ನವದೆಹಲಿ : ಈಗಿರುವ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಿರಿಯರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ, ಸಾಮಾಜಿಕ ನ್ಯಾಯ ಸಚಿವಾಲಯವು ಎಲ್ಡರ್ ಲೈನ್ ಯೋಜನೆಯಡಿ ಪ್ರಮುಖ ರಾಜ್ಯಗಳಲ್ಲಿ ರಾಜ್ಯವಾರು ಕಾಲ್ ಸೆಂಟರ್ಗಳನ್ನು ಪ್ರಾರಂಭಿಸಿದೆ. ಈ ಸೌಲಭ್ಯವನ್ನು ಈಗಾಗಲೇ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು ಮತ್ತು ಕರ್ನಾಟಕದ 5 ಪ್ರಮುಖ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ತೆಲಂಗಾಣದಲ್ಲಿ, ಈ ಸೌಲಭ್ಯವು ಒಂದು ವರ್ಷದ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ.
2021 ರ ಮೇ ಅಂತ್ಯದ ವೇಳೆಗೆ ಎಲ್ಲಾ ರಾಜ್ಯಗಳಲ್ಲಿಯೂ ಅವುಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ.
ಉಚಿತ ಸಹಾಯವಾಣಿ ಸಂಖ್ಯೆ 14567 ಮೂಲಕ ಈ ಸಹಾಯ ಕೇಂದ್ರ (ಕಾಲ್ ಸೆಂಟರ್) ಗಳಿಗೆ ಕರೆ ಮಾಡಬಹುದು. ಎಲ್ಲಾ ಹಿರಿಯರಿಗೆ ಈ ಸೌಲಭ್ಯವನ್ನು ಬಳಸಲು ಸೂಚಿಸಬಹುದು. ಎಲ್ಡರ್ ಲೈನ್ ಟಾಟಾ ಟ್ರಸ್ಟ್ ಮತ್ತು ಎನ್ ಎಸ್ ಇ ಫೌಂಡೇಶನ್ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಸಹಾಯ ಕೇಂದ್ರಗಳ ಪ್ರಸ್ತುತ ಸ್ಥಿತಿಯ ವಿವರ ಈ ಕೆಳಗಿನಂತಿದೆ:
ರಾಜ್ಯಗಳು | ಪ್ರಾರಂಭವಾದ ದಿನಾಂಕ | ಅಧಿಕಾರಿಗಳ ಸಂಖ್ಯೆ | ಕ್ರಿಯಾತ್ಮಕ ಕರೆಗಳ ಸಂಖ್ಯೆ | ಸೇವಾ ವಿನಂತಿಯ ಸಂಖ್ಯೆ | ಸೇವಾ ವಿನಂತಿಯ ಮುಗಿಸಲಾದ ಸಂಖ್ಯೆ |
ತಮಿಳು ನಾಡು | 28 ಏಪ್ರಿಲ್ l 2021 | 8 | 71 | 25 | 15 |
ಮಧ್ಯ ಪ್ರದೇಶ | 28 ಏಪ್ರಿಲ್ 2021 | 4 | 163 | 12 | 5 |
ರಾಜಸ್ಥಾನ | 28 ಏಪ್ರಿಲ್ 2021 | 4 | 25 | 8 | 3 |
ಕರ್ನಾಟಕ | 28 ಏಪ್ರಿಲ್ 2021 | 3 | 122 | 6 | 1 |
ಉತ್ತರ ಪ್ರದೇಶ | 14 ಮೇ 2021 | 6 | 94 | 13 | 7 |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.