ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಮ್ ಪುರ ಜಿಲ್ಲೆಯ ಗ್ರಾಮೀಣ ಪ್ರದೇಶದ 120 ವರ್ಷದ ಮಹಿಳೆಯೊಬ್ಬರು ಕೋವಿಡ್-19 ಲಸಿಕೆಯನ್ನು ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹಿರಿಯಜ್ಜಿಯ ಕಾರ್ಯಕ್ಕೆ ಮೆಚ್ಚಿ ನಾರ್ದನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ.ಕೆ ಜೋಶಿ ಅವರಿಗೆ ಸನ್ಮಾನ ಮಾಡಿದ್ದಾರೆ.
120 ವರ್ಷದ ಧೋಲಿ ದೇವಿ ಅವರು ಲಸಿಕೆ ಪಡೆದ ಹಿರಿಯಜ್ಜಿಯಾಗಿದ್ದಾರೆ. ಶುಕ್ರವಾರ ಅವರ ಮನೆಗೆ ತೆರಳಿ ವೈ.ಕೆ ಜೋಶಿ ಸನ್ಮಾನ ಮಾಡಿದ್ದಾರೆ.
ಕೆಲ ವರ್ಗದ ಜನರಲ್ಲಿ ಈಗಲೂ ಲಸಿಕೆಯ ಬಗ್ಗೆ ತಪ್ಪು ಅಭಿಪ್ರಾಯ ಇದೆ. ಕೆಲ ಯುವಕರು ಕೂಡ ಲಸಿಕೆ ಪಡೆಯಲು ಹಿಂಜರಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ 120 ವರ್ಷವಾದರೂ ಲಸಿಕೆ ಪಡೆಯುವ ಮೂಲಕ ಧೋಲಿ ದೇವಿ ಅವರು ಇತರರಿಗೆ ಮಾದರಿಯಾಗಿದ್ದಾರೆ. ಮೇ 17 ರಂದು ಅವರು ಲಸಿಕೆ ಡೋಸ್ ಪಡೆದಿದ್ದಾರೆ.
“ಸಂಕ್ರಾಮಿಕ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಧೋಲಿ ದೇವಿಯವರು ಭರವಸೆಯನ್ನು ಹೊರಹೊಮ್ಮಿಸಿದ್ದಾರೆ. ಅವರಿಂದ ಪ್ರೇರಣೆ ಪಡೆದು ಇದೀಗ ಅವರ ಇಡೀ ಗ್ರಾಮ ಲಸಿಕೆ ಪಡೆಯಲು ಮುಂದಾಗಿದೆ” ಎಂದು ವೈ.ಕೆ ಶರ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.