು ತಿಂಗಳುಗಳಲ್ಲಿ ಭಾರತೀಯ ಮಾರುಕಟ್ಟೆಯನ್ನು ತಲುಪುವ ಸಾಧ್ಯತೆಯಿದೆ.
ಬಯೋಲಾಜಿಕಲ್ ಇ ಭಾರತದಲ್ಲಿ ಲಸಿಕೆ ಬ್ರಿಡ್ಜಿಂಗ್ ಪ್ರಯೋಗವನ್ನು ನಡೆಸಲಿದೆ. ಲಸಿಕೆ ಹಂತ 1 ಮತ್ತು 2 ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತೇಜಕ ಫಲಿತಾಂಶಗಳನ್ನು ತೋರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.