News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಲಸಿಕೆಯ 2ನೇ ಡೋಸ್‌ ವಿಳಂಬದಿಂದ ಮೊದಲ ಡೋಸ್‌ ನಿಷ್ಪ್ರಯೋಜಕವಾಗುವುದಿಲ್ಲ: ತಜ್ಞರು

ಮುಂಬೈ: ಕೊರೋನಾವೈರಸ್‌ ವಿರುದ್ಧ ನೀಡಲಾಗುತ್ತಿರುವ ಲಸಿಕೆಯ ಎರಡು ಡೋಸೇಜ್‌ಗಳ ನಡುವಿನ ಅಂತರವು ಶಿಫಾರಸು ಮಾಡಿದ 4-6 ವಾರಗಳಿಗಿಂತ  ಮೀರಿದರೆ ತೊಂದರೆ ಇಲ್ಲ ಅಥವಾ ಲಸಿಕೆಯನ್ನು ಮತ್ತೆ ಮೊದಲಿನಿಂದ ಹಾಕಿಸಿಕೊಳ್ಳಬೇಕಾಗದ ಅಗತ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಕೋವಿಶೀಲ್ಡ್ ಅಥವಾ ಕೊವಾಕ್ಸಿನ್ ಎರಡನೆ ಡೋಸ್‌ ಅನ್ನು ತೆಗೆದುಕೊಳ್ಳುವಲ್ಲಿನ ವಿಳಂಬವು ಮೊದಲ ಡೋಸ್‌ ಅನ್ನು ನಿಷ್ಪ್ರಯೋಜಕವಾಗುವುದಿಲ್ಲ ಎಂದು ತಜ್ಞರು ಒತ್ತಿ ಹೇಳಿದ್ದಾರೆ.

ದೇಶದಲ್ಲಿ ಲಸಿಕೆ ಕೊರತೆ ಕಾಡುತ್ತಿದೆ. ಲಸಿಕೆ ಪಡೆಯಲು ಜನ ತುದಿಗಾಲಲ್ಲಿ ನಿಂತಿರುವ ಪರಿಣಾಮ ಎರಡನೇ ಡೋಸ್‌ ಪಡೆಯುವವರಿಗೂ ಲಸಿಕೆಯ ಕೊರತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅನೇಕ ಜನರು ಎರಡನೇ ಡೋಸ್‌ಗಾಗಿ ಕಾಯುತ್ತಿದ್ದಾರೆ.

“ಎರಡನೇ ಡೋಸ್‌ ಪಡೆಯಲು ವಿಳಂಬವಾಗುತ್ತಿರುವ ಅನೇಕ ಜನರು ಇದ್ದಾರೆ ಎಂದು ನಮಗೆ ತಿಳಿದಿದೆ. ಅವರು ಚಿಂತಿಸಬೇಕಾಗಿಲ್ಲ. ಎರಡು ಡೋಸ್‌ಗಳ ನಡುವಿನ ಅಂತರವು 8-10 ವಾರಗಳಿಗಿಂತಲೂ ಹೆಚ್ಚಾಗಿದ್ದರೂ ಸಮಸ್ಯೆಯಾಗುವುದಿಲ್ಲ, ಯಾವುದೇ ಳ ಸಂದರ್ಭದಲ್ಲಿ ಫಲಾನುಭವಿಗಳು ಎರಡನೇ ಶಾಟ್ ತೆಗೆದುಕೊಳ್ಳಬಹುದು ಮತ್ತು ಅದು ಇನ್ನೂ ಪರಿಣಾಮಕಾರಿಯಾಗಿರುತ್ತದೆ. ಎರಡನೇ ಡೋಸ್ ವಿಳಂಬವಾದ ಕಾರಣ ಲಸಿಕೆಯನ್ನು ಮತ್ತೆ ಪುನರಾವರ್ತಿಸುವ ಅಗತ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top