ಬಂಗಾಳದ ಪವಿತ್ರ ಭೂಮಿಯು ಭಾರತದ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತೆಯ ಹೃದಯವಾಗಿದೆ. ಹಿಂದೂ ಧರ್ಮದ ಪುನರುತ್ಥಾನಕ್ಕೆ ಬಂಗಾಳದ ಕೊಡುಗೆಯನ್ನು ಇತಿಹಾಸದ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಬಂಗಾಳದ ಪವಿತ್ರ ಭೂಮಿ ಚೈತನ್ಯ ಮಹಾಪ್ರಭು, ಬಂಕಿಮ ಚಂದ್ರ ಚಟ್ಟೋಪಾಧ್ಯಾಯ, ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರಿಷಿ ಅರವಿಂದೋ, ನೇತಾಜಿ ಸುಭಾಷ್ ಚಂದ್ರ ಬೋಸ್, ಲೋಕನಾಥ ಬ್ರಹ್ಮಚಾರಿ, ಪರಮಹಂಸ ಯೋಗಾನಂದ, ರವೀಂದ್ರನಾಥ ಟಾಗೋರ್ ಮುಂತಾದ ಹಿಂದೂ ನೇತಾರರ ಜನ್ಮಸ್ಥಳ. ಆದರೆ ಇಂದು ಅಲ್ಲಿ ಹಿಂದೂಗಳು ಬದುಕುವುದು ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಇತಿಹಾಸ ಬಂಗಾಳಕ್ಕೆ ಹಳೆಯದು. ಆದರೆ ಮೇ 2ರ ಚುನಾವಣೆಯ ಫಲಿತಾಂಶದ ಬಳಿಕ ಹಿಂದುಗಳ ಮೇಲೆ ಅಲ್ಲಿ ನಡೆದ ದೌರ್ಜನ್ಯಗಳು ಮತ್ತು ದಾಳಿ ಇತಿಹಾಸದಲ್ಲಿ ನಡೆದ ಹಿಂಸೆಗಳ ನೆನಪನ್ನು ಮರೆಮಾಡುವಂತಹುದು. “1946 ಕೋಲ್ಕತ್ತಾ ಕಿಲ್ಲಿಂಗ್ಸ್” (ಜಿನ್ನಾ ಮತ್ತು ಇತರರು ನಡೆಸಿದ ಹತ್ಯಾಕಾಂಡ) ಅನ್ನು ಈ ಹಿಂಸಾಚಾರ ನೆನಪಿಸಿಕೊಡುತ್ತದೆ. ಅಕ್ಟೋಬರ್-ನವೆಂಬರ್ 1946 ನೋಖಾಲಿ ಹತ್ಯಾಕಾಂಡವನ್ನು ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಇಸ್ಲಾಮಿಗೆ ಹಿಂದೂಗಳ ಬಲವಂತದ ಮತಾಂತರ, ಲೂಟಿ ಮತ್ತು ಹಿಂದೂಗಳ ಆಸ್ತಿಯ ಮೇಲೆ ಬೆಂಕಿ ಹಚ್ಚುವಿಕೆ ಘಟನೆಗಳು ನೆನಪಿಸಿಕೊಡುತ್ತದೆ. 1947 ರಲ್ಲಿ ಭಾರತದ ವಿಭಜನೆಯ ವೇಳೆ ನಡೆದ ಹಿಂಸೆಯನ್ನೂ ಇದು ನೆನಪಿಸಿಕೊಡುತ್ತದೆ. 1947 ಆಗಸ್ಟ್ 15ರ ವೇಳೆ ಪೂರ್ವ ಬಂಗಾಳದಲ್ಲಿ ಮುಸ್ಲಿಂಲೀಗ್ ಆಡಳಿತದಲ್ಲಿತ್ತು. ಭಾರತದ ಸ್ವಾತಂತ್ರ್ಯದ ಬಳಿಕವೂ ಬಂಗಾಳದ ರಾಜಕೀಯ ಮುಸ್ಲಿಂ ಕೇಂದ್ರಿತವಾಗಿ ಉಳಿದುಕೊಂಡಿದೆ, ಇದಕ್ಕೆ ಮುಸ್ಲಿಂ ಓಲೈಕೆ ಕಾರಣ. ಹಿಂದೂ ಸಮುದಾಯ ಸರಕಾರದಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಮತ್ತು ಮುಸ್ಲಿಂ ಸಮುದಾಯದಿಂದ ಪೀಡಿತಗೊಂಡಿದೆ. 30 ವರ್ಷಗಳ ಕಾಂಗ್ರೆಸ್ ಆಡಳಿತ, 34 ವರ್ಷಗಳ ಎಡಪಂಥೀಯ ಆಡಳಿತ, 10 ವರ್ಷಗಳ ಮಮತಾ ಆಡಳಿತ ಹಿಂದುಗಳ ಪಾಲಿಗೆ ದುರಂತವಲ್ಲದೆ ಮತ್ತೇನೂ ಅಲ್ಲ.
