News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಆಕ್ಸಿಜನ್ ಆನ್ ವೀಲ್ಸ್’ ಅಭಿವೃದ್ಧಿಪಡಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಈಸ್ಟರ್ನ್ ನೇವಲ್ ಕಮಾಂಡ್ (ಇಎನ್‌ಸಿ) ಅಡಿಯಲ್ಲಿ ನೇವಲ್ ಡಾಕ್ ಯಾರ್ಡ್ ವಿಶಾಖಪಟ್ಟಣಂ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ‘ಆಕ್ಸಿಜನ್ ಆನ್ ವೀಲ್ಸ್’ ಎಂದು ಕರೆಯಲ್ಪಡುವ ಮೊಬೈಲ್ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಗುರುವಾರ ಅನಾವರಣಗೊಳಿಸಲಾಗಿದೆ.

ನೌಕಾ ಡಾಕ್ ಯಾರ್ಡ್ ತಾಂತ್ರಿಕ ತಂಡವು ಪ್ರತಿ ನಿಮಿಷಕ್ಕೆ 100 ಲೀಟರ್ ಆಮ್ಲಜನಕ ಉತ್ಪಾದನಾ ಸಾಮರ್ಥ್ಯದ ಎರಡು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಭಿವೃದ್ಧಿಪಡಿಸಿದೆ, ಯಾವುದೇ ಆಸ್ಪತ್ರೆಯ ಕೊಳವೆ ವ್ಯವಸ್ಥೆಗೆ ನೇರವಾಗಿ ಆಮ್ಲಜನಕ ಒದಗಿಸಲು ಸಾಧ್ಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಟ್ರೇಲರ್‌ಗಳಲ್ಲಿ ಅಳವಡಿಸಲಾಗಿರುವ ಆಮ್ಲಜನಕ ಘಟಕಗಳನ್ನು ಸುಲಭವಾಗಿ ಕುಗ್ರಾಮಗಳ ಆಸ್ಪತ್ರೆಗಳಿಗೂ ಸಾಗಿಸಬಹುದು ಮತ್ತು ಆಸ್ಪತ್ರೆಯ ಸ್ಥಿರ ಆಮ್ಲಜನಕ ಕೊಳವೆ ವ್ಯವಸ್ಥೆಗೆ ಇದನ್ನು ಸಂಪರ್ಕಿಸಬಹುದು, 16 ಹಾಸಿಗೆಗಳವರೆಗೆ ಇದರಿಂದ ಆಮ್ಲಜನಕವನ್ನು ಪೂರೈಸಬಹುದಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top