News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಲ್ಲಿ ಶೇಕಡಾ 86.23 ಕ್ಕೆ ಸುಧಾರಿಸಿದೆ ಕೋವಿಡ್‌ ಚೇತರಿಕೆ ದರ

ನವದೆಹಲಿ: ದೇಶವು ಸಕ್ರಿಯ ಕೋವಿಡ್‌ ಪ್ರಕರಣಗಳು ಮತ್ತು ಹೊಸ ಕೋವಿಡ್-19 ಪ್ರಕರಣಗಳಲ್ಲಿ ಕುಸಿತವನ್ನು ದಾಖಲಿಸುತ್ತಿದೆ. ಇದರೊಂದಿಗೆ, ದೇಶದಲ್ಲಿ ಚೇತರಿಕೆ ದರ ನಿರಂತರವಾಗಿ ಸುಧಾರಿಸುತ್ತಿದೆ. ಆದರೆ ಇನ್ನೂ, ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೊಸ ಪ್ರಕರಣಗಳಲ್ಲಿ ಹೆಚ್ಚಳವನ್ನು ದಾಖಲಿಸುತ್ತಿವೆ.

ನಿನ್ನೆ ಅತಿ ಹೆಚ್ಚು ಚೇತರಿಕೆಯನ್ನು ಭಾರತ ದಾಖಲಿಸಿದ್ದು, 24 ಗಂಟೆಗಳಲ್ಲಿ 3.89 ಲಕ್ಷ ರೋಗಿಗಳು ಕೋಚಿಡ್-19 ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆ ದರವು ದೇಶದಲ್ಲಿ ಶೇಕಡಾ 86.23 ಕ್ಕೆ ಸುಧಾರಿಸಿದೆ. ಇಲ್ಲಿಯವರೆಗೆ, 2. 19 ಕೋಟಿ ರೋಗಿಗಳು ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣ ಶೇಕಡಾ 12.65 ರಷ್ಟು ಇದೆ ಮತ್ತು ಇದು ನಿರಂತರವಾಗಿ ಕ್ಷೀಣಿಸುತ್ತಿದೆ. ದೇಶದಲ್ಲಿ ಪ್ರಸ್ತುತ 32. 26 ಲಕ್ಷ ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ  ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತವು ಈವರೆಗೆ 18 ಕೋಟಿ 58 ಲಕ್ಷ ಕೋವಿಡ್ ಲಸಿಕೆ ಪ್ರಮಾಣವನ್ನು ಫಲಾನುಭವಿಗಳಿಗೆ ನೀಡಿದೆ. ಕಳೆದ 24 ಗಂಟೆಗಳಲ್ಲಿ ಫಲಾನುಭವಿಗಳಿಗೆ 13 ಲಕ್ಷ 12 ಸಾವಿರ ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು  ಸಚಿವಾಲಯ ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top