ನವದೆಹಲಿ: ಭಾರತದ ಡೈರಿ ದಿಗ್ಗಜ ಸಂಸ್ಥೆಯಾದ ಅಮೂಲ್ನ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಅವರು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ನೀಡಿರುವ ಸಲಹೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಅಮೂಲ್ ಡೈರಿ ಹಾಲಿಗೆ ಬದಲಾಗಿ ಸಸ್ಯಾಹಾರಿ ಹಾಲನ್ನು ಉತ್ಪಾದಿಸಲು ಆರಂಭಿಸಬೇಕು ಎಂದು ಪೇಟಾ ಹೇಳಿತ್ತು.
ಪೇಟಾ ಶಿಫಾರಸಿಗೆ ಪ್ರತಿಕ್ರಿಯೆ ನೀಡಿರುವ ಸೋಧಿ, ಪ್ರಾಣಿಗಳ ಹಕ್ಕುಗಳ ಸಂಘಟನೆಯು 100 ಮಿಲಿಯನ್ ಭೂ ರಹಿತ ಹೈನುಗಾರರಿಗೆ ಜೀವನೋಪಾಯವನ್ನು ಒದಗಿಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.
ಟ್ವಿಟ್ ಮಾಡಿರುವ ಅವರು, “ಪೇಟಾ 100 ಮಿಲಿಯನ್ ಡೈರಿ ರೈತರಿಗೆ (70% ಭೂ ರಹಿತರು) ಜೀವನೋಪಾಯವನ್ನು ನೀಡುತ್ತದೆಯೇ? ಅವರ ಮಕ್ಕಳ ಶಾಲಾ ಶುಲ್ಕವನ್ನು ಪಾವತಿಸುತ್ತದೆಯೇ? .. ರಾಸಾಯನಿಕಗಳಿಂದ ತಯಾರಿಸಿದ ದುಬಾರಿ ಲ್ಯಾಬ್ ತಯಾರಿಸಿದ ಕಾರ್ಖಾನೆಯ ಆಹಾರ ಎಷ್ಟು ಮಂದಿಯ ಕೈಗೆ ಎಟುಕಬಹುದು? ” ಎಂದು ಪ್ರಶ್ನಿಸಿದ್ದಾರೆ.
ಸೋಯಾ ಹಾಲನ್ನು ಅತಿಯಾದ ಬೆಲೆಗಳಿಗೆ ಮಾರಾಟ ಮಾಡಲಾಗುತ್ತದೆ, ಇದು ಮಧ್ಯಮ ವರ್ಗಕ್ಕೆ ಖರೀದಿಸುವುದು ಕಷ್ಟಕರ ಎಂದಿದ್ದಾರೆ. ಅಲ್ಲದೇ ಪೇಟಾ ಎಂಎನ್ಸಿಗಳ ಪರ ಲಾಬಿ ಮಾಡುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.