ಚುನಾವಣಾ ಫಲಿತಾಂಶವನ್ನು ಹೊರತುಪಡಿಸಿಯೂ, ಹಿಂದೂ ಸಮಾಜದ ಮೇಲೆ ಹಿಂಸೆ ಪೂರ್ವ ನಿಗದಿತವಾಗಿತ್ತು. ಚುನಾವಣೆಯ ಸಂದರ್ಭದಲ್ಲೇ ಇದಕ್ಕೆ ಸ್ಕ್ರಿಪ್ಟ್ ಬರೆಯಲಾಗಿತ್ತು. ಚುನಾವಣೆ ಫಲಿತಾಂಶ ಘೋಷಣೆಯಾದ ತಕ್ಷಣವೇ ಹಿಂದುಗಳ ಮೇಲೆ ಹಿಂಸೆ ಪ್ರಾರಂಭವಾಯಿತು. ಆಡಳಿತರೂಢ ಟಿಎಂಸಿ ಪಕ್ಷದ ಗೂಂಡಾಗಳು ಗಾಝ್ವಾ-ಇ-ಹಿಂದ್ ಜಿಹಾದಿ ಗೂಂಡಾಗಳೊಂದಿಗೆ ಸೇರಿ ಸಂಘ, ಬಿಜೆಪಿ, ವಿಎಚ್ಪಿ, ಬಜರಂಗದಳ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದರು, ಭಯಾನಕ ಹಿಂಸಾಚಾರವನ್ನು ಭುಗಿಲೆಬ್ಬಿಸಿದರು. ತೃಣಮೂಲ ವಿರುದ್ಧ ಮತ ಚಲಾಯಿಸಿದ ಮತ್ತು ಬಿಜೆಪಿಯನ್ನು ಬೆಂಬಲಿಸಿದ ಹಿಂದೂಗಳನ್ನು ಮುಖ್ಯವಾಗಿ ಗುರಿಪಡಿಸಲಾಯಿತು. ಬೈಕ್ ಮೂಲಕ ಆಗಮಿಸಿದ ಟಿಎಂಸಿ ಮತ್ತು ಜಿಹಾದಿ ಗುಂಪುಗಳು ಬಾಂಬ್, ಗನ್, ಖಡ್ಗ ಝಳಪಿಸುತ್ತಾ ವಿದ್ವಂಸಕ ಕೃತ್ಯ ನಡೆಸಿದರು, ಕಳ್ಳತನ, ಹಿಂದೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ, ಅತ್ಯಾಚಾರ ಮುಂತಾದ ಅನಾಚಾರಗಳನ್ನು ನಡೆಸಿದರು. ದೇಗುಲಗಳ ಮೇಲೆ ದಾಳಿ ನಡೆಸಿದರು.
