News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಆಮ್ಲಜನಕ ಪೂರೈಕೆಗೆ $10 ಮಿಲಿಯನ್‌ ಘೋಷಿಸಿದ ಭಾರತೀಯ ಮೂಲದ ಉದ್ಯಮಿ ಖೋಸ್ಲಾ

ನವದೆಹಲಿ: ಭಾರತದ ಮೂಲದ ಸಿರಿವಂತ ಉದ್ಯಮಿ ವಿನೋದ್ ಖೋಸ್ಲಾ ಅವರು ಭಾರತದ ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕವನ್ನು ಪೂರೈಸಲು 10 ಮಿಲಿಯನ್ ಯುಎಸ್‌ಡಿ ಕೊಡುಗೆ ನೀಡುವ ವಾಗ್ದಾನ ಮಾಡಿದ್ದಾರೆ.

ದೇಶದಲ್ಲಿ ಕಾಣಿಸಿಕೊಂಡಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯನ್ನು ಸೃಷ್ಟಿ ಮಾಡಿದೆ. ಇದರಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್ ಕೂಡ ಸೇರಿದೆ.

“ಜೀವಗಳನ್ನು ಆದಷ್ಟು ಬೇಗ ಉಳಿಸುವ ಅವಶ್ಯಕತೆಯಿದೆ, ಏಕೆಂದರೆ ಹೆಚ್ಚಿನ ವಿಳಂಬವು ಹೆಚ್ಚಿನ ಸಾವುಗಳಿಗೆ ಕಾರಣವಾಗಬಹುದು” 66 ವರ್ಷದ ಖೋಸ್ಲ ಹೇಳಿದ್ದಾರೆ.

“20,000 ಆಮ್ಲಜನಕ ಸಾಂದ್ರಕಗಳು, 15,000 ಸಿಲಿಂಡರ್‌ಗಳು, 500 ಐಸಿಯು ಹಾಸಿಗೆಗಳು, 100 ವೆಂಟಿಲೇಟರ್‌ಗಳು, 10,000 ಹಾಸಿಗೆಗಳ ಕೋವಿಡ್ ಕೇಂದ್ರಗಳಿಗೆ ವಿನಂತಿಗಳನ್ನು ಸ್ವೀಕರಿಸಲಾಗಿದೆ .ಇದನ್ನು ನಾವು ಹೆಚ್ಚು ತುರ್ತಾಗಿ ಪೂರೈಕೆ ಮಾಡಬೇಕಾಗಿದೆ” ಎಂದು ಖೋಸ್ಲಾ ಭಾನುವಾರ ಹೇಳಿದ್ದಾರೆ.

ಆಮ್ಲಜನಕ ಪೂರೈಕೆಗಾಗಿ ಆಸ್ಪತ್ರೆಗಳಿಗೆ ಧನಸಹಾಯ ನೀಡಲು ಸನ್ ಮೈಕ್ರೋಸಿಸ್ಟಮ್ಸ್ ಸಹ-ಸಂಸ್ಥಾಪಕರ ಪ್ರಯತ್ನಗಳ ಮುಂದುವರಿದ ಭಾಗವಾಗಿ ಈ ನೆರವು ಘೋಷಿಸಲಾಗಿದೆ.

“ಖೋಸ್ಲಾ ಕುಟುಂಬವು ಗೈವ್ ಇಂಡಿಯಾಗೆ 10 ಮಿಲಿಯನ್ ಯುಎಸ್‌ಡಿ ಮೊತ್ತವನ್ನು ತನ್ನ ಹಿಂದಿನ ಬದ್ಧತೆಯ ಒಂದು ಭಾಗವಾಗಿ ಸೇರಿಸುತ್ತಿದೆ ಮತ್ತು ಇತರರು ಈ ತುರ್ತು ಅಗತ್ಯಕ್ಕೆ ಸೇರುತ್ತಾರೆ ಎಂದು ಆಶಿಸುತ್ತಿದ್ದೇವೆ” ಎಂದು ಖೋಸ್ಲಾ ಹೇಳಿದ್ದಾರೆ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top