ಈ ಅನಾಗರಿಕ ಹಿಂಸಾಚಾರದ ಕಾರಣದಿಂದಾಗಿ 3600 ನಗರಗಳಲ್ಲಿ, ಪಟ್ಟಣಗಳಲ್ಲಿ ಮತ್ತು ಗ್ರಾಮಗಳಲ್ಲಿ 40,000 ಹಿಂದೂಗಳು ಸಂತ್ರಸ್ತರಾಗಿದ್ದಾರೆ. 11000 ಹಿಂದೂಗಳು ಮನೆ ಕಳೆದುಕೊಂಡಿದ್ದಾರೆ. 142 ಮಹಿಳೆಯರ ಮೇಲೆ ಅಮಾನವೀಯ ದಾಳಿ ನಡೆದಿದೆ. 10-12 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಸುಮಾರು ಐದು ಸಾವಿರ ಮನೆಗಳನ್ನು ಧ್ವಂಸ ಮಾಡಲಾಗಿದೆ. 7 ಕಡೆಗಳಲ್ಲಿ ಹಿಂದೂ ಬಸ್ತಿಗಳನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ ಮತ್ತು ಅಲ್ಲಿ ರಾತೋರಾತ್ರಿ ಮಸೀದಿಯನ್ನು ನಿರ್ಮಾಣ ಮಾಡಲಾಗಿದೆ ಅಥವಾ ಜಿಹಾದಿಗಳು ಆ ಪ್ರದೇಶವನ್ನು ವಶಪಡಿಸಿಕೊಂಡಿದ್ದಾರೆ. ಸುಂದರ್ಬನ್ ಪ್ರದೇಶದಲ್ಲಿ ಸುಮಾರು 200 ಮನೆಗಳನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ. ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರನ್ನು ಅಲ್ಲಿ ಗುರಿಯಾಗಿಸಲಾಗಿದೆ. 26 ಜನರು ಕೊಲೆಯಾಗಿದ್ದಾರೆ, ಇವರಲ್ಲಿ 15 ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಸೇರಿದವರು. ಬಸ್ತಿ ಮೇಲೆ ದಾಳಿಯಾದ 1627 ಘಟನೆಗಳು ನಡೆದಿವೆ. ಮೀನು ಸಾಕಾಣಿಕೆ ಕೇಂದ್ರಗಳಿಗೆ ವಿಷಪ್ರಾಶನ ಮಾಡಿದ ಘಟನೆ ನಡೆದಿದೆ. ಹಿಂದೂಗಳ ಆಧಾರ್ ಕಾರ್ಡ್, ವೋಟರ್ ಐಡಿ, ರೇಶನ್ ಕಾರ್ಡ್ ಮುಂತಾದ ಗುರುತಿನ ಚೀಟಿಗಳನ್ನು ಕಿತ್ತುಕೊಳ್ಳಲಾಗಿದೆ. ಇವುಗಳನ್ನು ಕಳ್ಳಸಾಗಾಣಿಕೆ ಅಥವಾ ಅಕ್ರಮ ವಲಸಿಗರ ನೆಲೆಸುವಿಕೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ.
ಇಷ್ಟೆಲ್ಲ ವಿಧ್ವಂಸಕ ಕೃತ್ಯ ನಡೆದರೂ ಅಲ್ಲಿನ ಪೊಲೀಸ್ ಮತ್ತು ಆಡಳಿತ ಕೈಕಟ್ಟಿ ಕುಳಿತಿದೆ ಅಥವಾ ಮೌನವೀಕ್ಷಕನಾಗಿದೆ. ರಾಜ್ಯ ಸರಕಾರವೇ ಈ ಹಿಂಸೆಯ ನೇತೃತ್ವ ವಹಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯವನ್ನು ಸರಕಾರ ಸಂಪೂರ್ಣವಾಗಿ ಮರೆತಿದೆ. ಹೈ ಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ ನಲ್ಲೂ ಸರಕಾರ ಹಿಂಸೆ ನಡೆದಿದೆ ಎಂಬುದನ್ನು ಅಲ್ಲಗೆಳೆದಿದೆ.
ಮೂರು ಸಾವಿರಕ್ಕೂ ಅಧಿಕ ರಾಷ್ಟ್ರೀಯತಾವಾದಿ ಸಂಘಟನೆಗಳ ಕಾರ್ಯಕರ್ತರು ದಾಳಿಗೆ ಗುರಿಯಾಗಿದ್ದಾರೆ. ಈ ಕಾರ್ಯಕರ್ತರಿಂದ ಅಫಿಡವಿಟ್ ಅನ್ನು ಬಲವಂತವಾಗಿ ಕಿತ್ತುಕೊಳ್ಳಲಾಗಿದೆ, ಟಿಎಂಸಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆಯಲ್ಲಿ ಅವರನ್ನು ಸಿಲುಕಿಸಲಾಗಿದೆ. ದಾಳಿ ನಡೆಸಬಾರದು ಎಂದಾದರೆ ಹಣ ಕೊಡಿ ಎಂದು ಹಿಂದೂಗಳನ್ನು ಪೀಡಿಸಲಾಗುತ್ತಿದೆ. ಹಿಂಸೆಗೆ ಹೆದರಿ ಪಲಾಯನ ಮಾಡಿದ ಹಿಂದೂಗಳು ಮತ್ತೆ ತಮ್ಮ ಮನೆಗೆ ಮರಳಬೇಕಾದರೆ ಭಾರೀ ಮೊತ್ತ ನೀಡಬೇಕು ಎಂದು ಬೆದರಿಕೆ ಹಾಕಲಾಗುತ್ತಿದೆ. ಪೀಡಿತರಿಗೆ ಸಹಾಯ ಮಾಡಲು ಮುಂದಾಗುತ್ತಿರುವವರು ಕೂಡ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಇಂದು ಬಂಗಾಳದ ಹಿಂದುಗಳು ಬದುಕಲು ಜಝಿಯಾ ಪಾವತಿಸುತ್ತಿದ್ದಾರೆ. ಪೋಲಿಸ್ ವ್ಯವಸ್ಥೆ ಮೂಕ ಪ್ರೇಕ್ಷಕನಾಗಿದೆ ಮತ್ತು ಗೂಂಡಾಗಳ ರಕ್ಷಕನಾಗಿದೆ. ದೌರ್ಜನ್ಯದ ವಿರುದ್ಧ ದೂರು ಸಲ್ಲಿಸಿದವರ ಮೇಲೆಯೇ ಪ್ರಕರಣ ದಾಖಲು ಮಾಡಲಾಗುತ್ತಿದೆ. ಓರ್ವ ಕಾರ್ಯಕರ್ತನ ಮನೆ ಮೇಲೆ ಬಾಂಬ್ ಎಸೆಯಲಾಗಿದೆ, ಇದರಿಂದ ಆತನ ತಂದೆ ಮತ್ತು ಸಹೋದರನ ಸಾವಾಗಿದೆ. ಆದರೆ ಇಂದು ಅದೇ ಕಾರ್ಯಕರ್ತನ ಮೇಲೆ ಮನೆಯಲ್ಲಿ ಬಾಂಬ್ ತಯಾರಿಸಿದ ಪ್ರಕರಣವನ್ನು ದಾಖಲಿಸಲಾಗಿದೆ. ಈ ಎಲ್ಲಾ ಹಿಂಸೆಯ ಕಾರಣದಿಂದಾಗಿ ಸುಮಾರು 2000 ಹಿಂದುಗಳು ತಮ್ಮ ಸ್ಥಳಗಳಿಂದ ಬೇರೆಡೆ ಪಲಾಯನ ಮಾಡಿದ್ದಾರೆ ಮತ್ತು ಅಸ್ಸಾಂ, ಒಡಿಶಾ, ಜಾರ್ಖಂಡ್ಗಳಲ್ಲಿ ನಿರಾಶ್ರಿತರಾಗಿ ಬದುಕುತ್ತಿದ್ದಾರೆ. ಈ ಎಲ್ಲಾ ದುಃಸ್ಥಿತಿಗಳ ಅವಲೋಕನ ನಡೆಸಿದ ರಾಜ್ಯಪಾಲರು ಗದ್ಗದಿತರಾಗಿ ‘ನನ್ನ ರಾಜ್ಯದ ಜನಗಳು ಬದುಕಲು ಮತಾಂತರವಾಗಬೇಕಾಗಿದೆ’ ಎಂಬ ಹೇಳಿಕೆ ನೀಡಿದ್ದಾರೆ. ಬಂಗಾಳ ಹಿಂದೂಗಳ ಪಾಲಿಗೆ ಜ್ವಾಲಾಮುಖಿ ಆಗಿದೆ ಎಂದು ಅವರು ಹೇಳಿದ್ದಾರೆ.
ಇಷ್ಟೆಲ್ಲಾ ದೌರ್ಜನ್ಯ ನಡೆದರೂ ಬಂಗಾಳದ ಹಿಂದುಗಳು ಸೋತಿಲ್ಲ, ಸೋಲುವುದಿಲ್ಲ. 10-12 ಜಿಲ್ಲೆಗಳಲ್ಲಿ ಹಿಂದೂಗಳು ತೀವ್ರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಹಿಂದೂ ಸಮಾಜ ಎದೆಗುಂದಿಲ್ಲ. ‘ಸುವರ್ಣ ಬಂಗಾಳ’ ನಿರ್ಮಿಸುವ ಸಂಕಲ್ಪ ತೊಟ್ಟಿದ್ದಾರೆ. ತನ್ನ ಮನೆ, ತನ್ನ ಕುಟುಂಬ, ತನ್ನ ಜೀವನ, ತನ್ನ ಧರ್ಮವನ್ನು, ತನ್ನ ಸಹೋದರ ಸಹೋದರಿಯರನ್ನು ರಕ್ಷಿಸಲು ಅಲ್ಲಿನ ಹಿಂದೂ ಹೋರಾಡುತ್ತಿದ್ದಾನೆ. ಆತನಿಗೆ ಬಂಗಾಳ ಗಡಿ ರಾಜ್ಯ ಎಂಬುದು ತಿಳಿದಿದೆ. ಎಲ್ಲದಕ್ಕೂ ಮಿಗಿಲಾಗಿ ಅತಿಸೂಕ್ಷ್ಮ ಸತ್ಯವೆಂದರೆ, 60 ಕಿಲೋಮೀಟರ್ ಉದ್ದದ ಮತ್ತು 22 ಕಿಲೋಮೀಟರ್ ಅಗಲದ ಸಿಲಿಗುರಿ ಕಾರಿಡಾರ್, ಇದನ್ನು ‘ಚಿಕನ್ ನೆಕ್’ ಎಂದು ಕರೆಯಲಾಗುತ್ತದೆ. ಇದು ದೇಶದ ಉಳಿದ ಭಾಗವನ್ನು ಭಾರತದ ಒಂದು ಸಹೋದರ ರಾಜ್ಯ ಮತ್ತು ಈಶಾನ್ಯದ ಏಳು ಸಹೋದರಿ ರಾಜ್ಯಗಳೊಂದಿಗೆ ಬೆಸೆಯುತ್ತದೆ. ನಮ್ಮ ನೆರೆಹೊರೆಯ ರಾಷ್ಟ್ರಗಳು ಇದನ್ನು ತುಂಡರಿಸಿ ಭಾರತದ ಮುಖ್ಯವಾಹಿನಿಯಿಂದ ಬೇರ್ಪಡಿಸಬಹುದು ಮತ್ತು ವಶಪಡಿಸಬಹುದು. ಒಂದು ವೇಳೆ ಪಶ್ಚಿಮ ಬಂಗಾಳ ತನ್ನ ಹಿಂದೂ ಬಹುಸಂಖ್ಯಾತತೆಯನ್ನು ಕಳೆದುಕೊಂಡರೆ ನಮ್ಮ ಶತ್ರುಗಳು ಈ ಕಾರ್ಯದಲ್ಲಿ ಯಶಸ್ವಿಯಾಗಬಹುದು. ಬಂಗಾಳ ಹಿಂದುವಿನ ಇಚ್ಛಾಶಕ್ತಿ ದೃಢವಾಗಿದೆ, ಎಲ್ಲಾ ಅಡೆತಡೆಯ ನಡುವೆ ಎರಡು ವರ್ಷಗಳ ಹಿಂದೆ ನಡೆದ ರಾಮನವಮಿ ಮೆರವಣಿಗೆಯಲ್ಲಿ 35 ಲಕ್ಷ ಹಿಂದೂಗಳು ಭಾಗಿಯಾಗಿದ್ದರು.
ಚುನಾವಣೆ ಫಲಿತಾಂಶದಲ್ಲಿ ಹಿಂದುವಿನ ದೃಢನಿಶ್ಚಯ ಕಂಡುಬಂದಿದೆ. ವಿಧಾನಸಭೆಯಲ್ಲಿ ಮೂರು ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಈಗ 77 ಸ್ಥಾನಗಳನ್ನು ಗೆದ್ದುಕೊಂಡಿದೆ. 50 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕೇವಲ ಮೂರು ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ. 2019ರಲ್ಲಿ ಬಿಜೆಪಿ ಶೇಕಡ 40 ರಷ್ಟು ಮಾತ್ರ ಪಡೆದಿದೆ. ಕಾಂಗ್ರೆಸ್ ಮತ್ತು ಸಿಪಿಎಂ ಮತಗಳು ಟಿಎಂಸಿಗೆ ವರ್ಗಾವಣೆಯಾದರೂ, ಬಿಜೆಪಿ ಈ ಬಾರಿ 38.13% ಮತಗಳನ್ನು ಪಡೆದಿದೆ. 30 ವರ್ಷಗಳ ಕಾಲ ಆಡಳಿತ ಹೊಂದಿದ್ದ ಕಾಂಗ್ರೆಸ್ ಮತ್ತು 34 ವರ್ಷಗಳ ಕಾಲ ಆಡಳಿತ ಹೊಂದಿದ್ದ ಸಿಪಿಎಂ ಶೂನ್ಯ ಸಾಧನೆ ಮಾಡಿದೆ. ಹಿಂದೂ ಭಾವನೆಗಳನ್ನು ಪ್ರತಿಫಲಿಸುವ ಬಿಜೆಪಿ ಎರಡನೇ ಅತಿದೊಡ್ಡ ಪಕ್ಷವಾಗಿ ರಾಜ್ಯದಲ್ಲಿ ಹೊರಹೊಮ್ಮಿದೆ.
ಬಂಗಾಳದ ಮಹಾಭಾರತ ಕ್ಷೇತ್ರದಲ್ಲಿ ಭಾರತೀಯ ಪ್ರಜಾಪ್ರಭುತ್ವ ದೃಢವಾಗಿ ನಿಂತಿದ್ದು, ದಾಳಿಗಳನ್ನು ತಡೆಯಲು, ಅಪರಾಧಿಗಳನ್ನು ಶಿಕ್ಷಿಸಲು ಮತ್ತು ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಬದ್ಧವಾಗಿದೆ. ಬಂಗಾಳದಲ್ಲಿ ನಡೆಯುತ್ತಿರುವ ಈ ದಾಳಿಗಳನ್ನು ತಡೆಯಲು ನ್ಯಾಯಾಂಗ ಮತ್ತು ಇತರ ಸಂಸ್ಥೆಗಳು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಮಾನವ ಹಕ್ಕುಗಳ ಆಯೋಗ, ದಲಿತ ಆಯೋಗ, ಮಹಿಳಾ ಆಯೋಗ, ಮಕ್ಕಳ ಹಕ್ಕುಗಳ ಆಯೋಗ, ಪಶ್ಚಿಮ ಬಂಗಾಳದ ರಾಜ್ಯಪಾಲರು, ಕೇಂದ್ರ ಸರ್ಕಾರ ತಮ್ಮ ಸಾಂವಿಧಾನಿಕ ಅಧಿಕಾರವನ್ನು ಬಳಸಿ ಬಂಗಾಳದ ಹಿಂಸೆಯನ್ನು ತಡೆಯುವ ಪ್ರಯತ್ನ ನಡೆಸುತ್ತಿದೆ.
ಬಂಗಾಳದ ಹಿಂದುಗಳು ತಮ್ಮ ದೇಶ-ಧರ್ಮವನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ಅವರ ಪರವಾಗಿ ನಿಲ್ಲುವುದು ಮತ್ತು ಅವರಿಗೆ ಸಹಾಯ ಮಾಡಲು ಸಿದ್ಧರಾಗಿರುವುದು ಇಡೀ ದೇಶದ ಕರ್ತವ್ಯ. ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದು, ಮನೆ ಕಳೆದುಕೊಂಡ ಹಿಂದೂಗಳಿಗೆ ಮನೆ ನಿರ್ಮಿಸುವುದು, ಅವರ ಬದುಕನ್ನು ಮರಳಿ ಕಟ್ಟಿಕೊಡುವುದು, ನೋವುಂಡವರಿಗೆ ಸಾಂತ್ವಾನ ನೀಡುವುದು, ಸುಳ್ಳು ಪ್ರಕರಣಕ್ಕೆ ಒಳಗಾದವರಿಗೆ ನೆರವು ನೀಡುವುದು, ಪ್ರಾಣ ಕಳೆದುಕೊಂಡ ಹಿಂದೂಗಳ ಕುಟುಂಬಕ್ಕೆ ನೆರವಾಗುವುದು ಇಡೀ ಸಮಾಜದ ಕರ್ತವ್ಯವಾಗಿದೆ. ಈ ಪೀಡಿತ ಹಿಂದೂಗಳು ಕೊರೋನಾ ಸಾಂಕ್ರಾಮಿಕದ ವಿರುದ್ಧವೂ ಹೋರಾಡುತ್ತಿದ್ದಾರೆ. ನಾವೆಲ್ಲ ನಾಗರಿಕರು ದೇಶವ್ಯಾಪಿಯಾಗಿ ನಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನಾ ಪಿಡಿತರಿಗೆ ಸೇವೆ ಸಲ್ಲಿಸುತ್ತಿದ್ದೇವೆ, ಅದೇ ರೀತಿ ಬಂಗಾಳವನ್ನು ಕೂಡ ವಿಪತ್ತಿನಿಂದ ರಕ್ಷಣೆ ಮಾಡಬೇಕಾಗಿದೆ.
ಬಂಗಾಳ ಮತ್ತು ಅಲ್ಲಿನ ಹಿಂದೂ ಸಮಾಜಕ್ಕೆ ರಕ್ಷಣೆ, ಪುನರ್ವಸತಿ ಮತ್ತು ನೆರವು ನೀಡುವುದು ಇಡೀ ದೇಶದ ಕರ್ತವ್ಯ. ಈ ನಿಟ್ಟಿನಲ್ಲಿ ದೇಶವಾಸಿಗಳು ಮುಂದೆ ಬಂದು, ಪಶ್ಚಿಮ ಬಂಗಾಳದ ಪೀಡಿತ ಹಿಂದೂ ಸಮಾಜಕ್ಕೆ ಮುಕ್ತ ಮನಸ್ಸಿನ ನೆರವು ನೀಡಬೇಕು, ಈ ಮೂಲಕ ಅಲ್ಲಿನ ಹಿಂದೂಗಳಿಗೆ ಭಾರತೀಯ ಸಮಾಜ ತಮ್ಮೊಂದಿಗೆ ನಿಂತಿದೆ ಎಂಬ ಧೈರ್ಯ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಕರೆ ಕೊಟ್ಟಿದೆ.
ಬಂಗಾಳದ ಸಂತ್ರಸ್ತ ಹಿಂದೂಗಳಿಗೆ ಹಣಕಾಸು ನೆರವು ನೀಡಲು ಇರುವ ಬ್ಯಾಂಕ್ ವಿವರ:-
Vishva Hindu Parishad
A/c no: 04072010017250
Bank: Punjab National Bank
Branch: Basant Lok, New Delhi
IFSC code: PUNB 0040710
PAN: AAATV0222D
• 80 G Not available
Bharat Kalyan Pratisthan
A/c No.: 04072010019960
Bank: Punjab National Bank
Branch: Basantlok, New Delhi
IFSC Code: PUNB 0040710
PAN: AAATB 0428P
80 G AVAILABLE
[pdf-embedder url=”https://news13.in/wp-content/uploads/2021/05/The-Struggle-of-Hindu-in-Bengal.pdf” title=”The Struggle of Hindu in Bengal”]
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.